ETV Bharat / bharat

ಮೇಕಪ್ ಕಿಟ್​ ಗೊತ್ತು, ಟೂಲ್​ಕಿಟ್​ ಬಗ್ಗೆಯೂ ತಿಳಿದುಕೊಳ್ಳಿ.. ಇಲ್ಲಿದೆ ಸಂಪೂರ್ಣ ವಿವರ..

ಅಭಿಯಾನದ ವೇಳೆ ಬಳಸುವ ಟೂಲ್​​ಕಿಟ್​ನಲ್ಲಿ ಅಭಿಯಾನದ ಕಾರ್ಯತಂತ್ರವನ್ನು ವಿವರಿಸಲಾಗಿರುತ್ತದೆ.ಅತ್ಯಂತ ಮುಖ್ಯವಾಗಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ, ಮಾರ್ಗದರ್ಶನ ನೀಡುವುದು ಮಾತ್ರವಲ್ಲದೇ ಆ ವಿಷಯದ ಉಗಮ, ಬೆಳವಣಿಗೆ ಬಗ್ಗೆಯೂ ಟೂಲ್​ಕಿಟ್​ನಲ್ಲಿ ಮಾಹಿತಿ ನೀಡಲಾಗುತ್ತದೆ..

What is a toolkit
ಟೂಲ್​ ಕಿಟ್ ಬಗ್ಗೆ ಮಾಹಿತಿ
author img

By

Published : Feb 16, 2021, 8:24 PM IST

ನವದೆಹಲಿ : ಬೆಂಗಳೂರಿನ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನ ಬಂಧಿಸಿದ ಮೇಲೆ ಐದು ದೆಹಲಿಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ದಿಶಾ ರವಿ ಅವರ ಮೇಲೆ ರೈತ ಹೋರಾಟದ ಪರ ಟೂಲ್ ​ಕಿಟ್ ಹಂಚಿಕೊಂಡ ಆರೋಪವಿದೆ.

ದಿಶಾ ರವಿ ಟೂಲ್​ಕಿಟ್ ಗೂಗಲ್ ಡಾಕ್ಯುಮೆಂಟ್​ನ ಎಡಿಟರ್ ಆಗಿದ್ದು, ಫೆಬ್ರವರಿ 5ರಂದು ಟ್ವಿಟರ್​ನಲ್ಲಿ ಪ್ರಸಾರ ಮಾಡಲಾಗಿತ್ತು. ಫೆಬ್ರವರಿ 5ರಂದು ಆಕೆಯನ್ನು ಬಂಧಿಸುವ ಮೊದಲು ಟ್ವಿಟರ್​ ಪೋಸ್ಟ್‌ನ ಡಿಲೀಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಖಲಿಸ್ತಾನಿ ಹೋರಾಟಗಾರರು ದಿಶಾ ರವಿ ಸಂಪರ್ಕದಲ್ಲಿದ್ದಾರೆಂಬ ಆರೋಪವಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ಟೂಲ್ ಕಿಟ್ ಅಂದ್ರೇನು?: ಟೂಲ್ ಕಿಟ್​ ಅಂದರೆ ಸಾಮಾನ್ಯವಾಗಿ ಡಾಕ್ಯುಮೆಂಟ್ ಅಥವಾ ಕಿರುಪುಸ್ತಕ ಎಂಬ ಅರ್ಥವಿದೆ. ಇದನ್ನು ಯಾವುದಾದರೂ ಒಂದು ವಿಷಯವನ್ನು ವರದಿ ಮಾಡಲು ಬಳಸಲಾಗುತ್ತದೆ.

ಕೆಲ ವಿಚಾರಗಳ ಬಗ್ಗೆ ಅಭಿಯಾನ ನಡೆಸುವ ವೇಳೆಯೂ ಇದನ್ನು ಬಳಸಲಾಗುತ್ತದೆ. ಅಭಿಯಾನದ ವೇಳೆ ಬಳಸುವ ಟೂಲ್​​ಕಿಟ್​ನಲ್ಲಿ ಅಭಿಯಾನದ ಕಾರ್ಯತಂತ್ರವನ್ನು ವಿವರಿಸಲಾಗಿರುತ್ತದೆ.

ಅತ್ಯಂತ ಮುಖ್ಯವಾಗಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ, ಮಾರ್ಗದರ್ಶನ ನೀಡುವುದು ಮಾತ್ರವಲ್ಲದೇ ಆ ವಿಷಯದ ಉಗಮ, ಬೆಳವಣಿಗೆ ಬಗ್ಗೆಯೂ ಟೂಲ್​ಕಿಟ್​ನಲ್ಲಿ ಮಾಹಿತಿ ನೀಡಲಾಗುತ್ತದೆ.

