ETV Bharat / bharat

₹1.5 ಕೋಟಿ ಖರ್ಚು ಮಾಡಿ ಮನೆ ನಿರ್ಮಾಣ .. ಎಕ್ಸ್​​​ಪ್ರೆಸ್​ ವೇಗೋಸ್ಕರ ಮನೆಯನ್ನೇ ಎತ್ತಿ ಪಕ್ಕಕ್ಕೆ ಇರಿಸುತ್ತಿದ್ದಾನೆ ರೈತ

author img

By

Published : Aug 20, 2022, 9:30 PM IST

ಏಕ್ಸ್​​ಪ್ರೆಸ್​ ವೇ ಕಾಮಗಾರಿಗೋಸ್ಕರ ರೈತನೋರ್ವ ಮನೆ ಉಳಿಸಿಕೊಳ್ಳಲು ಮುಂದಾಗಿದ್ದು, ಅದಕ್ಕೋಸ್ಕರ ಬರೋಬ್ಬರಿ 50 ಲಕ್ಷ ರೂಪಾಯಿ ಖರ್ಚು ಮಾಡ್ತಿದ್ದಾರೆ.

farmer in Punjab Sangrur
farmer in Punjab Sangrur

ಸಂಗ್ರೂರ್​​(ಪಂಜಾಬ್​​): ಬೆವರು ಸುರಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮನೆ ನಿರ್ಮಾಣ ಮಾಡಿದ್ದ ಜಾಗದಲ್ಲಿ ಹೆದ್ದಾರಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದರಿಂದ ಮಂಡ್ಯದ ವ್ಯಕ್ತಿಯೋರ್ವ ಬರೋಬ್ಬರಿ 20 ಲಕ್ಷ ಖರ್ಚು ಮಾಡಿ, 65 ಅಡಿಗಳಷ್ಟು ದೂರಕ್ಕೆ ಮನೆ ಸ್ಥಳಾಂತರ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಪಂಜಾಬ್​ನ ಸಂಗ್ರೂರ್​​​ನ ರೈತನೋರ್ವ ಎರಡು ಅಂತಸ್ತಿನ ಮನೆಯನ್ನು 500 ಅಡಿಗಳಷ್ಟು ದೂರಕ್ಕೆ ಸ್ಥಳಾಂತರ ಮಾಡ್ತಿದ್ದಾರೆ.

ಪಂಜಾಬ್​​ನ ಸಂಗ್ರೂರ್​​​ನಲ್ಲಿ ರೈತ 1.5 ಕೋಟಿ ರೂಪಾಯಿ ಖರ್ಚು ಮಾಡಿ, ಎರಡು ಅಂತಸ್ತಿನ ಸುಂದರವಾದ ಮನೆ ನಿರ್ಮಿಸಿದ್ದಾರೆ. ಈ ಜಾಗದಲ್ಲಿ ಇದೀಗ ದೆಹಲಿ-ಅಮೃತಸರ್​-ಕತ್ರಾ ಎಕ್ಸ್​​​ಪ್ರೆಸ್​ ವೇ ಮಾರ್ಗ ಹಾದು ಹೋಗಲಿದೆ. ಹೀಗಾಗಿ, ಸರ್ಕಾರ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಜೊತೆಗೆ ಅವರಿಗೆ ಪರಿಹಾರದ ಮೊತ್ತವನ್ನು ನೀಡಿದೆ. ಆದರೆ, ಕಷ್ಟಪಟ್ಟು ಕಟ್ಟಿರುವ ಮನೆ ಬಿಟ್ಟು ಹೋಗಲು ಇಷ್ಟವಿಲ್ಲದ ಕಾರಣ ಸುಖ್ವಿಂದರ್​ ಸಿಂಗ್​​ ಇದೀಗ 50 ಲಕ್ಷ ರೂಪಾಯಿ ಖರ್ಚು ಮಾಡಿ, 500 ಅಡಿಗಳಷ್ಟು ದೂರಕ್ಕೆ ಮನೆಯನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈಗಾಗಲೇ 250 ಅಡಿಗಳಷ್ಟು ಮನೆ ಸ್ಥಳಾಂತರಗೊಂಡಿದೆ.

ಕಷ್ಟಪಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಿದ್ದರಿಂದ ಸುಲಭವಾಗಿ ಕೆಡವಲು ಮನಸು ಬರುತ್ತಿಲ್ಲ. ಹೀಗಾಗಿ, ಪಂಜಾಬ್​ ರೈತ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತುಂಬಾ ಕಷ್ಟಪಟ್ಟು ಮನೆ ನಿರ್ಮಾಣ ಮಾಡಲಾಗಿದೆ. ಬಿಟ್ಟು ಹೋಗಲು ಮನಸು ಒಪ್ಪುತ್ತಿಲ್ಲ. ಹೀಗಾಗಿ, ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.

ಎಕ್ಸ್​​​ಪ್ರೆಸ್​ ವೇಗೋಸ್ಕರ ಮನೆಯನ್ನೇ ಎತ್ತಿ ಪಕ್ಕಕ್ಕೆ ಇರಿಸುತ್ತಿದ್ದಾನೆ ರೈತ

ಮನೆ ಸ್ಥಳಾಂತರ ಕಾರ್ಯ ಯಾವ ರೀತಿ: ಜಾಕ್​ಗಳನ್ನು ಮನೆಯ ಕೆಳಭಾಗದಲ್ಲಿ ಅಳವಡಿಸಿಸಲಾಗಿದ್ದು, ಅದರ ನೆರವಿನಿಂದ ಮನೆ ಎಳೆಯಲಾಗ್ತಿದೆ. ಇದಕ್ಕೋಸ್ಕರ ಅನೇಕ ಕಾರ್ಮಿಕರ ಬಳಕೆ ಮಾಡಲಾಗ್ತಿದ್ದು, ಈಗಾಗಲೇ 50 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. 2017ರಲ್ಲಿ ಸುಖ್ವಿಂದರ್ ಸಿಂಗ್​ ಈ ಮನೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದರು. ಈಗಾಗಲೇ ಸಂಪೂರ್ಣವಾಗಿ ಮನೆ ನಿರ್ಮಾಣವಾಗಿದ್ದು ಅದಕ್ಕೋಸ್ಕರ 1.5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: ಒಲ್ಲದ ಮನಸ್ಸಿನಿಂದ ಕನಸಿನ ಮನೆಯ ಸ್ಥಳಾಂತರಕ್ಕೆ ಮುಂದಾದ ಕುಟುಂಬ!

ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ವೇ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದ್ದು, ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೂಲಕ 668 ಕಿ.ಮೀ ದೂರದ ಯೋಜನೆ ಇದಾಗಿದೆ. ಇದಕ್ಕಾಗಿ 37,525 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎಂಬಾತ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥವಾಗಿ ವಿಸ್ತರಿಸುವ ಯೋಜನೆಗೋಸ್ಕರ ತಮ್ಮ ಮನೆ ಸ್ಥಳಾಂತರ ಮಾಡಿದ್ದರು. ಅದಕ್ಕೋಸ್ಕರ ಸುಮಾರು 20 ಲಕ್ಷ ರೂ ಖರ್ಚು ಮಾಡಲಾಗಿತ್ತು. ಇದಾದ ಬಳಿಕ 2020ರಲ್ಲೂ ಹಾಸನದಲ್ಲಿ ಸುರೇಶ್​ ಎಂಬಾತ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕೋಸ್ಕರ ಮನೆ ಸ್ಥಳಾಂತರ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.