ನವದೆಹಲಿ: ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುಣ್ಯತಿಥಿ ಹಿನ್ನೆಲೆ ಇಂದು ದೆಹಲಿಯ ಕಿಸಾನ್ ಘಾಟ್‌ನಲ್ಲಿ ರಾಷ್ಟ್ರೀಯ ಲೋಕ ದಳದ ಅಧ್ಯಕ್ಷ ಜಯಂತ್ ಚೌಧರಿ, ರೈತ ನಾಯಕ ರಾಕೇಶ್ ಟಿಕಾಯತ್, ಭಾರತೀಯ ಕಿಸಾನ್ ಒಕ್ಕೂಟದ ಬಿಜೇಂದ್ರ ಸಿಂಗ್ ಮುಂತಾದ ರೈತ ಮುಖಂಡರು ಚೌಧರಿ ಚರಣ್ ಸಿಂಗ್ರವರ ಸಮಾಧಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.
ಭಾರತದ ಐದನೇ ಪ್ರಧಾನಿ ಮತ್ತು ರೈತ ಮುಖಂಡ ಚೌಧರಿ ಚರಣ್ ಸಿಂಗ್ ಅವರು 1902 ರ ಡಿಸೆಂಬರ್ 23 ರಂದು ಗಾಜಿಯಾಬಾದ್ ನೂರ್ಪುರ್ ಗ್ರಾಮದಲ್ಲಿ ಜನಿಸಿದರು. ಚೌಧರಿ ಚರಣ್ ಸಿಂಗ್ ರೈತ ಮುಖಂಡರಾಗಿದ್ದರು. ಅವರು ಯಾವಾಗಲೂ ಗ್ರಾಮ ಮತ್ತು ರೈತರ ಪರ ಧ್ವನಿ ಎತ್ತಿದವರು. ಅವರು ಜುಲೈ 28, 1979 ರಿಂದ 1980 ರ ಜನವರಿ 14 ರವರೆಗೆ ಭಾರತದ ಪ್ರಧಾನಿ ಸಹ ಆಗಿದ್ದರು.
ಚರಣ್ ಸಿಂಗ್ 29 ಮೇ 1987 ರಂದು ನಿಧನರಾದರು. ಅವರು ಇಹಲೋಕ ತ್ಯಜಿಸಿದ್ದರೂ ಚೌಧರಿ ಚರಣ್ ಸಿಂಗ್ ಅವರ ಆಲೋಚನೆಗಳು ಯಾವಾಗಲೂ ಜೀವಂತವಾಗಿವೆ.