ಮೇಷ: ಈ ವಾರದಲ್ಲಿ ಯಾವುದೇ ವಿಶೇಷ ಲಾಭ ನಿಮಗೆ ದೊರಕದು. ವಾರದ ಆರಂಭಿಕ ದಿನದಿಂದಲೇ ನಿಮ್ಮಲ್ಲಿ ಮಾನಸಿಕ ಒತ್ತಡ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ, ವಾರದ ಆರಂಭದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನಷ್ಟ ಉಂಟಾದೀತು. ನಿಮ್ಮ ಗೆಳೆಯರ ನೆರವು ಮತ್ತು ಸಹಾನುಭೂತಿಯನ್ನು ಪಡೆಯಲು ಯತ್ನಿಸಿ. ನಿಮ್ಮ ಸ್ನೇಹಿತರಲ್ಲಿ ಯಾರಾದರೂ ವ್ಯಕ್ತಿಯನ್ನು ನೀವು ಇಷ್ಟಪಡಬಹುದು ಹಾಗೂ ಪ್ರೇಮವನ್ನು ನಿವೇದಿಸಿಕೊಳ್ಳಬಹುದು. ಆದರೂ ಈ ವಿಚಾರದಲ್ಲಿ ಸಾಕಷ್ಟು ಕಾಳಜಿ ವಹಿಸಿ. ಇಲ್ಲದಿದ್ದರೆ ನೀವು ಸಮಸ್ಯೆಯಲ್ಲಿ ಸಿಲುಕಿ ಬೀಳಬಹುದು. ಈ ವಾರದಲ್ಲಿ ನಿಮ್ಮ ಪ್ರೇಮ ಬದುಕಿನಲ್ಲಿ ಪ್ರಣಯವನ್ನು ವೃದ್ಧಿಸಲು ನಿಮಗೆ ಅವಕಾಶ ದೊರೆಯಬಹುದು. ಆದರೆ ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಒಂದಷ್ಟು ಒತ್ತಡ ಉಂಟಾಗಬಹುದು. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ವಾಗ್ವಾದ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸಕ್ಕೆ ವೇಗ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ಅವರು ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ ಹಾಗೂ ಈ ಎಲ್ಲಾ ಪ್ರಯತ್ನಗಳು ಭವಿಷ್ಯದಲ್ಲಿ ಅವರ ನೆರವಿಗೆ ಬರಲಿವೆ.
ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಕೌಟುಂಬಿಕ ಬದುಕಿನಲ್ಲಿ ಒತ್ತಡವು ಹೆಚ್ಚುವ ಕಾರಣ ವಿವಾಹಿತ ವ್ಯಕ್ತಿಗಳು ಸ್ವಲ್ಪ ಬೇಸರವನ್ನು ಅನುಭವಿಸಬಹುದು. ಇದಕ್ಕಾಗಿ ನಿಮ್ಮ ಕುಟುಂಬದ ಸದಸ್ಯರ ಜೊತೆ ನೀವು ಮಾತನಾಡಬೇಕು. ಆದರೆ ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪ್ರೇಮ ಜೀವನಕ್ಕಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಹದಗೆಡಬಹುದು. ಒಟ್ಟಾರೆಯಾಗಿ ಈ ವಾರದಲ್ಲಿ ಸಾಕಷ್ಟು ಖರ್ಚುವೆಚ್ಚ ಉಂಟಾಗಲಿದೆ. ಈಗ ನೀವು ನಿಮ್ಮ ಕೆಲಸದಲ್ಲಿ ಸುಧಾರಣೆ ತರುವ ಕುರಿತು ಯೋಚಿಸಬಹುದು. ನಿಮಗೆ ಕೆಲವೊಂದು ಹೊಸ ಕೊಡುಗೆಗಳು ಲಭಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನಿಮಗೆ ಕೆಲವೊಂದು ಹೊಸ ಕೊಡುಗೆಗಳು ಲಭಿಸಬಹುದು. ವ್ಯವಹಾರದಲ್ಲಿರುವ ಜನರು ತಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಹೊಸ ಜನರನ್ನು ಭೇಟಿಯಾಗಬಹುದು.
