ETV Bharat / bharat

ಯೂಟ್ಯೂಬ್ ಚಾನೆಲ್​ನಿಂದ ಪ್ರಧಾನಿ, ಸುಪ್ರೀಂ ಕೋರ್ಟ್ ವಿರುದ್ಧ ನಕಲಿ ಸುದ್ದಿ: ಪಿಐಬಿ ಫ್ಯಾಕ್ಟ್​ ಚೆಕ್ ವರದಿ - ಪಿಐಬಿ ಫ್ಯಾಕ್ಟ್​ ಚೆಕ್ ವರದಿ

ಸುಮಾರು 10 ಲಕ್ಷ ಚಂದಾದಾರರು ಮತ್ತು 32 ಕೋಟಿ ವೀಕ್ಷಣೆಗಳನ್ನು ಹೊಂದಿರುವ 'ನ್ಯೂಸ್ ಹೆಡ್‌ಲೈನ್ಸ್' ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಧಾನಿ, ಭಾರತದ ಸುಪ್ರೀಂ ಕೋರ್ಟ್, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಭಾರತದ ಚುನಾವಣಾ ಆಯೋಗದ ಬಗ್ಗೆ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಟ್ವೀಟ್ ಮಾಡಿದೆ.

ಯೂಟ್ಯೂಬ್ ಚಾನೆಲ್​ನಿಂದ ಪ್ರಧಾನಿ, ಸುಪ್ರೀಂ ಕೋರ್ಟ್ ವಿರುದ್ಧ ನಕಲಿ ಸುದ್ದಿ: ಪಿಐಬಿ ಫ್ಯಾಕ್ಟ್​ ಚೆಕ್ ವರದಿ
Fake news from YouTube channel against Prime Minister Supreme Court PIB fact check report
author img

By

Published : Dec 20, 2022, 1:58 PM IST

ನವದೆಹಲಿ: ನ್ಯೂಸ್ ಹೆಡ್‌ಲೈನ್ಸ್ ಎಂಬ ಯೂಟ್ಯೂಬ್ ಚಾನೆಲ್ ಪ್ರಧಾನಿ ನರೇಂದ್ರ ಮೋದಿ, ಭಾರತದ ಸುಪ್ರೀಂ ಕೋರ್ಟ್, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಚುನಾವಣಾ ಆಯೋಗದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಪ್ರಕಾರ, ಈ ಯೂಟ್ಯೂಬ್ ಚಾನೆಲ್ 10 ಲಕ್ಷ ಚಂದಾದಾರರನ್ನು ಮತ್ತು 32 ಕೋಟಿ ವೀಕ್ಷಣೆಗಳನ್ನು ಹೊಂದಿದೆ ಎಂದು ವರದಿಯಾಗಿದೆ.

ಸುಮಾರು 10 ಲಕ್ಷ ಚಂದಾದಾರರು ಮತ್ತು 32 ಕೋಟಿ ವೀಕ್ಷಣೆಗಳನ್ನು ಹೊಂದಿರುವ 'ನ್ಯೂಸ್ ಹೆಡ್‌ಲೈನ್ಸ್' ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಧಾನಿ, ಭಾರತದ ಸುಪ್ರೀಂ ಕೋರ್ಟ್, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಭಾರತದ ಚುನಾವಣಾ ಆಯೋಗದ ಬಗ್ಗೆ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಟ್ವೀಟ್ ಮಾಡಿದೆ.

ಭಾರತದ ಮುಖ್ಯ ನ್ಯಾಯಾಧೀಶರ ಆದೇಶದ ಮೇರೆಗೆ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗಳನ್ನು ನಡೆಸಲಾಗುವುದು ಎಂಬಂತಹ ನಕಲಿ ಸುದ್ದಿಗಳನ್ನು ಈ ಯೂಟ್ಯೂಬ್ ಚಾನೆಲ್ ಹರಡುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶ ವಿಧಾನಸಭೆಯ 131 ಸ್ಥಾನಗಳಿಗೆ ಮರು ಚುನಾವಣೆ ನಡೆಯಲಿದೆ ಎಂಬ ಸುಳ್ಳು ಸುದ್ದಿಯನ್ನೂ ಈ ಚಾನೆಲ್ ಹಬ್ಬಿಸಿದೆ.

ಈ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿಕೊಂಡಿತ್ತು.

ಇದನ್ನೂ ಓದಿ : ನಕಲಿ ಸುದ್ದಿ ತಡೆಯಲು ಫೇಸ್​ಬುಕ್ ಕೈಗೊಂಡಿದೆ ಹೊಸ ಕ್ರಮ! ಏನು ಆ ಆ್ಯಕ್ಷನ್​​​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.