ನವದೆಹಲಿ: ವಾತಾವರಣದಲ್ಲಿ ಒಂಚೂರು ಚಳಿ ಕಾಣಿಸಿಕೊಳ್ಳುತ್ತಿದ್ದಂತೆ ಜನರಿಗೆ ನೆಗಡಿ ಜಾಸ್ತಿಯಾಗುವುದು ಸಹಜ. ಆದರೆ ಇದರೊಂದಿಗೆ ಕೋವಿಡ್-19 ಪ್ರಕರಣಗಳು ಕೂಡ ಹೆಚ್ಚಾಗುವುದು ಆಶ್ಚರ್ಯಕರ ವಿಷಯವಾದರೂ, ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಇದು ನಿತ್ಯ ಇರುವಂಥದ್ದೇ ಎಂದು ನಿರಾಳವಾಗುತ್ತಿದ್ದೇವೆ. ಋತುಮಾನ ಬದಲಾಗುತ್ತಿದ್ದಂತೆಯೇ ನೆಗಡಿ ಜ್ವರದ ಪ್ರಕರಣಗಳು ಹೆಚ್ಚಾಗಲಾರಂಭಿಸುತ್ತವೆ. ಆದರೆ, ಈ ಬಾರಿ ಇಂಥ ಪ್ರಕರಣಗಳು ತುಸು ಹೆಚ್ಚಾಗಿಯೇ ಕಂಡು ಬಂದವು. ಇನ್ನು ಈ ಬಾರಿಯ ಕೋವಿಡ್-19 ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಕೂಡ ತೀವ್ರವಾಗಿದ್ದವು.
ಕೋವಿಡ್-19 ಪ್ರಕರಣಗಳ ಹೆಚ್ಚಳ, ಬರಲಿರುವ ರಜಾ ಅವಧಿ ಇದೆಲ್ಲ ಸೇರಿ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ ಎನ್ನುತ್ತಾರೆ ವೈದ್ಯರು. ಕೋವಿಡ್-19 ಹಾಗೂ ಇನ್ನಿತರ ಯಾವುದೇ ಶ್ವಾಸಕೋಶ ಸೋಂಕು ತಡೆಗಟ್ಟಲು ಮಾಸ್ಕ್ಗಳು ಅತಿ ಪ್ರಮುಖ ಸಾಧನಗಳಾಗಿವೆ. ಇತ್ತೀಚೆಗೆ ಸೋಂಕು ಹೆಚ್ಚಾಗುತ್ತಿರುವುದರಿಂದ ಮನೆಯಿಂದ ಹೊರಬೀಳುವಾಗ ಮಾಸ್ಕ್ ಧರಿಸುವುದು ಉತ್ತಮ.
ಶೀತಜ್ವರ ಬರದಂತೆ ತಡೆಯಲು ಮಾಸ್ಕ್: ಹಬ್ಬದ ಕಾಲವು ಹತ್ತಿರದಲ್ಲೇ ಇರುವುದು ಮತ್ತು ಬಂಧು - ಬಾಂಧವರೊಂದಿಗೆ ಬೆರೆಯುವ ಸಮಯ ಇದಾಗಿರುವುದರಿಂದ ಕೋವಿಡ್-19 ಮತ್ತು ಸಾಮಾನ್ಯ ಶೀತಜ್ವರ ಬರದಂತೆ ತಡೆಯಲು ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಸರಿಯಾದ ಮಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ಧರಿಸುವುದು ಅತ್ಯಂತ ಮುಖ್ಯವಾಗಿದೆ ಎನ್ನುತ್ತಾರೆ ಜನರಲ್ ಫಿಸಿಷಿಯನ್ ಡಾ. ಎಸ್ಸಿ ಅಜ್ಮಾನಿ. ಮಾಸ್ಕ್ ಎಂಥವು ಮತ್ತು ಅವು ನಿಮ್ಮ ಮುಖಕ್ಕೆ ಎಷ್ಟು ಸರಿಯಾಗಿ ಫಿಟ್ ಆಗುತ್ತವೆ ಎಂಬುದು ಕೂಡ ಮುಖ್ಯ.