ಮಿಥುನ: ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ವೈವಾಹಿಕ ಬದುಕು ಸದೃಢವಾಗಿರಲಿದೆ. ಗುರುವಿನ ಆಶೀರ್ವಾದದ ಕಾರಣ ವೈವಾಹಿಕ ಬದುಕಿನ ಒತ್ತಡ ದೂರಗೊಳ್ಳಲಿದೆ ಹಾಗೂ ನಿಮ್ಮ ಅನ್ಯೋನ್ಯತೆಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಹೀಗಾಗಿ ಮನೆಯ ವಾತಾವರಣ ಚೆನ್ನಾಗಿರಲಿದೆ. ಕೌಟುಂಬಿಕ ಜೀವನವು ಸಂತಸ ಮತ್ತು ಶಾಂತಿಯಿಂದ ಕೂಡಿರಲಿದೆ. ಆಸ್ತಿಯ ಮಾರಾಟದಿಂದ ಲಾಭ ದೊರೆಯಲಿದೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಈಗ ನೀವು ನಿಮ್ಮ ಪ್ರೇಮಿಗೆ ಮದುವೆಯ ಪ್ರಸ್ತಾವನೆಯನ್ನು ಮಾಡಬಹುದು. ನಿಮ್ಮ ಸಂತಸಕ್ಕಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಆದಾಯವು ಚೆನ್ನಾಗಿರಲಿದೆ. ನೀವು ಸುಖದ ಸುಪ್ಪತಿಗೆಯಲ್ಲಿ ತೇಲುತ್ತಿದ್ದೀರಿ ಎಂದು ನಿಮಗೆ ಅನಿಸಬಹುದು. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಇದು ಕೆಲವೊಂದು ಹೊಸ ಕೆಲಸಗಳನ್ನು ಪ್ರಾರಂಭಿಸಲು ನಿಮಗೆ ಅವಕಾಶ ಒದಗಿಸಲಿದೆ.
ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಂಡುಬರಬಹುದು. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಮೊಬೈಲ್ ಫೋನ್ ಅಥವಾ ಬಟ್ಟೆಗಳಂತಹ ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿರುವವರ ಪಾಲಿಗೂ ಸಮಯವು ಚೆನ್ನಾಗಿದೆ. ನಿಮ್ಮ ಪ್ರೇಮ ಜೀವನದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ವೈವಾಹಿಕ ಬದುಕನ್ನು ಸಾಗಿಸುವ ಜನರಿಗೆ, ಅವರ ಜೀವನ ಸಂಗಾತಿಯ ಕಾರಣ ಅಡಚಣೆ ಉಂಟಾಗಬಹುದು. ಜೀವನ ಸಂಗಾತಿಯ ಒರಟು ವರ್ತನೆಯ ಕಾರಣ ವೈವಾಹಿಕ ಜೀವನದಲ್ಲಿ ವೈಮನಸ್ಸು ಹೆಚ್ಚಲಿದೆ. ವಿವಾಹಿತ ಜನರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಸದ್ಯಕ್ಕೆ ಯಾರಾದರೂ ವ್ಯಕ್ತಿಗಳು ನಿಮ್ಮ ಮೇಲೆ ಆರೋಪವನ್ನು ಹೊರಿಸಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ ಹಾಗೂ ನಿಮ್ಮದೇ ಕೆಲಸಕಾರ್ಯಗಳಿಗೆ ಒತ್ತು ನೀಡಿರಿ. ವ್ಯವಹಾರದ ದೃಷ್ಟಿಯಿಂದ ಈ ವಾರವು ಒಳ್ಳೆಯದು. ನಿಮ್ಮ ಯೋಜನೆಗಳಿಂದ ನೀವು ಪ್ರಯೋಜನ ಪಡೆಯಲಿದ್ದೀರಿ. ಈ ವಾರದ ಆರಂಭದಿಂದಲೇ ನಿಮ್ಮ ಯೋಚನಾಶಕ್ತಿಯನ್ನು ಬಳಸಲಿದ್ದೀರಿ ಹಾಗೂ ನಿಮ್ಮ ಕೆಲಸ ಹೇಗೆ ಮುಂದುವರಿಯುತ್ತಿದೆ ಎಂಬ ಕುರಿತು ಯೋಚಿಸಲಿದ್ದೀರಿ. ಈ ವಾರದಲ್ಲಿ, ನಿಮ್ಮ ಆದಾಯವನ್ನು ವೃದ್ಧಿಸಲು ನೀವು ಗಮನ ನೀಡಲಿದ್ದೀರಿ.
