ETV Bharat / bharat

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ

ಹೃಷಿಕೇಶ್ ದೇಶಮುಖ್​ಗೆ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದರೆ, ಸಾಕ್ಷ್ಯ ನಾಶಕ್ಕೆ ಆರೋಪಿ ಪ್ರಯತ್ನ ಮಾಡಬಹುದು ಅಥವಾ ಬೇರೆ ಅಪರಾಧಗಳನ್ನು ಮಾಡಬಹುದು ಎಂದು ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.

Ex-Maha home minister Anil Deshmukh's son active participant in money laundering: ED tells court
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ
author img

By

Published : Nov 23, 2021, 6:42 AM IST

ಮುಂಬೈ, ಮಹಾರಾಷ್ಟ್ರ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಪುತ್ರ ಹೃಷಿಕೇಶ್ ದೇಶಮುಖ್ ಕೂಡಾ ಹಗರಣದಲ್ಲಿ ಸಕ್ರಿಯನಾಗಿದ್ದನು ಎಂದು ಜಾರಿ ನಿರ್ದೇಶನಾಲಯ (Enforcement Directorate) ವಿಶೇಷ ಕೋರ್ಟ್​ಗೆ ಮಾಹಿತಿ ನೀಡಿದೆ.

ಹೃಷಿಕೇಶ್ ದೇಶಮುಖ್(Hrishikesh Deshmukh) ವಿಶೇಷ ಕೋರ್ಟ್​ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ವಿರುದ್ಧವಾಗಿ ಅಫಿಡವಿಟ್ ಸಲ್ಲಿಕೆ ಮಾಡಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೃಷಿಕೇಶ್ ದೇಶಮುಖ್ ತನ್ನ ತಂದೆ ಅಕ್ರಮವಾಗಿ ಸಂಪಾದನೆ ಮಾಡಿದ ಹಣವನ್ನು ದೇಣಿಗೆಯಿಂದ ಬಂದಿದೆ ಎಂದು ತೋರಿಸಲು ಸಹಕಾರ ನೀಡಿದ್ದನು ಎಂದು ಸ್ಪಷ್ಟನೆ ನೀಡಿದೆ.

ಒಂದು ವೇಳೆ, ಹೃಷಿಕೇಶ್ ದೇಶಮುಖ್​ಗೆ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದರೆ, ಸಾಕ್ಷ್ಯ ನಾಶಕ್ಕೆ ಆರೋಪಿ ಪ್ರಯತ್ನ ಮಾಡಬಹುದು ಅಥವಾ ಬೇರೆ ಅಪರಾಧಗಳನ್ನು ಮಾಡಬಹುದು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.

ತನ್ನದೇ ಕಂಪನಿಗಳಿಗೆ ಹಣ ವರ್ಗಾವಣೆ: ಅನಿಲ್ ದೇಶಮುಖ್(Anil Deshmukh) ಅವರು ಅಕ್ರಮವಾಗಿ ಗಳಿಸಲಾದ ಹಣವನ್ನು ಸುಮಾರು 11 ಕಂಪನಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಈ 11 ಕಂಪನಿಗಳಲ್ಲಿ ಅನಿಲ್ ದೇಶಮುಖ್ ಅಥವಾ ಅವರ ಕುಟುಂಬದ ಯಾವುದಾದರೂ ಒಬ್ಬ ವ್ಯಕ್ತಿ ಕಂಪನಿಯ ನಿರ್ದೇಶಕರೋ ಅಥವಾ ಮುಖ್ಯಸ್ಥರೋ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಬಾರ್ ಮತ್ತು ರೆಸ್ಟೋರೆಂಟ್​ಗಳು ಸೇರಿದಂತೆ ವಿವಿಧ ಮೂಲಗಳಿಂದ ಗಳಿಸಲಾದ ಸುಮಾರು 4.70 ಕೋಟಿ ಲಂಚದ ಹಣವನ್ನು ಅನಿಲ್ ದೇಶಮುಖ್ ತನ್ನ ಕಂಪನಿಗಳಿಗೆ ಹವಾಲಾ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ (money laundering) ಮಾಡಿದ್ದು, ಹೃಷಿಕೇಶ್ ದೇಶಮುಖ್ ಈ ರೀತಿಯಾಗಿ ಮಾಡಲು ಸೂಚನೆ ನೀಡಿದ್ದರು.

ಇಷ್ಟೇ ಅಲ್ಲದೇ ಈಗಾಗಲೇ ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಕೂಡಾ ಹಣವನ್ನು ವರ್ಗಾವಣೆ ಮಾಡಿರುವ ಆರೋಪದಲ್ಲಿ ಇದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೇಳಿದ್ದಾರೆ. ಸದ್ಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಕೋರ್ಟ್ ಡಿಸೆಂಬರ್ 4ಕ್ಕೆ ಮುಂದೂಡಿದೆ.

ಇದನ್ನೂ ಓದಿ: ದ.ಏಷ್ಯಾದಲ್ಲೇ ಮೊದಲ ಬಾರಿ 'ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್' ಪರಿಚಯಿಸಿದ ಕೆಐಎಎಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.