ETV Bharat / bharat

2,000 ರುಪಾಯಿ ನೋಟು ಬಂದ್: ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು? - Krishnamurthy Subramanian

2023ರ ಸೆಪ್ಟೆಂಬರ್ 30 ರೊಳಗೆ 2,000 ರೂ. ನೋಟುಗಳ ವಿನಿಮಯ ಪೂರ್ಣಗೊಳಿಸಬೇಕು ಎಂದು ಆರ್‌ಬಿಐ ಈಗಾಗಲೇ ಸೂಚನೆ ನೀಡಿದೆ. ಈ ನಿರ್ಧಾರದ ಕುರಿತು ದೇಶದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದೇನು ನೋಡೋಣ.

Krishnamurthy Subramanian
ಕೃಷ್ಣಮೂರ್ತಿ ಸುಬ್ರಮಣಿಯನ್
author img

By

Published : May 21, 2023, 11:26 AM IST

ಲಂಡನ್ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2,000 ರುಪಾಯಿ ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆದ ನಿರ್ಧಾರದ ಕುರಿತು ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಎರಡು ಸಾವಿರ ರು. ನೋಟು ಹಿಂತೆಗೆದುಕೊಳ್ಳುವ ಕೇಂದ್ರದ ನಿರ್ಧಾರವು 'ಒಳ್ಳೆಯ ಕ್ರಮ' ಎಂದಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಅವರು," ಈಗಾಗಲೇ ದೇಶದಲ್ಲಿ ನಡೆದ ಹಲವಾರು ದಾಳಿಗಳಲ್ಲಿ 2000 ರುಪಾಯಿ ನೋಟುಗಳನ್ನು ಹೆಚ್ಚು ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಹಣ ಸಂಗ್ರಹಿಸಲು 2000 ರುಪಾಯಿ ನೋಟು ಬಳಕೆಯಾಗುತ್ತಿದ್ದು, ವಿನಿಮಯ ಮಾಧ್ಯಮವಾಗಿ ಈ ನೋಟು ಗಣನೀಯವಾಗಿ ಕುಸಿತ ಕಂಡಿದೆ. ವಿನಿಮಯ ಮಾಧ್ಯಮವಾಗಿ 2,000 ರುಪಾಯಿ ನೋಟಿನ ಬಳಕೆ ಕಡಿಮೆಯಾಗುತ್ತಿರುವುದರಿಂದ ಪ್ರಾಥಮಿಕವಾಗಿ ಹಣ ಸಂಗ್ರಹಣೆಗೆ ಬಳಸಿಕೊಳ್ಳಲಾಗುತ್ತಿದೆ" ಎಂದಿದ್ದಾರೆ.

2,000 ರುಪಾಯಿ ನೋಟು ಹಿಂಪಡೆಯುವಿಕೆ ಈ ಕೆಳಗಿನ ಕಾರಣಗಳಿಂದಾಗಿ ಸಾರ್ವಜನಿಕರ ಮೇಲೆ ಗಮನಾರ್ಹ ಅನಾನುಕೂಲತೆ ಉಂಟು ಮಾಡುವುದಿಲ್ಲ ಎಂದು ಕೃಷ್ಣಮೂರ್ತಿ ಸುಬ್ರಮಣಿಯನ್ ಅಭಿಮತ.

1) ಬಳಕೆ ಕಡಿಮೆ: ಪ್ರಸ್ತುತ 2,000 ರುಪಾಯಿ ನೋಟುಗಳು ಚಲಾವಣೆಯಲ್ಲಿರುವ ಕರೆನ್ಸಿಯ (CiC) ಕೇವಲ 10.8 ಪ್ರತಿಶತವನ್ನು ಮಾತ್ರ ಒಳಗೊಂಡಿವೆ. ಹೀಗಾಗಿ, ಈ ನೋಟುಗಳು ವಿನಿಮಯ ಮಾಧ್ಯಮವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ. ಇದರ ಜೊತೆಗೆ, ಜನಸಾಮಾನ್ಯರು ನಿತ್ಯದ ಬದುಕಿನಲ್ಲಿ 2,000 ರುಪಾಯಿ ನೋಟುಗಳನ್ನು ಬಳಸುವ ಸಾಧ್ಯತೆಗಳು ಕಡಿಮೆ.

