ETV Bharat / bharat

ಕಾಲೋನಿ ಯುವಕನ ಕಟ್ಕೊಂಡು, ಮಿಸ್‌ಕಾಲ್‌ ಯುವಕನ ಪ್ರೀತಿಸಿ, ಇನ್ಸ್‌ಟಾ ಯುವಕನ ಜೊತೆ ಪರಾರಿಯಾದಳು!

ನಾಗ್ಪುರದ ಯುವತಿಯೊಬ್ಬಳು ಇಬ್ಬರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮೊದಲ ಬಾರಿಗೆ ತನ್ನ ಕಾಲೋನಿಯಲ್ಲಿ ವಾಸಿಸುವ ಯುವಕನನ್ನು ಮದುವೆಯಾದಳು, ಎರಡನೇ ಬಾರಿಗೆ ಮಿಸ್‌ಕಾಲ್ ಮೂಲಕ ಮತ್ತೊಬ್ಬನನ್ನು ಪ್ರೀತಿಸಿ ವರಿಸಿದ್ದಾಳೆ. ಈಗ ಮೂರನೇ ಬಾರಿಗೆ ಇನ್​ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿ ಆತನನ್ನೂ ಪ್ರೀತಿಸಿ 2ನೇ ಗಂಡನನ್ನು ಬಿಟ್ಟೋಡಿದ್ದಾಳೆ.

ಮಾಯಾಂಗಿನಿಗೆ ಈಗ ಮೂವರು ಗಂಡಂದಿರು: ಒಬ್ಬರ ನಂತರ ಒಬ್ಬರಿಗೆ ಮೋಸ!

author img

By

Published : Jun 9, 2022, 8:13 PM IST

ನಾಗ್ಪುರ (ಮಹಾರಾಷ್ಟ್ರ): ನಗರದಲ್ಲಿ ಅಚ್ಚರಿ ರೀತಿಯ ತ್ರಿಕೋನ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಗ್ವಾಲಿಯರ್‌ನ ಯುವತಿಯ ಬಗ್ಗೆ ಕೇಳಿ ಅನೇಕರು ಇದೀಗ ಆಘಾತಕ್ಕೊಳಗಾಗಿದ್ದಾರೆ.

ಮೊದಲ ಬಾರಿಗೆ ತನ್ನ ಕಾಲೋನಿಯಲ್ಲಿ ವಾಸಿಸುವ ಯುವಕನನ್ನು ಮದುವೆಯಾದಳು, ಎರಡನೇ ಬಾರಿಗೆ ಮಿಸ್‌ಕಾಲ್ ಮೂಲಕ ಮತ್ತೊಬ್ಬನನ್ನು ಪ್ರೀತಿಸಿ ವರಿಸಿದ್ದಾಳೆ. ಈಗ ಮೂರನೇ ಬಾರಿಗೆ ಇನ್​ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿ ಆತನನ್ನೂ ಪ್ರೀತಿಸಿ 2ನೇ ಗಂಡನನ್ನು ಬಿಟ್ಟೋಡಿದ್ದಾಳೆ.

ವಿವರ: ಗ್ವಾಲಿಯರ್‌ನ 18 ವರ್ಷದ ಯುವತಿ ವಠೋಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದಾಳೆ. ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾಗ ಅಲ್ಲಿನ ನಿವಾಸಿಗಳಲ್ಲಿ ಒಬ್ಬರ ಪರಿಚಯವಾಗಿ ಪ್ರೀತಿಸುತ್ತಿದ್ದಳು. ನೋಂದಣಿ ಕಚೇರಿಯಲ್ಲಿ ವಿವಾಹವೂ ಆಗಿ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಈ ಮದುವೆಗೆ ಸಾಕ್ಷಿ ಎಂಬಂತೆ ಒಂದು ಮಗು ಕೂಡಾ ಜನಿಸಿದೆ.

