ETV Bharat / bharat

ಉ.ಪ್ರದೇಶದ ಗ್ರಾಮ, ಪಟ್ಟಣಗಳ ವೈದ್ಯಕೀಯ ವ್ಯವಸ್ಥೆ 'ರಾಮ್ ಭರೋಸ್' ಆಗಿದೆ: ಹೈಕೋರ್ಟ್ ಕಳವಳ - ಮೀರತ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿ ಸಾವು

ಮೀರತ್​ನಂತಹ ಮಹಾನಗರಗಳಲ್ಲಿ ವೈದ್ಯಕೀಯ ವ್ಯವಸ್ಥೆ ಇಷ್ಟೊಂದು ಹದಗೆಟ್ಟರೆ, ಇನ್ನು ಗ್ರಾಮೀಣ ಭಾಗ, ಪಟ್ಟಣಗಳ ವೈದ್ಯಕೀಯ ವ್ಯವಸ್ಥೆ ಹೇಗಿರಬಹುದು? ಎಂದು ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

Entire medical system UP 'Ram bharose' says HC
ಉತ್ತರ ಪ್ರದೇಶದ ವೈದ್ಯಕೀಯ ಅವ್ಯವಸ್ಥೆ
author img

By

Published : May 18, 2021, 11:05 AM IST

ಅಲಹಾಬಾದ್: ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಮತ್ತು ಕ್ವಾರಂಟೈನ್​ ಕೇಂದ್ರಗಳ ಸ್ಥಿತಿಗತಿಗಳ ಕುರಿತು ಸಲ್ಲಿಸಲಾಗಿದ್ದ ಪಿಐಎಲ್​ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶ ಮತ್ತು ಸಣ್ಣ ನಗರಗಳ ಸಂಪೂರ್ಣ ವೈದ್ಯಕೀಯ ವ್ಯವಸ್ಥೆ 'ರಾಮ್ ಭರೋಸ್' ಎನ್ನುವಂತೆ ಆಗಿದೆ ಎಂದು ಹೇಳಿದೆ.

ಮೀರತ್​ ಆಸ್ಪತ್ರೆಯ ಐಸೋಲೇಶನ್ ವಾರ್ಡ್​ಗೆ ದಾಖಲಾಗಿದ್ದ 64 ವರ್ಷದ ಸಂತೋಷ್ ಕುಮಾರ್ ಎಂಬವರ ಸಾವು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ದಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ ಈ ರೀತಿ ತಿಳಿಸಿದೆ.

ಸಂತೋಷ್ ಅವರು ಏಪ್ರಿಲ್ 22 ರಂದು ಆಸ್ಪತ್ರೆಯ ಸ್ನಾನನ ಗೃಹದಲ್ಲಿ ಮೂರ್ಛೆ ತಪ್ಪಿ ಬಿದ್ದಿದ್ದರು. ಅವರನ್ನು ಬದುಕಿಸುವ ಪ್ರಯತ್ನ ಮಾಡಿದ್ದರೂ ಸಫಲವಾಗಿರಲಿಲ್ಲ. ಇದಾದ ಬಳಿಕ ವೈದ್ಯರು ಅವರನ್ನು ಅಪರಿಚಿತ ಶವವೆಂದು ವಿಲೇವಾರಿ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಆಸ್ಪತ್ರೆ ಸಿಬ್ಬಂದಿ ಮೃತ ವ್ಯಕ್ತಿಯ ಗುರುತು ಮತ್ತು ಆತನ ಫೈಲ್ ಹುಡುಕುವಲ್ಲಿ ವಿಫಲವಾಗಿದ್ದರು. ಬಳಿಕ ಅಪರಿಚಿತ ಮೃತ ದೇಹವೆಂದು ಚೀಲದಲ್ಲಿ ತುಂಬಿ ವಿಲೇವಾರಿ ಮಾಡಿದ್ದರು ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ನಕಲಿ ಸಂಘ, ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರಿ: ಸೋನು ಸೂದ್ ಮನವಿ

ಈ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್, ಮೀರತ್​ನಂತಹ ನಗರಗಳ ಪರಿಸ್ಥಿತಿ ಹೀಗಾದರೆ, ಇನ್ನು ರಾಜ್ಯದ ಗ್ರಾಮೀಣ ಭಾಗ ಮತ್ತು ಸಣ್ಣ ನಗರಗಳ ವೈದ್ಯಕೀಯ ವ್ಯವಸ್ಥೆ ರಾಮ್ ಭರೋಸ್ (ದೇವರೇ ಕಾಪಾಡಬೇಕು ಎನ್ನುವಂತೆ) ಆಗಿರಬಹುದು ಎಂದಿದೆ.

ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಈ ರೀತಿ ಅಜಾಗರೂಕತೆ ತೋರಿರುವುದು ಒಂದು ಗಂಭೀರ ವಿಷಯವಾಗಿದೆ. ಇದು ಮುಗ್ದ ಜನರ ಜೀವನದೊಂದಿಗೆ ಚೆಲ್ಲಾಟವಾಡಿದಂತಿದೆ. ರಾಜ್ಯ ಸರ್ಕಾರ ಬೇಜವಾಬ್ದಾರಿ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.