ETV Bharat / bharat

ಯುವ ಇತಿಹಾಸಕಾರರೊಂದಿಗೆ ವಿಶೇಷ ಸಂಭಾಷಣೆ : ಈ ವಯಸ್ಸಲ್ಲೇ ಚಂದ್ರನೆತ್ತರದ ಸಾಧನೆ! - ಕಾನ್ಪುರ ನಗರದ ಶಿವಕತ್ರದ 11 ವರ್ಷದ ವಿದ್ಯಾರ್ಥಿ ಯಶವರ್ಧನ್ ಸಿಂಗ್‌ಗೆ ಕಿರಿಯ ಇತಿಹಾಸಕಾರ ಪ್ರಶಸ್ತಿಯನ್ನು ನೀಡಿದೆ

ಲಂಡನ್‌ನ ಹಾರ್ವರ್ಡ್ ಸಂಸ್ಥೆಯು ಕೆಲವು ದಿನಗಳ ಹಿಂದೆ ಕಾನ್ಪುರ ನಗರದ ಶಿವಕತ್ರದ 11 ವರ್ಷದ ವಿದ್ಯಾರ್ಥಿ ಯಶವರ್ಧನ್ ಸಿಂಗ್‌ಗೆ ಕಿರಿಯ ಇತಿಹಾಸಕಾರ ಪ್ರಶಸ್ತಿಯನ್ನು ನೀಡಿದೆ. ಭಾರತೀಯ ಅಂಚೆ ಇಲಾಖೆಯು ಯಶವರ್ಧನ್ ಅವರ ಹೆಸರು ಮತ್ತು ಫೋಟೋದೊಂದಿಗೆ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದೆ..

ಯುವ ಇತಿಹಾಸಕಾರರೊಂದಿಗೆ ವಿಶೇಷ ಸಂಭಾಷಣೆ
ಯುವ ಇತಿಹಾಸಕಾರರೊಂದಿಗೆ ವಿಶೇಷ ಸಂಭಾಷಣೆ
author img

By

Published : Apr 4, 2022, 7:43 PM IST

Updated : Apr 4, 2022, 8:22 PM IST

ಕಾನ್ಪುರ(ಉತ್ತರಪ್ರದೇಶ) : ಪುಟ್ಟ ಇತಿಹಾಸಕಾರನ ಪ್ರತಿಭೆ ಬೆರಗು ಹುಟ್ಟಿಸುವಂತಿದೆ. ಕಾನ್ಪುರದ 11 ವರ್ಷದ ಇತಿಹಾಸಕಾರ ಚೈಲ್ಡ್ ಪ್ರಾಡಿಜಿ ಯಶವರ್ಧನ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಸೆಳೆದಿದ್ದಾರೆ. ಶಿವಕತ್ರದ ನಿವಾಸಿ ಯಶವರ್ಧನ್ ಅವರು ಚಿಕ್ಕ ವಯಸ್ಸಿನಲ್ಲೇ ಹಲವು ಸಾಧನೆಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ನಾಸಾ ಚಂದ್ರನತ್ತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿತ್ತು. ಅದರಲ್ಲಿ ಯಶವರ್ಧನ್ ಅವರ ಹೆಸರು ಸಹ ಸೇರಿತ್ತು. ಅಂತೆಯೇ, ಅವರು ಲಂಡನ್‌ನ ಹಾರ್ವರ್ಡ್ ಸಂಸ್ಥೆಯಿಂದ ಕಿರಿಯ ಇತಿಹಾಸಕಾರ ಪ್ರಶಸ್ತಿ ಸಹ ಪಡೆದಿದ್ದಾರೆ. ಅನೇಕ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಇತಿಹಾಸ, ಅಂತಾರಾಷ್ಟ್ರೀಯ ಸಂಬಂಧಗಳಂತಹ ವಿಷಯಗಳನ್ನು ಕಲಿಸುತ್ತಿದ್ದಾರೆ ಎಂಬುದು ಆಶ್ಚರ್ಯಕರ ವಿಷಯ. ಯಶವರ್ಧನ್ ಅವರ ತಂದೆ ಡಾ. ಆಯುಷ್ಮಾನ್ ಇವರು ಫಿಸಿಯೋಥೆರಪಿಸ್ಟ್ ಆಗಿದ್ದರೆ, ತಾಯಿ ಕಾಂಚನ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಯುವ ಇತಿಹಾಸಕಾರರೊಂದಿಗೆ ವಿಶೇಷ ಸಂಭಾಷಣೆ

ಇದನ್ನೂ ಓದಿ: ಶಾಕಿಂಗ್​: ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಗರ್ಭಪಾತ ಮಾಡಿಕೊಂಡ ಬಾಲಕಿ

ಭಾರತೀಯ ಅಂಚೆ ಇಲಾಖೆ ಯಶವರ್ಧನ್ ಅವರ ಹೆಸರು ಮತ್ತು ಫೋಟೋದೊಂದಿಗೆ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದೆ. ತನ್ನ ಹೆಸರಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ವಿದ್ಯಾರ್ಥಿಯೊಂದಿಗೆ ಈಟಿವಿ ಭಾರತ ತಂಡ ವಿಶೇಷ ಸಂವಾದ ನಡೆಸಿದೆ. ತಮ್ಮ ತಾಯಿಯಿಂದ ಎಲ್ಲಾ ವಿಷಯದ ಬಗ್ಗೆ ಮಾಹಿತಿ ಪಡೆದಿದ್ದರಿಂದ ಆ ಬಗ್ಗೆ ಆಸಕ್ತಿ ಹೆಚ್ಚಾಯಿತು ಎಂದು ಹೇಳಿದ್ದಾರೆ.

ಇನ್ನು ವಾಸ್ತವವಾಗಿ ಯಶವರ್ಧನ್ ಅವರ ತಾಯಿ ಕಾಂಚನ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ. ಅವರು ಈ ಹಿಂದೆ ಪಿಸಿಎಸ್‌ಗೆ ತಯಾರಿ ನಡೆಸುತ್ತಿದ್ದರಂತೆ. ಆಗ ಯಶವರ್ಧನನ ವಯಸ್ಸು ಕೇವಲ 5-6 ವರ್ಷ. ಆ ವೇಳೆ ಯಶವರ್ಧನನಿಗೆ ಇತಿಹಾಸದಲ್ಲಿ ಆಸಕ್ತಿ ಹೆಚ್ಚಾಯಿತಂತೆ. ಈ ಸಾಧಕ ಪ್ರಸ್ತುತ ಶಾಲಾ ಶಿಕ್ಷಣದ ಹೊರತಾಗಿ 10 ಗಂಟೆಗಳ ಕಾಲ ಸ್ವತಃ ಅಧ್ಯಯನ ಮಾಡುತ್ತಾರೆ.

Last Updated : Apr 4, 2022, 8:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.