ಇದಾದ ನಂತರ ಈಕೆಯ ಮೊಬೈಲ್​ಗೆ ಒಂದು ದಿನ ಮಿಸ್‌ಕಾಲ್‌ ಬಂದಿದೆ. ಆ ಮಿಸ್‌ಕಾಲ್​ ಮಾಡಿದವನ ಹೆಸರು ಪವನ್‌. ಇದೇ ಮಿಸ್‌ ಕಾಲ್​ ತರುವಾಯ ಪ್ರೇಮವಾಗಿ ಮಾರ್ಪಾಡಾಯಿತು. ಯುವಕ ಔರಂಗಾಬಾದ್‌ ಬಿಟ್ಟು ಈಕೆಗಾಗಿ ನೇರವಾಗಿ ನಾಗ್ಪುರಕ್ಕೆ ಬಂದಿಳಿದ. ಇಬ್ಬರೂ ಭೇಟಿಯಾದಾಗ ಯುವತಿ ತನಗೆ ಈಗಾಗಲೇ ವಿವಾಹವಾಗಿರುವ ಸಂಗತಿಯನ್ನು ಮುಚ್ಚಿಟ್ಟಿದ್ದಾಳೆ.

ಮನಸಾರೆ ಪ್ರೀತಿಸುತ್ತಿದ್ದ ಪವನ್​ ಮದುವೆ ಬಗ್ಗೆ ಪ್ರಸ್ತಾಪಿಸಿ ಯುವತಿಯನ್ನು ಕೊನೆಗೂ ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡ. ನಂತರ ಇಬ್ಬರೂ ಸೋನೆಗಾಂವ್ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು. ಇದರ ನಡುವೆ ನೊಂದು ಬೆಂದ ಮೊದಲ ಪತಿ ಮದ್ಯದ ಚಟಕ್ಕೆ ಬಿದ್ದಿದ್ದಾನೆ.

ಇನ್ನು ಎರಡನೇ ಪತಿ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಯುವತಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಕೆ ಮಾಡುತ್ತಿದ್ದಳಂತೆ. ಅಲ್ಲಿ ಪರಿಚಯವಾದವನೇ ಮೂರನೇ ಸ್ನೇಹಿತ.

ಇನ್‌ಸ್ಟಾಗ್ರಾಮ್‌ನಲ್ಲಿ ಈಕೆ ಮೂರನೇ ಪ್ರೇಮಕ್ಕೆ ಬಿದ್ದಳು. ಇದಾದ ನಂತರ ಆಕೆ ಆತನೊಂದಿಗೆ ಓಡಿಹೋಗಲು ನಿರ್ಧರಿಸಿದ್ದಾಳೆ. ಎರಡನೇ ಗಂಡನನ್ನು ಬಿಟ್ಟು ಮೂರನೇ ವ್ಯಕ್ತಿಯ ಜೊತೆಗೀಗ ಜೀವನ ಮಾಡುತ್ತಿದ್ದಾಳೆ.

ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಪವನ್ ಆಕೆಗಾಗಿ ಹುಡುಕಾಟ ಆರಂಭಿಸಿದ. ಆಗ ಆತನಿಗೆ ಈಕೆಗೆ ಮೊದಲೇ ವಿವಾಹವಾಗಿ ಮೊದಲ ಪತಿಗೆೊಬ್ಬ ಮಗನೂ ಇದ್ದು, ಮೂರನೇ ಗಂಡನೊಂದಿಗೆ ವಾಸವಾಗಿರುವುದು ತಿಳಿಯಿತು. ಇದೆಲ್ಲಾ ರಂಪಾಟ ಆದ ಮೇಲೂ ಇಬ್ಬರೂ ಸೇರಿ ಆಕೆಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ, ಆಕೆ ಮಾತ್ರ ತಾನು ಮೂರನೇ ಪತಿಯೊಂದಿಗೆ ಇರುತ್ತೇನೆ ಎಂದು ಹೇಳಿದ್ದಾಳೆ.

ಮೋಸ ಹೋದ ಇವರಿಬ್ಬರೂ ಈಗ ಸಹಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ: ಗುಡ್ಡವೇರಿ ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕಿಯ ಮನವೊಲಿಸಿ ಪ್ರಾಣ ಕಾಪಾಡಿದ ಪೊಲೀಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.