ಕರ್ನೂಲ್(ಆಂಧ್ರಪ್ರದೇಶ): ರೈತನೋರ್ವನಿಗೆ ಜಮೀನಿನಲ್ಲಿ ವಜ್ರದ ಹರಳು ಸಿಕ್ಕಿದ್ದು, ಇದರಿಂದ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಚಿನ್ನಾ ಜೊನ್ನಗಿರಿ ಎಂಬ ರೈತನಿಗೆ ಈ ಅದೃಷ್ಟ ಒಲಿದು ಬಂದಿದೆ. ತುಗ್ಗಾಲಿ ಮಂಡಲ ಗ್ರಾಮದ ರೈತನಾಗಿರುವ ಚಿನ್ನಾ ಹೊಲದಲ್ಲಿ ಉಳುಮೆ ಮಾಡ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೊಳೆಯುವ ಕಲ್ಲು ಕಾಣುತ್ತಿದ್ದಂತೆ ಅದನ್ನ ಮನೆಗೆ ತೆಗೆದುಕೊಂಡು ಬಂದು ಸ್ಥಳೀಯ ಚಿನ್ನದ ವ್ಯಾಪಾರಿಗೆ ತೋರಿಸಿದ್ದಾನೆ. ಈ ವೇಳೆ ಅದು ವಜ್ರ ಎಂಬುದು ಖಚಿತಗೊಂಡಿದೆ. ತಕ್ಷಣವೇ ಆತ 1.2 ಕೋಟಿ ರೂ. ನೀಡಿ ಅದನ್ನ ಖರೀದಿ ಮಾಡಿದ್ದಾನೆ.
30 ಕ್ಯಾರೆಟ್ ವಜ್ರ ಇದಾಗಿದ್ದು, ಮಾರುಕಟ್ಟೆಯಲ್ಲಿ 2 ಕೋಟಿ ರೂ. ಮೌಲ್ಯ ಹೊಂದಿದೆ ಎಂದು ಇತರೆ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ. ರೈತನಿಗೆ ವಜ್ರ ಸಿಕ್ಕಿರುವ ಮಾಹಿತಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿದು ಬಂದಿದೆ. 2019ರಲ್ಲೂ ರೈತನೋರ್ವನಿಗೆ 60 ಲಕ್ಷ ಮೌಲ್ಯದ ವಜ್ರದ ಕಲ್ಲು ಸಿಕ್ಕಿತ್ತು ಎಂದು ತಿಳಿದು ಬಂದಿದೆ.