ಸಿಂಹ: ಈ ವಾರ ನಿಮಗೆ ಮಿಶ್ರ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳಿಗೆ ಅವರ ಕೌಟುಂಬಿಕ ಬದುಕಿನಲ್ಲಿ ತೃಪ್ತಿ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಪ್ರಣಯ ಹಾಗೂ ಪ್ರೇಮ ಜೀವನವನ್ನು ಆನಂದಿಸಲಿದ್ದಾರೆ. ಕುಟುಂಬದ ಹಿರಿಯ ವ್ಯಕ್ತಿಯ, ಮುಖ್ಯವಾಗಿ ತಂದೆಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ನಿಮ್ಮ ತಾಯಿಯ ಮೇಲೆ ನೀವು ಹೊಂದಿರುವ ಪ್ರೀತಿಯು ಹೆಚ್ಚಲಿದೆ. ಈ ವಾರದಲ್ಲಿ ನೀವು ಪ್ರಯಾಣಿಸಬಹುದು. ನೀವು ಹೊಸ ಹೂಡಿಕೆಯನ್ನು ಮಾಡಲಿದ್ದೀರಿ. ಆದರೆ ಇದರಲ್ಲಿ ನಿಮಗೆ ಏರುಪೇರು ಉಂಟಾಗಬಹುದು. ಜಾಣ್ಮೆಯಿಂದ ಹೂಡಿಕೆ ಮಾಡಿದರೆ ಲಾಭ ದೊರೆಯುತ್ತದೆ. ಆದರೂ ಸದ್ಯಕ್ಕೆ ನಿಮ್ಮ ಖರ್ಚುವೆಚ್ಚಗಳು ನಿಯಂತ್ರಣದಲ್ಲಿರುತ್ತವೆ ಹಾಗೂ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಆದರೆ ಬಾಸ್ಗೆ ಅನುಚಿತ ಪದಗಳನ್ನು ಬಳಸಿದರೆ ನೀವು ಸಮಸ್ಯೆ ಎದುರಿಸಬೇಕಾದೀತು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಅಧ್ಯಯನದ ಜೊತೆಗೆ ನಿಮ್ಮ ಕೆಲಸಕ್ಕೂ ನೀವು ಗಮನ ನೀಡಲಿದ್ದೀರಿ.
ಕನ್ಯಾ: ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಕೌಟುಂಬಿಕ ಬದುಕಿನ ಕುರಿತು ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಚರ್ಚಿಸಲಿದ್ದೀರಿ ಹಾಗೂ ಮುಂದೆ ಸಾಗುವುದಕ್ಕಾಗಿ ನೀವು ನಿಭಾಯಿಸಬೇಕಾದ ಜವಾಬ್ದಾರಿಗಳನ್ನು ಅರಿತುಕೊಳ್ಳಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಒಂದಷ್ಟು ಒತ್ತಡವನ್ನು ಎದುರಿಸಲಿದ್ದಾರೆ. ಆದರೆ ಇನ್ನೊಂದೆಡೆ ದೀರ್ಘ ನಂಬಿಕೆಯ ವಿಚಾರ ಉಂಟಾಗಬಹುದು. ಇದರಿಂದಾಗಿ ಸಮಯವು ಚೆನ್ನಾಗಿರಲಿದೆ. ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ವಿಚಾರದಲ್ಲಿ ಲಾಭ ದೊರೆಯಲಿದೆ. ಕೆಲಸದಲ್ಲಿ ನಿಮಗೆ ಯಾರೊಂದಿಗಾದರೂ ಆಳ ಸ್ನೇಹ ಉಂಟಾಗಬಹುದು. ಇದರಿಂದಾಗಿ ನೀವು ವೈಯಕ್ತಿಕ ಸಂಬಂಧದಲ್ಲಿ ಮುಂದುವರಿಯಲಿದ್ದೀರಿ. ಇಂತಹ ಸನ್ನಿವೇಶದಲ್ಲಿ ಒಂದಷ್ಟು ಎಚ್ಚರಿಕೆಯಿಂದ ಮುಂದುವರಿಯಿರಿ. ಏಕೆಂದರೆ ಇದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಹೀಗೆ ನಿಮ್ಮ ಕೆಲಸವನ್ನು ಕೆಡಿಸಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳಿಗೆ ನಿಧಾನ ಗತಿಯಲ್ಲಿ ಫಲ ದೊರೆಯಬಹುದು. ಆದರೂ ಸಮಸ್ಯೆಗಳಿಂದ ಹೊರಬರಲು ನಿಮಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅಧ್ಯಯನದಲ್ಲಿ ಸಮಸ್ಯೆ ಎದುರಾಗಬಹುದು.
