ETV Bharat / bharat

ಸುಳ್ಳು ರೇಪ್​ ಕೇಸ್ ಆರೋಪ : ಸ್ವಾಮೀಜಿ ಮರ್ಮಾಂಗ ಕತ್ತರಿಸಿದ ಯುವತಿ ವಿರುದ್ಧ ದಾಖಲಾಗಲಿದೆ ಪ್ರಕರಣ - ಕೇರಳ ಸ್ವಾಮೀಜಿ ಮೇಲೆ ಹಲ್ಲೆ

ಪ್ರಕರಣ ರದ್ದುಗೊಳಿಸುವಂತೆ ಕೋರಿ ಗಂಗೇಶ್ವರಾನಂದ ಅವರು ಹೈಕೋರ್ಟ್ ಮೆಟ್ಟಿಲೇರಿದಾಗ ಯುವತಿ ಸ್ವಾಮೀಜಿ ಪರವಾಗಿ ಹೇಳಿಕೆ ನೀಡಿದ್ದರು. ಸ್ವಾಮೀಜಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ, ಅವರ ಶಿಷ್ಯ ಅಯ್ಯಪ್ಪದಾಸ್​ ಎಂಬುವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು..

False rape case
ಸ್ವಾಮೀಜಿ ಮರ್ಮಾಂಗ ಕತ್ತರಿಸಿದ ಯುವತಿ
author img

By

Published : Feb 22, 2022, 6:37 PM IST

ತಿರುವನಂತಪುರಂ(ಕೇರಳ) : ಸ್ವಾಮೀಜಿಯೊಬ್ಬರ ಮೇಲೆ ಸುಳ್ಳು ಅತ್ಯಾಚಾರ ಆರೋಪ ಹೊರಿಸಿ, ಅವರ ಮರ್ಮಾಂಗ ಕತ್ತರಿಸಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೇರಳ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಲು ಯೋಜಿಸುತ್ತಿದೆ.

ಏನಿದು ಪ್ರಕರಣ?: ಇದು ಐದು ವರ್ಷದ ಹಿಂದಿನ ಪ್ರಕರಣ. 2017ರಲ್ಲಿ ಕೇರಳದ ತಿರುವನಂತಪುರಂನ 23 ವರ್ಷದ ಯುವತಿಯೊಬ್ಬಳು ಸ್ವಾಮಿ ಗಂಗೇಶ್ವರಾನಂದ ಅವರು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಅಲ್ಲದೇ ತನ್ನ ಆತ್ಮರಕ್ಷಣೆಗಾಗಿ ಸ್ವಾಮೀಜಿಯ ಮರ್ಮಾಂಗ ಕತ್ತರಿಸಿರುವುದಾಗಿ ತಿಳಿಸಿದ್ದಳು. ಹೀಗಾಗಿ, ಸ್ವಾಮೀಜಿ ವಿರುದ್ಧ ರೇಪ್​ ಕೇಸ್​ ದಾಖಲಿಸಿಕೊಂಡ ತಿರುವನಂತಪುರಂ ಪೊಲೀಸರು ಅವರನ್ನು ಬಂಧಿಸಿದ್ದರು.

ಗಂಗೇಶ್ವರಾನಂದ ಮೊದಲು ತನ್ನ ಮರ್ಮಾಂಗವನ್ನು ತಾವೇ ಕತ್ತರಿಸಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ಬಳಿಕ ತಾವು ನಿದ್ದೆಯಲ್ಲಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ಮಾಡಿ ಕತ್ತರಿಸಿದ್ದರು ಎಂದು ಹೇಳಿಕೆ ನೀಡಿದ್ದರು.

ಪ್ರಕರಣ ರದ್ದುಗೊಳಿಸುವಂತೆ ಕೋರಿ ಗಂಗೇಶ್ವರಾನಂದ ಅವರು ಹೈಕೋರ್ಟ್ ಮೆಟ್ಟಿಲೇರಿದಾಗ ಯುವತಿ ಸ್ವಾಮೀಜಿ ಪರವಾಗಿ ಹೇಳಿಕೆ ನೀಡಿದ್ದರು. ಸ್ವಾಮೀಜಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ, ಅವರ ಶಿಷ್ಯ ಅಯ್ಯಪ್ಪದಾಸ್​ ಎಂಬುವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಳು.

ಇದನ್ನೂ ಓದಿ: Video: ಹರ್ಷ ಕೊಲೆ ಕೇಸ್​.. ಆರೋಪಿ ಬಂಧನಕ್ಕೆ ಪೊಲೀಸರು ಸ್ಕೆಚ್‌ ಹಾಕಿದ್ದ ಸಿಸಿಟಿವಿ ವಿಡಿಯೋ

ನಂತರ ಗಂಗೇಶ್ವರಾನಂದ ಅವರು ಡಿಜಿಪಿಗೆ ಮನವಿ ಸಲ್ಲಿಸಿ, ತಮ್ಮ ವಿರುದ್ಧದ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.

ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಯ್ಯಪ್ಪದಾಸ್​ರನ್ನು ಪ್ರೀತಿಸುತ್ತಿದ್ದ ಯುವತಿ ಇವರಿಬ್ಬರ ಮದುವೆಗೆ ಸ್ವಾಮೀಜಿ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಗಂಗೇಶ್ವರಾನಂದರನ್ನು ಅತ್ಯಾಚಾರ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿದ್ದಾರೆ. ಇವರಿಬ್ಬರೂ ಸೇರಿ ಸ್ವಾಮೀಜಿ ಮೇಲೆ ಹಲ್ಲೆ ಮಾಡಿ ಮರ್ಮಾಂಗ ಕತ್ತರಿಸಿದ್ದಾರೆ ಎಂದು ಕ್ರೈಂ ಬ್ರಾಂಚ್ ಪೊಲೀಸರು ಕಂಡು ಹಿಡಿದಿದ್ದಾರೆ.

ಸದ್ಯಕ್ಕೆ ಯುವತಿ ಹಾಗೂ ಅಯ್ಯಪ್ಪದಾಸ್​ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲು ಕ್ರೈಂ ಬ್ರಾಂಚ್ ಪೊಲೀಸರು ಮುಂದಾಗಿದ್ದಾರೆ. ಆದರೆ, ಸಂಪೂರ್ಣ ಸತ್ಯ ಪ್ರಕರಣದ ಸಂಪೂರ್ಣ ತನಿಖೆ ಮುಗಿದ ಬಳಿಕ ತಿಳಿದು ಬರಲಿದೆ. ಈ ಕೇಸ್​ಗೆ ಮತ್ತಷ್ಟು ಟ್ವಿಸ್ಟ್​ ಸಿಗುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.