ಉಕ್ರೇನ್‌ನಲ್ಲಿ ವಾಸಿಸುವ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ತುಂಬಾ ದಯನೀಯವಾಗಿದೆ ಎಂದು ಮಂಗಳವಾರ ಖಾರ್ಕೀವ್ ಮೃತ ನವೀನ್ ಅವರ ಸ್ನೇಹಿತ ಲವಕೇಶ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ನಾನು ಇಲ್ಲಿ ಸರಿಯಾಗಿ ಆಹಾರವನ್ನು ಸೇವಿಸದೆ ಒಂದು ವಾರವಾಗಿದೆ. ಶೀಘ್ರದಲ್ಲೇ ನಾವು ಈ ನಗರವನ್ನು ತೊರೆಯತ್ತೇನೆ ಎಂದು ಲವಕೇಶ್ ಆತಂಕದಿಂದಲೇ ಮಾತನಾಡಿದ್ದಾರೆ.
ಈ ನಗರವನ್ನು ಬಿಟ್ಟು ಬಾರ್ಡರ್ ತಲುಪಬೇಕಾದ್ರೆ ನಮಗೆ ಕೇವಲ ಒಂದು ಗಂಟೆ ಬೇಕು. ಆದಷ್ಟು ಬೇಗ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಿ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದರು. ವಲಕೇಶ್ ಪಂಜಾಬ್‌ನ ಬಟಿಂಡಾದ ಮೌರ್ ಮಂಡಿ ನಿವಾಸಿಯಾಗಿದ್ದು, ಅವರು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ಗೆ ತೆರಳಿದ್ದಾರೆ.
ಓದಿ: ಹಾವೇರಿಯ ನವೀನ್ ಸಾವಿಗೆ ಉಕ್ರೇನ್ ಸಂತಾಪ; ರಷ್ಯಾ ದಾಳಿ ನಿಲ್ಲಿಸಲು ಮೋದಿಗೆ ಮನವಿ