ತುಲಾ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ಇಲ್ಲಿಯತನಕ ನಿಮ್ಮ ಸಂಬಂಧದಲ್ಲಿ ನೀವು ಸತ್ಯ ಮತ್ತು ಪ್ರಾಮಾಣಿಕತೆಯನ್ನು ತೋರಿದ್ದೀರಿ. ಈಗ ನಿಮ್ಮ ಮನಸ್ಸಿನಲ್ಲಿರುವುದೆಲ್ಲವನ್ನು ಹೇಳಿ ಬಿಡಿ. ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯ ಮನವೊಲಿಸಲು ಯತ್ನಿಸಲಿದ್ದಾರೆ. ನಿಮ್ಮ ಕೆಲಸದಿಂದ ಸ್ವಲ್ಪ ಬಿಡುವು ಮಾಡಿಕೊಂಡು ನಿಮ್ಮ ಜೀವನ ಸಂಗಾತಿ ಮಾತ್ರವಲ್ಲದೆ ನಿಮ್ಮ ಕುಟುಂಬ ಹಾಗೂ ಗೆಳೆಯರೊಂದಿಗೂ ಸಮಯ ಕಳೆಯಿರಿ. ಮುಂದೆ ಸಾಗಲು ನೀವು ಅವಕಾಶ ಪಡೆಯಲಿದ್ದೀರಿ. ವ್ಯವಹಾರದಲ್ಲಿ ಹೊಸ ಹೂಡಿಕೆ ಮತ್ತು ಹೊಸ ತಂತ್ರಜ್ಞಾನವು ನಿಮ್ಮ ವ್ಯವಹಾರಕ್ಕೆ ವೇಗ ನೀಡಲಿದೆ. ನೀವು ಇದರಿಂದ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ವೇಳಾಪಟ್ಟಿಯನ್ನು ರೂಪಿಸಿ ಮುಂದೆ ಹೋಗುವುದರಿಂದ ಅವರಿಗೆ ಲಾಭ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ನಿರ್ಲಕ್ಷ್ಯ ತೋರಿದರೆ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಈ ವಾರವು ನಿಮಗೆ ಪ್ರಯಾಣಿಸಲು ಉತ್ತಮ.
ವೃಶ್ಚಿಕ: ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲ ನೀಡಲಿದೆ. ಆದರೆ ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಮನೆಯ ಕೆಲಸಗಳಿಗೆ ಸಮಯ ಬೇಕಾದೀತು. ವಿವಾಹಿತ ವ್ಯಕ್ತಿಗಳು ಹಾದಿ ತಪ್ಪಬಹುದು ಹಾಗೂ ಬೇರೆ ಎಲ್ಲಾದರೂ ಸಂತಸವನ್ನು ಪಡೆಯಲು ಯತ್ನಿಸಬಹುದು. ಈ ರೀತಿ ಮಾಡುವುದು ಸರಿಯಲ್ಲ. ಯಾರಾದರೂ ವ್ಯಕ್ತಿಯ ಜೊತೆಗೆ ಸಂಘರ್ಷ ಉಂಟಾಗಬಹುದು. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಕೆಲಸವನ್ನು ಪೂರ್ಣಗೊಳಿಸುವ ಕುರಿತು ನಿಮ್ಮ ಮನಸ್ಸಿನಲ್ಲಿ ಗೊಂದಲ ಕಾಣಿಸಿಕೊಳ್ಳಬಹುದು. ಈ ವಾರವು ವ್ಯಾಪಾರೋದ್ಯಮಿಗೆ ಉತ್ತಮ ಫಲ ನೀಡಲಿದೆ. ಆದರೆ ಅನೇಕ ಯೋಜನೆಗಳು ನಿಮ್ಮ ಗಮನವನ್ನು ಸೆಳೆಯಬಹುದು. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವೆನಿಸಲಿದೆ. ಹಣವನ್ನು ಪಡೆಯುವ ಸಾಧ್ಯತೆ ಇದ್ದು ಇದು ನಿಮ್ಮ ಸ್ಥಾನವನ್ನು ಮೇಲ್ದರ್ಜೆಗೇರಿಸಲಿದೆ.
