ETV Bharat / bharat

ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ

ಕಾಲೇಜ್​​ ಮುಗಿಸಿಕೊಂಡು ಸ್ಕೂಟರ್ ಮೇಲೆ ಮನೆಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿನಿಯೋರ್ವಳು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Engineering student died in road accident

author img

By

Published : Dec 10, 2021, 8:55 PM IST

ಮೆಡ್ಚಲ್ (ತೆಲಂಗಾಣ): ಸ್ಕೂಟರ್​ ಮೇಲೆ ತೆರಳುತ್ತಿದ್ದ ವೇಳೆ ಇಂಜಿನಿಯರಿಂಗ್​ ವಿದ್ಯಾರ್ಥಿನಿಯೋರ್ವಳು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು, ತೆಲಂಗಾಣದ ಮೆಡ್ಚಲ್​​ನಲ್ಲಿ ಈ ಅವಘಡ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ

ಮೆಡ್ಚಲ್​​ನ ಗಂಡಿ ಮೈಸಮ್ಮ ಚೌರಸ್ಥಳದಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಅಪಘಾತದ ವೇಳೆ ಮತ್ತೋರ್ವ ಬಾಲಕಿ ಗಾಯಗೊಂಡಿದ್ದಾಳೆ. ಘಟನೆಯಲ್ಲಿ ಮೇಘನಾ ಸಾವನ್ನಪ್ಪಿದ್ದು, ಈಕೆ ಮರ್ರಿ ಲಕ್ಷ್ಮಣರೆಡ್ಡಿ ಕಾಲೇಜ್​​ನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್​​​​​ ವ್ಯಾಸಂಗ ಮಾಡ್ತಿದ್ದಳು.

ನಿನ್ನೆ ಮಧ್ಯಾಹ್ನ ಮೇಘನಾ ತನ್ನ ಸ್ನೇಹಿತೆ ಸುಮನಶ್ರೀ ಜೊತೆ ಸ್ಕೂಟರ್​​​ನಲ್ಲಿ ಕಾಲೇಜ್​​ನಿಂದ ಮನೆಗೆ ತೆರಳುತ್ತಿದ್ದಳು. ಈ ವೇಳೆ, ಹಿಂಬದಿಯಿಂದ ಬಂದ ಟಿಪ್ಪರ್​​ ಡಿಕ್ಕಿ ಹೊಡೆದಿದೆ. ಟಿಪ್ಪರ್​ನ ಹಿಂದಿನ ಚಕ್ರ ಮೇಘನಾ ಮೇಲೆ ಹರಿದು ಹೋಗಿರುವ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿರಿ: 'ರಮೀಜ್​ ರಾಜಾ PCB ಅಧ್ಯಕ್ಷರಾದ ನಂತರ ಪಾಕಿಸ್ತಾನ ತಂಡ ಉತ್ತಮ ಫಲಿತಾಂಶ ಕಂಡಿದೆಯಂತೆ'

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಟಿಪ್ಪರ್​ ಚಾಲಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.