ETV Bharat / bharat

ASER Report: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯ ಏರಿಕೆ, ಕಾರಣ ಇಲ್ಲಿದೆ..

ಕೊರೊನಾ ಮಹಾಮಾರಿ (Covid 19 Pandemic) ಸಂದರ್ಭದಲ್ಲಿ ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ ಎಂದು ಸಮೀಕ್ಷೆ ಹೇಳುತ್ತಿದೆ.

govt schools
govt schools
author img

By

Published : Nov 17, 2021, 3:34 PM IST

ನವದೆಹಲಿ: ಮೂಲಭೂತ ಸೌಲಭ್ಯಗಳಿಂದ ಸರ್ಕಾರಿ ಶಾಲೆಗಳು ವಂಚಿತವಾಗಿರುತ್ತವೆ ಎಂಬ ಕಾರಣದಿಂದಾಗಿ ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ (Private Schools) ಕಳುಹಿಸುತ್ತಾರೆ. ಆದರೆ ಇದೀಗ ಬಹಿರಂಗಗೊಂಡಿರುವ ಮಹತ್ವದ ಸಮೀಕ್ಷಾ ವರದಿಯೊಂದರ ಪ್ರಕಾರ, ಕಳೆದೊಂದು ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಪ್ರಮಾಣ (Enrollment in govt schools) ಗಣನೀಯವಾಗಿ ಹೆಚ್ಚಳವಾಗಿದೆ.

2020ರ ASER (Annual Status of Education Report) ಸಮೀಕ್ಷೆಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಶೇ. 65.8ರಿಂದ ಶೇ. 70.3ರಷ್ಟು ಏರಿಕೆಯಾಗಿದೆ. ಇದಕ್ಕೆ ಕೊರೊನಾ ವೈರಸ್​ ಕೂಡ ಒಂದು ಮಟ್ಟದಲ್ಲಿ ಕಾರಣ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Jai Bhim : ಪಾರ್ವತಿ ಅಮ್ಮಾಳ್​ಗೆ 15 ಲಕ್ಷ ರೂ. ಚೆಕ್​​ ನೀಡಿದ ನಟ ಸೂರ್ಯ

ದೇಶದ 25 ರಾಜ್ಯಗಳ 581 ಗ್ರಾಮೀಣ ಜಿಲ್ಲೆಯಗಳಲ್ಲಿನ 5-16 ವಯಸ್ಸಿನ 75,234 ಮಕ್ಕಳನ್ನು ದೂರವಾಣಿ ಮೂಲಕ ಇಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದೆ.

ಸಮೀಕ್ಷೆ ಬಿಡುಗಡೆ ಮಾಡಿದ ಏಸರ್‌(ASER) ನಿರ್ದೇಶಕಿ ವಿಲಿಮಾ ವಾಧ್ವಾ, 'ಸೆಪ್ಟೆಂಬರ್​​-ಅಕ್ಟೋಬರ್​​ನಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. 17,814 ಗ್ರಾಮಗಳಲ್ಲಿ 76,606 ಕುಟುಂಬಗಳು ಈ ಸಮೀಕ್ಷೆಗೊಳಪಟ್ಟಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ 2018ರಲ್ಲಿ ಶೇ. 64.03 ರಿಂದ 2020ರಲ್ಲಿ ಶೇ. 65.8 ಹಾಗೂ 2021ರಲ್ಲಿ ಶೇ 70.3ಕ್ಕೆ ಏರಿಕೆಯಾಗಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು, ಶೇ. 28.8ರಿಂದ ಶೇ. 24.4ಕ್ಕೆ ಇಳಿಕೆಯಾಗಿದೆ' ಎಂದು ವಿವರಿಸಿದರು.

ದಾಖಲಾತಿ ಹೆಚ್ಚಳಕ್ಕೆ ಕಾರಣಗಳು ಹೀಗಿವೆ..

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳದ ಹಿಂದೆ ಅನೇಕ ಕಾರಣಗಳಿವೆ.

1. ಸಾಂಕ್ರಾಮಿಕ ಕೋವಿಡ್‌ನಿಂದಾಗಿ (Covid-19) ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸಿವೆ. ಜೊತೆಗೆ, ಈ ಸಂದರ್ಭದಲ್ಲಿ ದೇಶದ ಅನೇಕ ಖಾಸಗಿ ಶಾಲೆಗಳು ಬಂದ್​ ಆಗಿದ್ದು ಪ್ರಮುಖ ಕಾರಣ.

2. ಅನೇಕ ವಲಸಿಗ ಕುಟುಂಬಗಳು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿ ಹೋಗಿರುವುದು ಕೂಡ ಖಾಸಗಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇಳಿಕೆಗೆ ಕಾರಣವಾಗಿದೆ.

ಉತ್ತರ ಭಾರತದ ರಾಜ್ಯಗಳು ಹಾಗೂ ತೆಲಂಗಾಣ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಮಕ್ಕಳ ದಾಖಲಾತಿಯಲ್ಲಿ ಏರಿಕೆಯಾಗಿದ್ದು, ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಶೇ. 13ರಷ್ಟು ಏರಿಕೆ ಕಂಡು ಬಂದಿದೆ.

ಕೋವಿಡ್​ ಲಾಕ್​​ಡೌನ್​ ಸಂದರ್ಭದಲ್ಲಿ ಆನ್​ಲೈನ್ ತರಗತಿಗೂ ಹೆಚ್ಚಿನ ವಿದ್ಯಾರ್ಥಿಗಳು ಮೊರೆ ಹೋಗಿದ್ದು, ಗ್ರಾಮೀಣ ಪ್ರದೇಶದಲ್ಲಿ 2018ರಲ್ಲಿ ಶೇ 36.5ರಿಂದ 2020ರಲ್ಲಿ ಶೇ 61.8ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ವರದಿ ಹೇಳುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.