ವಲ್ಸಾದ್(ಗುಜರಾತ್): ವಲ್ಸಾದ್ ಜಿಲ್ಲೆಯ ಫಾರ್ಮಾ ಕಂಪನಿಯೊಂದರಲ್ಲಿ ಭಾರಿ ಪ್ರಮಾಣದ ಸ್ಫೋಟ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಸರಿಗಾಮ್ದಲ್ಲಿರುವ ಜಿಐಡಿಸಿ ಕೆಮಿಕಲ್ ಝೋನ್ನಲ್ಲಿನ ವ್ಯಾನ್ ಪೆಟ್ರೋಕೆಮ್ ಫಾರ್ಮಾ ಕಂಪನಿಯಲ್ಲಿ ಈ ಅವಘಡ ನಡೆದಿದ್ದು, ಕಟ್ಟಡದ ಒಂದು ಭಾಗ ಕುಸಿದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ವಾಹನಗಳನ್ನು ಕರೆಸಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮೊದಲು ಬೆಂಕಿಯನ್ನು ನಂದಿಸಲು ನೀರನ್ನು ಬಳಸಲಿಲ್ಲ. ಏಕೆಂದರೆ ಸ್ಫೋಟಕ್ಕೆ ಕಾರಣವಾದ ರಾಸಾಯನಿಕದ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಒಬ್ಬ ಹುಡುಗಿಗಾಗಿ ಓರ್ವ ಕೊಲೆ, ಇನ್ನೊಬ್ಬ ಜೈಲು ಪಾಲು: ನನ್ನ ಮಗ ಒಬ್ಬನೇ ಈ ಕೊಲೆ ಮಾಡಲು ಸಾಧ್ಯವಿಲ್ಲ ಎಂದ ತಂದೆ
ವ್ಯಾನ್ ಪೆಟ್ರೋಕೆಮ್ ಫಾರ್ಮಾ ಕಂಪನಿಯಲ್ಲಿ ಹಠಾಟ್ ಸ್ಫೋಟ ಸಂಭವಿಸಿರುವ ಬಗ್ಗೆ ನಮಗೆ ಕರೆ ಬಂದಿದೆ. ಇಲ್ಲಿಯವರೆಗೆ ಎರಡು ಶವಗಳು ಪತ್ತೆಯಾಗಿದ್ದು, ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಇಲ್ಲಿಗೆ ತಲುಪಿದಾಗ ಯಾವುದೇ ಭದ್ರತಾ ಸಿಬ್ಬಂದಿಗಳು ಇರಲಿಲ್ಲ. ಅಲ್ಲದೇ ನಮಗೆ ಬೆಂಕಿ ನಂದಿಸಲು ನೀರನ್ನು ಬಳಸಲಾಗಲಿಲ್ಲ. ಏಕೆಂದರೆ ಯಾವ ರಾಸಾಯನಿಕವು ಬೆಂಕಿಗೆ ಕಾರಣವಾಯಿತು ಎಂಬುದು ನಮಗೆ ಖಚಿತವಾಗಿರಲಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ರಾಹುಲ್ ಮುರಾರಿ ತಿಳಿಸಿದರು.
ನಿನ್ನೆ ರಾತ್ರಿ 11.30 ರ ಸುಮಾರಿಗೆ ಸರಿಗಮ್ ಜಿಐಡಿಸಿಯ ಕಂಪನಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವಲ್ಸಾಯಿಡ್ ಎಸ್ಪಿ ವಿಜಯ್ ಸಿಂಗ್ ಗುರ್ಜರ್ ಹೇಳಿದರು. ರಕ್ಷಣಾ ಕಾರ್ಯಾಚರಣೆಯು ನಡೆಯುತ್ತಿದ್ದು, ಸ್ಫೋಟದ ಹಿಂದಿನ ಕಾರಣ ಮತ್ತು ಕಾರ್ಖಾನೆಯೊಳಗಿನ ಕಾರ್ಮಿಕರ ಸ್ಥಿತಿಯ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಗ್ಯಾನ್ ಬಲೂನ್ ಸಿಲಿಂಡರ್ ಸ್ಫೋಟ: ಪಶ್ಚಿಮ ಬಂಗಾಳದ ಜೋಯ್ನಗರದಲ್ಲಿ ಫೆಬ್ರವರಿ 12 ರಂದು ರಾತ್ರಿ ನಡೆದ ಜಾತ್ರೋತ್ಸವದಲ್ಲಿ ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಜೊತೆಗೆ ಹತ್ತು ಮಂದಿ ಗಾಯಗೊಂಡಿದ್ದರು. ಅವರಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದರು.
ರಾಜಾಪುರ-ಕಾರಬೇಗ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಬಾತ್ರಾ ಗ್ರಾಮದಲ್ಲಿ ಜಾತ್ರೋತ್ಸವಕ್ಕೆಂದು ಅಂಗಡಿ ಮುಂಗಟ್ಟುಗಳು, ಸ್ಟಾಲ್ಗಳನ್ನು ಹಾಕಲಾಗಿತ್ತು. ಅದರಲ್ಲಿ ಬಲೂನ್ ಮಾರಾಟಗಾರನು ಅಂಗಡಿಯನ್ನು ತೆರೆದಿದ್ದ. ಅಂಗಡಿಯಲ್ಲಿ ತನಗೆ ಬೇಕಾದಂತೆ ಗ್ಯಾಸ್ ಸಿಲಿಂಡರ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದ. ಅದೇ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಅನಾಹುತ ಸಂಭವಿಸಿತ್ತು. ಬಳಿಕ ಮಾಹಿತಿ ತಿಳಿದ ಬಕುಲ್ತಾಲಾ ಪೊಲೀಸರು ಸ್ಥಳಕ್ಕಾಗಮಿಸಿ ತಕ್ಷಣವೇ ಕಾರ್ಯಾಚರಣೆ ಕೈಗೊಂಡಿದ್ದರು. ಜೊತೆಗೆ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್ ಜೈಲಿನಲ್ಲೇ ಗ್ಯಾಂಗ್ ವಾರ್, ಇಬ್ಬರು ಗ್ಯಾಂಗ್ಸ್ಟರ್ಗಳ ಕೊಲೆ