ETV Bharat / bharat

ಮೋದಿ ರ‍್ಯಾಲಿಗೆ ತೆರಳುತ್ತಿದ್ದ ಬಸ್​​ ಡಿಕ್ಕಿ.. ಒಂದೇ ಕುಟುಂಬದ ಮೂವರು ದುರ್ಮರಣ, ಇಬ್ಬರ ಸ್ಥಿತಿ ಗಂಭೀರ - modi rally bus accident

ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಸ್​​​ವೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

car-bus accident in uttarakhand
car-bus accident in uttarakhand
author img

By

Published : Dec 4, 2021, 4:53 PM IST

ಸಹ್ರಾನಪುರ್​(ಉತ್ತರಾಖಂಡ): ಉತ್ತರಾಖಂಡದ ಡೆಹ್ರಾಡೂನ್​​ನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಬಸ್​​​ವೊಂದು ಕಾರಿಗೆ​ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾಗಿದ್ದು, ಉಳಿದಂತೆ ಇಬ್ಬರು ಗಾಯಗೊಂಡಿದ್ದಾರೆ.

ಸಹ್ರಾನಪುರ್​ ಜಿಲ್ಲೆಯ ಮೊಹಾನ್​ ಎಂಬ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಯಲ್ಲಿ ಭಾಗಿಯಾಗಲು ಅನೇಕರನ್ನ ಹೊತ್ತು ಬಸ್​​ವೊಂದು ತೆರಳುತ್ತಿತ್ತು. ಈ ವೇಳೆ ಕಾರ್​​​​ವೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಪ್ರವೀಣ್​ ಚೌಹಾಣ್​(45), ಆತನ ಪತ್ನಿ ಮಂಜು ಚೌಹಾಣ್​(42), ಮಗಳಾದ ಶಿಲ್ಪಾ(22) ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದಂತೆ ವಿಷ್ಣು(17) ಹಾಗೂ ದಿಕ್ಷೀತ್​​(20) ಗಾಯಗೊಂಡಿದ್ದಾರೆ.

ಇದನ್ನೂ ಓದಿರಿ: ಉತ್ತರಾಖಂಡ​​ನಲ್ಲಿ ಪ್ರಧಾನಿ ಮೋದಿ.. 18 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ

ಇವರೆಲ್ಲರೂ ಶಿಲ್ಪಾ ಮದುವೆಗೋಸ್ಕರ ಶಾಪಿಂಗ್ ಮಾಡಲು ಸಹ್ರಾನಪುರ್​ಗೆ ತೆರಳಿದ್ದರು. ಅಲ್ಲಿಂದ ವಾಪಸ್​​ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್​​ ವರಿಷ್ಠಾಧಿಕಾರಿ ಅತುಲ್​​ ಶರ್ಮಾ ತಿಳಿಸಿದ್ದಾರೆ. ಬಸ್​​ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರವೀಣ್ ಚೌಹಾಣ್​​ ಮಕ್ಕಳಾದ ವಿಷ್ಣು ಹಾಗೂ ದಿಕ್ಷೀತ್​ಗೆ ಈಗಾಗಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಡ್ರೈವರ್​ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಪ್ರವೀಣ್ ಚೌಹಾಣ್​​ ಡೆಹ್ರಾಡೂನ್​​ ನೀರು ಸರಬರಾಜು ಇಲಾಖೆಯಲ್ಲಿ ಜೂನಿಯರ್​​ ಇಂಜಿನಿಯರ್​​​​ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.