FFP2 ಮಾಸ್ಕ್ಗಳು ಸರ್ಜಿಕಲ್ ಮಾಸ್ಕ್ಗಳಿಗಿಂತ ಹೆಚ್ಚು ಸುರಕ್ಷಿತ: ವೈದ್ಯಕೀಯ ಸಂಸ್ಥೆಯ ಸಂಶೋಧನೆಯೊಂದರ ಪ್ರಕಾರ ಬಿಗಿಯಾಗಿ ಕುಳಿತುಕೊಳ್ಳುವ FFP2 ಮಾಸ್ಕ್ಗಳು ಸರ್ಜಿಕಲ್ ಮಾಸ್ಕ್ಗಳಿಗಿಂತ 75 ಪಟ್ಟು ಹೆಚ್ಚು ಸುರಕ್ಷತೆ ನೀಡುತ್ತವೆಯಂತೆ. ಬಟ್ಟೆಯಿಂದ ತಯಾರಿಸಿದ ಅಥವಾ ಸರ್ಜಿಕಲ್ ಮಾಸ್ಕ್ಗಳಿಗಿಂತ FFP2 ಉತ್ತಮ ರಕ್ಷಣೆ ನೀಡುತ್ತವೆ.
ವೈರಸ್ಗಳು, ಬ್ಯಾಕ್ಟೀರಿಯಾ, ಧೂಳು, ಮಾಲಿನ್ಯಕಾರಕಗಳು, ಅಲರ್ಜಿನ್ಗಳು ಮತ್ತು ಪರಾಗದಿಂದ ಸೆವ್ಲಾನ್ನಂಥ ಬಿಐಎಸ್ ಅನುಮೋದಿತ FFP2 S ಮಾಸ್ಕ್ಗಳು ಹೆಚ್ಚಿನ ರಕ್ಷಣೆ ನೀಡುತ್ತವೆ. ಈ ಮಾಸ್ಕ್ಗಳು 0.3 ಮೈಕ್ರಾನ್ಗಿಂತ ದೊಡ್ಡದಾದ ಕಣಗಳಿರುವ ಏರೋಸಾಲ್ಗಳಿಂದ ಶೇ 95 ರಷ್ಟು ರಕ್ಷಣೆ ನೀಡುತ್ತವೆ.
ಸಾಮಾನ್ಯ ಮಾಸ್ಕ್ಗಳಿಗೆ ಹೋಲಿಸಿದರೆ ಈ ಮಾಸ್ಕ್ಗಳು ಉತ್ತಮವಾದ ಫಿಲ್ಟರಿಂಗ್ ನೀಡಲು ಎಲೆಕ್ಟ್ರೋ ಸ್ಟ್ಯಾಟಿಕ್ ಚಾರ್ಜ್ ಮಾಡಲಾದ ಫಿಲ್ಟರ್ಗಳನ್ನು ಹೊಂದಿರುತ್ತವೆ. ವಿವಿಧ ಚರ್ಮದ ಪ್ರಕಾರಗಳಿಗೆ ಈ ಮಾಸ್ಕ್ಗಳ ಸೌಕರ್ಯ ಮತ್ತು ಸೂಕ್ತತೆ ಸಹ ಪರೀಕ್ಷಿಸಲಾಗಿದೆ. ಸಾವ್ಲಾನ್ FFP2 S ಮಾಸ್ಕ್ಗಳು ಬಿಐಎಸ್ ಪ್ರಮಾಣೀಕೃತವಾಗಿವೆ.
ಸೋಂಕಿತ ವ್ಯಕ್ತಿಯೊಬ್ಬ ಜನಜಂಗುಳಿಯ ವಾತಾವರಣದಲ್ಲಿ ಸೀನಿದಾಗ ಅಥವಾ ಕೆಮ್ಮಿದಾಗ ಕೋವಿಡ್-19 ವೈರಸ್ ಮತ್ತು ಇನ್ ಫ್ಲುಯೆಂಜಾ ವೈರಸ್ ತ್ವರಿತವಾಗಿ ಹರಡುತ್ತದೆ ಎಂಬುದು ನಮಗೆ ತಿಳಿದಿದೆ. N95 ಅಥವಾ FFP2 S ಮಾಸ್ಕ್ ಧರಿಸುವುದರ ಮೂಲಕ ಮೊದಲ ಹಂತದ ರಕ್ಷಣೆಯು ಖಾತ್ರಿಯಾಗುತ್ತದೆ. ವಿಶೇಷವಾಗಿ ಅಲರ್ಜಿ, ಅಸ್ವಸ್ಥತೆ, ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಗಳು ಅಥವಾ ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸುವ ಜನರಿಗೆ ಮಾಸ್ಕ್ಗಳ ಬಳಕೆ ಜೀವನ ಕ್ರಮವಾಗಬೇಕು.
ಇದನ್ನೂ ಓದಿ: ಜುವೆಲ್ಲರಿ ಎಕ್ಸಿಬಿಷನ್ನಲ್ಲಿ ಚಿನ್ನದ ಮಾಸ್ಕ್: ಕೇವಲ 2 ದಿನದಲ್ಲಿ 10 ಕೆಜಿ ಬಂಗಾರ ಮಾರಾಟ