2) ಡಿಜಿಟಲ್ ಪಾವತಿಗಳಲ್ಲಿ ಏರಿಕೆ: ಆರ್ಥಿಕ ವಹಿವಾಟುಗಳಿಗೆ ಡಿಜಿಟಲ್ ಪಾವತಿ ವಿಧಾನಗಳ ಅಳವಡಿಕೆಯು ಗಮನಾರ್ಹವಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ಬಹುತೇಕರು ನಿತ್ಯದ ವ್ಯವಹಾರಗಳಿಗೆ ಡಿಜಿಟಲ್‌ ವಹಿವಾಟುಗಳನ್ನು (ಪೇಟಿಎಂ, ಫೋನ್‌ಪೇ, ಗೂಗಲ್‌ಪೇ) ಅವಲಂಬಿಸುತ್ತಿದ್ದಾರೆ. ಪರಿಣಾಮವಾಗಿ, ಭೌತಿಕ ಕರೆನ್ಸಿ ನೋಟುಗಳ ಪಾತ್ರ ಅದರಲ್ಲೂ ವಿಶೇಷವಾಗಿ 2,000 ದ ನೋಟುಗಳು ಕುಸಿದಿವೆ.

3) ಭವಿಷ್ಯದ ಡಿಜಿಟಲ್ ವಹಿವಾಟಿನ ಬೆಳವಣಿಗೆ: BCG ವರದಿಯ ಪ್ರಕಾರ, ಡಿಜಿಟಲ್ ವಹಿವಾಟುಗಳು 2026 ರ ವೇಳೆಗೆ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಈ ಪ್ರವೃತ್ತಿಯು ಮುಂಬರುವ ವರ್ಷಗಳಲ್ಲಿ ವಿನಿಮಯದ ಮಾಧ್ಯಮವಾಗಿ 2,000 ರುಪಾಯಿ ನೋಟಿನ ಅಗತ್ಯತೆಯನ್ನು ಕಡಿಮೆ ಮಾಡುತ್ತದೆ.

4) ಆರ್‌ಬಿಐನ ಈ ನಿರ್ಧಾರದಿಂದ ಹಣ ಅಕ್ರಮ ಸಾಗಣೆಗೆ ಇನ್ಮುಂದೆ ಕಷ್ಟವಾಗಲಿದೆ. ಅತ್ಯಂತ ದೊಡ್ಡ ಮೊತ್ತದ ನೋಟು ಎನಿಸಿರುವ 500 ರು. ಮೂಲಕ ಅಕ್ರಮ ಸಾಗಣೆ ಕಷ್ಟ ಸಾಧ್ಯ. ಹೀಗಾಗಿ ಈ ಎಲ್ಲ ಕಾರಣಗಳಿಂದಾಗಿ ಇದು "ಉತ್ತಮ ನಡೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್​ಬಿಐ ನೋಟು ಹಿಂಪಡೆದಿದ್ದು ಏಕೆ?: ಆರ್​ಬಿಐ ಪ್ರಕಾರ, 2,000 ಮುಖಬೆಲೆಯ ನೋಟುಗಳನ್ನು ನವೆಂಬರ್ 2016ರಲ್ಲಿ ಪರಿಚಯಿಸಲಾಯಿತು. ಆರ್ಥಿಕತೆಯ ಕರೆನ್ಸಿ ಅಗತ್ಯತೆಯನ್ನು ತ್ವರಿತವಾಗಿ ಪೂರೈಸಲು ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲ 500 ರು. ಮತ್ತು 1000 ರು. ನೋಟುಗಳನ್ನು ರದ್ದುಪಡಿಸಲಾಗಿತ್ತು. ಇತರೆ ಮುಖಬೆಲೆಯ ಕರೆನ್ಸಿ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ 2,000 ರು ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ. ಆರ್​ಬಿಐ ಈಗಾಗಲೇ 2018 -19 ರಿಂದ 2000 ರೂಪಾಯಿ ನೋಟುಗಳ ಮುದ್ರಣ ನಿಲ್ಲಿಸಿದೆ.

ಇದನ್ನೂ ಓದಿ : 2000 ರೂ. ನೋಟ್​ ಹಿಂಪಡೆದುಕೊಂಡ ಆರ್​ಬಿಐ... ನೋಟು ಇದ್ದವರು ಹೀಗೆ ಮಾಡಿ...! ಭಯಬೇಡ - ಆರ್​ಬಿಐ ಅಭಯ

ಇನ್ನು 2,000 ಮುಖಬೆಲೆಯ ನೋಟುಗಳ ವಿನಿಮಯವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ದೇಶದ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಮೇ 23, 2023 ರಿಂದ ಪ್ರಾರಂಭವಾಗುವ ಯಾವುದೇ ಬ್ಯಾಂಕ್‌ನಲ್ಲಿ ಈ ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.