ಈಗ ಟೂಲ್​ಕಿಟ್ ವಿವಾದವೇಕೆ?: ಅಂತಾರಾಷ್ಟ್ರೀಯ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್​ಬರ್ಗ್​ ಒಂದು ಟೂಲ್​ಕಿಟ್ ಹಂಚಿಕೊಂಡಿದ್ದರು. ಆ ಟೂಲ್​ಕಿಟ್​​ನಲ್ಲಿ 'ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಅರಿವಿಲ್ಲದವರಿಗೆ ಚೆನ್ನಾಗಿ ಅರ್ಥ ಮಾಡಿಸಲು ಮತ್ತು ತಮ್ಮದೇ ವಿಶ್ಲೇಷಣೆಯ ಮೇಲೆ ರೈತರ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಇದೊಂದು ವರದಿಯಾಗಿದೆ' ಎಂದಿದ್ದರು.

ಇದನ್ನೂ ಓದಿ: ಗೋದ್ರಾ ಹತ್ಯಾಕಾಂಡ: 19 ವರ್ಷಗಳ ನಂತರ ಪ್ರಮುಖ ಆರೋಪಿ ಸೆರೆ

ಆ ವರದಿಯಲ್ಲಿ ಅಥವಾ ದಾಖಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಟ್ವಿಟರ್​​ನಲ್ಲಿ ಅನುಸರಿಸಬೇಕಾದ ಕ್ರಮಗಳು, ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ರೈತರ ಪ್ರತಿಭಟನೆಗೆ ಬೆಂಬಲ ಮುಂತಾದ ವಿಚಾರಗಳನ್ನು ಉಲ್ಲೇಖಿಸಲಾಗಿತ್ತು.

ಟೂಲ್​ಕಿಟ್​ಗೆ ಪೊಲೀಸರ ಕಾಟ ಏಕೆ?: ಗ್ರೇಟಾ ಥನ್​ಬರ್ಗ್ ಹಂಚಿಕೊಂಡಿದ್ದ ಟೂಲ್​ಕಿಟ್​ನ ಕೆಲವು ಭಾಗಗಳನ್ನು ದಿಶಾ ರವಿ ಎಡಿಟ್​ ಮಾಡಿದ್ದು, ಟ್ವಿಟರ್​ನಲ್ಲಿ ಹ್ಯಾಷ್​ಟ್ಯಾಗ್​ಗಳ ಮೂಲಕ ಜನವರಿ 26ರೊಳಗೆ ಡಿಜಿಟಲ್ ಸ್ಟ್ರೈಕ್, ಟ್ವಿಟರ್​ನಲ್ಲಿ ಜನವರಿ 23ರಂದು ಹೆಚ್ಚು ಟ್ವೀಟ್ ಮಾಡುವುದು, ಜನವರಿ 26ರಂದು ಪ್ರತಿಭಟನೆ ಮತ್ತು ರೈತರ ದೆಹಲಿಗೆ ಮುತ್ತಿಗೆ ಹಾಕುವುದನ್ನು ಗಮನಿಸುವುದು ಅಥವಾ ಬೆಂಬಲಿಸುವುದು ಎಂದು ತಿದ್ದಿದ್ದರು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿ ಪೊಲೀಸರು ಆಕೆಯ ಇ-ಮೇಲ್ ಐಡಿ, ಯುಆರ್​ಎಲ್​ ಮತ್ತು ಸಾಮಾಜಿಕ ಜಾಲತಾಣಗಳ ವಿವರ ನೀಡಲು ಗೂಗಲ್ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಂಪರ್ಕಿಸಿದ್ದರು. ಈಕೆ ಬಂಧನದ ನಂತರ ಆಕೆಯ ಪೋಸ್ಟ್​​ಗಳು ಡಿಲೀಟ್​ ಆಗಿರುವುದು ಕಂಡು ಬಂದಿತ್ತು.

ಖಲಿಸ್ತಾನಿ ಸಂಚು?: ಇನ್ನಿಬ್ಬರು ಆರೋಪಿಗಳಾದ ಶಂತನು ಮತ್ತು ನಿಕಿತಾ ಖಲಿಸ್ತಾನಿ ಬೆಂಬಲಿತ ಸಂಘಟನೆಯಾದ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್​) ಝೂಮ್ ಅಪ್ಲಿಕೇಷನ್​ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲೂ ತನಿಖೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.