ಪುರಿ: ಪ್ರಸಿದ್ಧ ಜಗನ್ನಾಥ ದೇವಸ್ಥಾನಕ್ಕೆ ಪ್ರವೇಶ ಪಡೆಯಲು ಕೆಲವು ಭಕ್ತರಿಗೆ ನಕಲಿ ಕೋವಿಡ್ ಆರ್‌ಟಿ-ಪಿಸಿಆರ್ ವರದಿಗಳನ್ನು ತಯಾರಿಸಿ ಮಾರಾಟ ಮಾಡಿದ ಆರೋಪದ ಮೇಲೆ 12 ಜನರ ತಂಡವನ್ನು ಪುರಿ ಪೊಲೀಸರು ಬಂಧಿಸಿದ್ದಾರೆ.
ಪ್ರತಿ ನಕಲಿ ಆರ್‌ಟಿ-ಪಿಸಿಆರ್ ವರದಿಗೆ ಆರೋಪಿಗಳು 500 ರಿಂದ 700 ರೂ.ವರೆಗೆ ಹಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ದೇವಸ್ಥಾನಕ್ಕೆ ಭೇಟಿ ನೀಡುವ 96 ಗಂಟೆಗಳ ಮೊದಲು ಪಡೆದ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಅಥವಾ ಎರಡೂ ಡೋಸ್ ಪಡೆದವರಿಗೆ ಈ ದೇವಾಲಯಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಿ ಭಕ್ತರಿಗೆ ನೀಡಿ ಇಲ್ಲಿಯವರೆಗೂ ಮೋಸ ಮಾಡುತ್ತಿದ್ದರು.