ತಿರುಪತಿ(ಆಂಧ್ರಪ್ರದೇಶ): ದೇಶದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿ ದೇವಸ್ಥಾನ ಈಗಾಗಲೇ ರೀ ಓಪನ್ ಆಗಿದ್ದು, ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿ ಬಾಲಾಜಿ ದರ್ಶನ ಪಡೆದುಕೊಳ್ಳಬಹುದಾಗಿದೆ. ಇದರ ಮಧ್ಯೆ ನಕಲಿ ಟಿಕೆಟ್ ಹಾವಳಿ ಹೆಚ್ಚಾಗಿದ್ದು, ಭಕ್ತರು ಇದರ ಕಡೆ ಗಮನ ಹರಿಸಬೇಕಾಗಿದೆ.
ಟಿಟಿಡಿ ಚೇರಮನ್ರ ಹೆಸರಿನಲ್ಲಿ ನಕಲಿ ಟಿಕೆಟ್ಗಳು ಮಾರಾಟವಾಗ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಗುಂಟೂರಿನಲ್ಲಿ ಭಕ್ತರು ದೂರು ದಾಖಲು ಮಾಡಿದ್ದಾರೆ.
ತಿರುಮಲ ಬಾಲಾಜಿ ದರ್ಶನಕ್ಕೆ ಟಿಕೆಟ್ ಪಡೆದುಕೊಳ್ಳಲು ಮುಂದಾಗಿ ವ್ಯಕ್ತಿಯೊಬ್ಬನನ್ನು ಸಂಪರ್ಕ ಮಾಡಲಾಗಿದ್ದು, ಅಕ್ಟೋಬರ್ 15 ಮತ್ತು 23ರಂದು ದಿನಾಂಕಗಳು ಬಾಕಿ ಇರುವುದಾಗಿ ತಿಳಿಸಿದ್ದಾರೆ. ತಾವು ಟಿಟಿಡಿ ಚೇರ್ಮನ್ ಕಚೇರಿಯಿಂದ ಟಿಕೆಟ್ ವ್ಯವಸ್ಥೆ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಒಟ್ಟು 15 ಜನರು 23ನೇ ತಾರೀಖಿನಂದು ತಿರುಮಲಕ್ಕೆ ಬರಲು ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ.
ಪ್ರತಿ ಟಿಕೆಟ್ಗೆ 1,000 ರೂದಂತೆ ಒಟ್ಟು 15,000 ರೂ ನೀಡುವಂತೆ ಕೇಳಿದ್ದಾನೆ. ಆದರೆ, ಭಕ್ತರು ಇದಕ್ಕೆ ಒಪ್ಪದ ಕಾರಣ 12,500 ರೂಗೆ ಟಿಕೆಟ್ ಬುಕ್ ಮಾಡಿಕೊಡಲು ಒಪ್ಪಿಗೆ ಸೂಚಿಸಿದ್ದಾನೆ. ಇದಾದ ಬಳಿಕ ಟಿಕೆಟ್ ಬುಕ್ ಆಗಿರುವ ಸಂದೇಶ ಅವರ ಮೊಬೈಲ್ಗೆ ಹೋಗಿದೆ.
23ರಂದು ದೇವಸ್ಥಾನಕ್ಕೆ ಹೋದಾಗ ಇವು ನಕಲಿ ಎಂದು ಹೇಳಿ ಅನುಮತಿ ನೀಡಿಲ್ಲ. ಈ ವೇಳೆ, ಟಿಕೆಟ್ ಬುಕ್ ಮಾಡಿರುವ ವ್ಯಕ್ತಿಗೆ ಫೋನ್ ಮಾಡಲಾಗಿದ್ದು, ಆತ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಇದಾದ ಬಳಿಕ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಈ ವೇಳೆ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.