ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಮತ್ತು ಉಬರ್‌ನ ಮಾಜಿ ಕಾರ್ಯನಿರ್ವಾಹಕ ರಾಜೀವ್ ಅಗರ್ವಾಲ್ ಅವರನ್ನು ಸಾರ್ವಜನಿಕ ನೀತಿಯ ನಿರ್ದೇಶಕರನ್ನಾಗಿ ನೇಮಿಸಿರುವುದಾಗಿ ಫೇಸ್ಬುಕ್ ಇಂಡಿಯಾ ಹೇಳಿದೆ. ಅಂಕಿದಾಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಗರ್ವಾಲ್ ನೇಮಕಗೊಂಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫೇಸ್ಬುಕ್, ಬಳಕೆದಾರರ ಸುರಕ್ಷತೆ, ಡೇಟಾ ರಕ್ಷಣೆ, ಗೌಪ್ಯತೆ ಹಾಗೂ ಅಂತರ್ಜಾಲ ಆಡಳಿತವನ್ನೊಳಗೊಂಡಿರುವ ಕಾರ್ಯಸೂಚಿಯಲ್ಲಿ ಫೇಸ್ಬುಕ್ ಪ್ರಮುಖ ನೀತಿ ಅಭಿವೃದ್ಧಿ ಉಪಕ್ರಮಗಳನ್ನು ಅಗರ್ವಾಲ್ ವಿವರಿಸುತ್ತಾರೆ.
ಅಗರ್ವಾಲ್, ಉಬರ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ನೀತಿಯ ಮುಖ್ಯಸ್ಥರಾಗಿದ್ದರು. ಅಗರ್ವಾಲ್ಗೆ ಐಎಎಸ್ ಅಧಿಕಾರಿಯಾಗಿ 26 ವರ್ಷಗಳ ಅನುಭವವಿದೆ. ಜತೆಗೆ ಉತ್ತರಪ್ರದೇಶದ 9 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಆಗಿದ್ದ ಅವಧಿಯಲ್ಲಿ, ಅವರು ಭಾರತದ ಮೊದಲ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ (ಎಂ/ಒ ವಾಣಿಜ್ಯ) ಉತ್ತೇಜನ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಅವರು ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ವೇದಿಕೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಜೊತೆಗೆ ಇತರ ರಾಷ್ಟ್ರಗಳೊಂದಿಗೆ ಐಪಿಆರ್‌ಗಳಲ್ಲಿ ಭಾರತದ ಪ್ರಮುಖ ಸಂಧಾನಕಾರರಾಗಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಗೂಗಲ್ ಕ್ಯಾಲೆಂಡರ್ನಲ್ಲಿ ಲಭ್ಯವಾಗಲಿದೆ 'ಟೈಮ್ ಇನ್ಸೈಟ್ಸ್' ಪ್ಯಾನಲ್: ಏನಿದರ ವಿಶೇಷತೆ?
ಅಗರ್ರ್ವಾಲ್ ನೇಮಕಾತಿ ಕುರಿತು ಮಾತನಾಡಿರುವ ಎಫ್ಬಿಯ ಭಾರತದ ಉಪಾಧ್ಯಕ್ಷ ಮತ್ತು ಎಂಡಿ ಆಗಿರುವ ಅಜಿತ್ ಮೋಹನ್, ದೇಶದ ಎಲ್ಲರಿಗೂ ಲಾಭದಾಯಕವಾದ ಅಂತರ್ಗತ ಮತ್ತು ಸುರಕ್ಷಿತ ಅಂತರ್ಜಾಲವನ್ನು ನಿರ್ಮಿಸಲು ಸಹಾಯ ಮಾಡಲು ನಮಗೆ ಅವಕಾಶವಿದೆ. ಸಾರ್ವಜನಿಕ ನೀತಿ ತಂಡವನ್ನು ಮುನ್ನಡೆಸಲು ರಾಜೀವ್ ನಮ್ಮೊಂದಿಗೆ ಸೇರಿಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದಿದ್ದಾರೆ.