ಧನು: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಪರಸ್ಪರ ಪ್ರೀತಿ ಮತ್ತು ಪ್ರಯಣ ಉಂಟಾಗಲಿದೆ. ಇದರ ಹೊರತಾಗಿಯೂ ನೀವು ಅನೈತಿಕ ಸಂಬಂಧವನ್ನು ಹೊಂದುವ ಸಾಧ್ಯತೆ ಇದೆ. ಇದಕ್ಕೆ ಗಮನ ನೀಡಿ. ಇಲ್ಲದಿದ್ದರೆ ಇದು ನಿಮ್ಮ ಹೆಸರನ್ನು ಕೆಡಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲವೆನಿಸಲಿದೆ. ಇಂತಹ ಯಾವುದೇ ಕೆಲಸವನ್ನು ಮಾಡಬೇಡಿ. ಇಲ್ಲದಿದ್ದರೆ ಇದು ನಿಮ್ಮ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಈ ವಾರವನ್ನು ಸಾಕಷ್ಟು ಎಚ್ಚರಿಕೆಯಿಂದ ಕಳೆಯಿರಿ. ಉದ್ಯೋಗದಲ್ಲಿರುವವರಿಗೆ ಈ ವಾರವು ದುರ್ಬಲವೆನಿಸಲಿದೆ. ಕೆಲಸದಲ್ಲಿ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಕೆಲಸಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರದಲ್ಲಿ ಅವರು ಒತ್ತಡವನ್ನು ಅನುಭವಿಸಲಿದ್ದಾರೆ. ಕೌಟುಂಬಿಕ ಸಮಸ್ಯೆಗಳ ಜೊತೆಗೆ, ಅನಾರೋಗ್ಯದ ಕಾರಣ ನೀವು ಅಧ್ಯಯನದಿಂದ ದೂರವುಳಿಯಬಹುದು.
ಮಕರ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಒಂದಷ್ಟು ವಾಗ್ವಾದ ಉಂಟಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ನಡುವಿನ ಸಂಬಂಧವು ಉತ್ತಮಗೊಳ್ಳಲಿದೆ. ನೀವು ಮದುವೆಯಾಗಲು ಯೋಜನೆ ರೂಪಿಸಬಹುದು. ಆಕಾಂಕ್ಷೆಗಳು ಪೂರ್ಣಗೊಳ್ಳುವ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ಇರಲಿದೆ. ಬಾಕಿ ಉಳಿದಿರುವ ಆಕಾಂಕ್ಷೆಯು ಈಡೇರಲಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಉತ್ತಮ ಸ್ಥಾನ ಲಭಿಸಲಿದೆ. ಇದರಿಂದಾಗಿ ನಿಮ್ಮ ಸಂಬಳದಲ್ಲಿಯೂ ಹೆಚ್ಚಳ ಉಂಟಾಗಲಿದೆ. ಆರ್ಥಿಕವಾಗಿ ನಿಮಗೆ ಲಾಭ ಉಂಟಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರ ಇಚ್ಛೆಯು ಈಡೇರಲಿದೆ. ವ್ಯವಹಾರದಲ್ಲಿ ನೀವು ಮಾಡಿಕೊಳ್ಳುವ ಡೀಲು ಲಾಭದಾಯಕವೆನಿಸಲಿದೆ. ಇದರಿಂದ ನಿಮಗೆ ಒಳ್ಳೆಯ ಆರ್ಥಿಕ ಲಾಭ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ಈ ಬಾರಿ ಸಮಸ್ಯೆಯನ್ನು ಎದುರಿಸಬಹುದು. ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವಲ್ಲಿ ಸಮಸ್ಯೆಗಳು ಉಂಟಾಗಬಹುದು. ಧ್ಯಾನದಿಂದ ನಿಮಗೆ ಲಾಭ ದೊರೆಯಲಿದೆ.
ಕುಂಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಸಂಬಂಧದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಇದರ ಹೊರತಾಗಿಯೂ, ಪರಸ್ಪರ ಒರಟುತನ ತೋರುವ ಸಾಧ್ಯತೆ ಇದೆ. ಪ್ರೇಮದ ಸಂಬಂಧದಲ್ಲಿ ಸಾಕಷ್ಟು ಪ್ರಣಯ ನೆಲೆಸಲಿದೆ. ನಿಮ್ಮ ಪ್ರೇಮಿಯೊಂದಿಗೆ ಪ್ರೇಮ ಬದುಕನ್ನು ಆನಂದಿಸಲಿದ್ದೀರಿ. ನಿಕಟ ಸಂಬಂಧದಲ್ಲಿ ವೃದ್ಧಿ ಉಂಟಾಗಲಿದೆ. ಈ ವಾರದಲ್ಲಿ ನಿಮ್ಮ ಕೆಲಸದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ಉದ್ಯೋಗದಲ್ಲಿರುವವರ ಕುರಿತು ಮಾತನಾಡುವುದಾದರೆ, ತಮ್ಮ ಪ್ರಯತ್ನದ ಮೂಲಕ ಅವರು ತಮ್ಮ ಕೆಲಸವನ್ನು ಬಲಪಡಿಸಲಿದ್ದಾರೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಯೋಜನೆಗಳು ಫಲ ನೀಡಲಿದ್ದು ನಿಮಗೆ ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಈಗ ಅಧ್ಯಯನಕ್ಕೆ ಗಮನ ನೀಡಲಿದ್ದಾರೆ ಹಾಗೂ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದಾಗಿ ಅವರಿಗೆ ಸರ್ವತೋಮುಖ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಹಾಗೂ ಲಾಭ ದೊರೆಯಲಿದೆ. ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ, ಈಗ ನೀವು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಲಿದ್ದು, ದೈಹಿಕ ಆಯಾಸ ಮತ್ತು ದೌರ್ಬಲ್ಯ ನಿಮ್ಮನ್ನು ಕಾಡಲಿದೆ.
ಮೀನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಸಾಕಷ್ಟು ಪ್ರೀತಿಯಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯು ಅವರ ಇಚ್ಛೆಯನ್ನು ನಿಮ್ಮೆದುರು ಸಾದರಪಡಿಸಲಿದ್ದಾರೆ. ಇದನ್ನು ನೀವು ಸಂತಸದಿಂದಲೇ ಈಡೇರಿಸಲಿದ್ದೀರಿ. ಇದು ನಿಮ್ಮ ಕೌಟುಂಬಿಕ ಬದುಕಿನಲ್ಲಿ ಇನ್ನಷ್ಟು ಸಂತಸ ತರಲಿದೆ. ಪ್ರಣಯದ ಬದುಕನ್ನು ಸಾಗಿಸುವವರ ಪಾಲಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಆದರೂ ನಿಮ್ಮ ಸಂಬಂಧದ ಮಿತಿಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಬೇಸರಪಡಿಸುವ ಯಾವುದೇ ಮಾತನ್ನು ಆಡಬೇಡಿ. ನಿಮ್ಮ ಪ್ರೇಮಿಯನ್ನು ನೀವು ಸಂತಸಪಡಿಸಿದರೆ ನೀವು ಸಹ ಸಂತಸದಿಂದ ಕಾಲ ಕಳೆಯಲಿದ್ದೀರಿ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಆತ್ಮವಿಶ್ವಾಸದಲ್ಲಿಯೂ ವೃದ್ಧಿ ಉಂಟಾಗಲಿದೆ. ವ್ಯಾಪಾರದಲ್ಲಿ ನೀವು ಹೊಸ ಅಪಾಯಕ್ಕೆ ತೆರೆದುಕೊಳ್ಳಲಿದ್ದು ಏನಾದರೂ ಹೊಸತನ್ನು ಮಾಡಲು ಯೋಚಿಸಲಿದ್ದೀರಿ. ವ್ಯವಹಾರಕ್ಕೆ ವೇಗ ದೊರೆಯಲಿದೆ ಹಾಗೂ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಖರ್ಚು ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ನೀವು ಸಂತಸವನ್ನು ಆನಂದಿಸಲಿದ್ದೀರಿ. ಕೆಲಸದಲ್ಲಿ ಗೆಳೆಯರ ಬೆಂಬಲ ದೊರೆಯಲಿದೆ.