ಬೇಗುಸರಾಯ್ (ಬಿಹಾರ): ಪಾಟ್ನದ 3 ಶೂಟರ್‌ಗಳು 16 ನರಭಕ್ಷಕ ಬೀದಿ ನಾಯಿಗಳನ್ನು ಶೂಟ್ ಮಾಡಿ ಹತ್ಯೆ ಮಾಡಿರುವ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದಿದೆ. ನಾಯಿಗಳ ಹತ್ಯೆಯಿಂದಾಗಿ ಊರಿನ ಜನರು ಬೀದಿ ನಾಯಿಗಳ ಹಾವಳಿಯು ಬಹುತೇಕ ಕೊನೆಗೊಂಡಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನರಭಕ್ಷಕ ಬೀದಿ ನಾಯಿಗಳಿಂದ ಗ್ರಾಮದಲ್ಲಿ ಸುಮಾರು ಎಂಟು ಜನರು ಧಾರುಣವಾಗಿ ಸಾವನ್ನಪ್ಪಿದ್ದರು ಮತ್ತು ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡ ಸಾವಿನ ದವಡೆಯಿಂದ ಪಾರಾಗಿದ್ದರು. ಇದರಿಂದ ಬೆಸತ್ತ ಗ್ರಾಮದ ಜನರು, ಊರಿನ ಮುಖಂಡರು ಮತ್ತು ಜನಪ್ರತಿನಿಧಿಗಳು ಎಸ್ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್)ಗೆ ಪತ್ರ ಬರೆದು ರಾಕ್ಷಸ ಬೀದಿ ನಾಯಿಗಳನ್ನು ಸಾಯಿಸುವಂತೆ ಮನವಿ ಮಾಡಿದ್ದರು.
ಎನ್‌ಕೌಂಟರ್ ಮಾಡಿದ ರಾಷ್ಟ್ರೀಯ ಶೂಟರ್‌ಗಳು: ಮಾಹಿತಿಗಳ ಪ್ರಕಾರ ಮಂಗಳವಾರ ಜಿಲ್ಲಾಡಳಿತದ ಸೂಚನೆ ಮೇರೆಗೆ ಬಚ್ವಾರಾ ಬ್ಲಾಕ್ ಬಳಿ ಇರುವ ಹೊಳೆಯ ಬಳಿ ನರಭಕ್ಷಕ ನಾಯಿಗಳನ್ನು ರಾಷ್ಟ್ರೀಯ ಶೂಟರ್‌ಗಳು 16 ನಾಯಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ನರಭಕ್ಷಕ ನಾಯಿಗಳ ಕಾಟ ಹೆಚ್ಚಾಗುತ್ತಲೆ ಇತ್ತು ಒಬ್ಬಂಟಿ ಯಾಗಿ ಯಾರಾದರು ಓಡಾಡುತ್ತಿರುವ ಸಂದರ್ಭದಲ್ಲಿ ಗುಂಪು ಗುಂಪಾಗಿ ಬಂದು ದಾಳಿ ಮಾಡಿ ಅವರನ್ನು ಕಚ್ಚಿ ಸಾಯಿಸಿಬಿಡುತ್ತಿದ್ದವು. ಈ ರಾಕ್ಷಸ ನಾಯಿಗಳು ಇದುವರೆಗೂ ಸುಮಾರು 8 ರಿಂದ 9 ಮಂದಿಯನ್ನು ಸಾಯಿಸಿದೆ ಹಾಗೂ 35 ರಿಂದ 40 ಮಂದಿಯನ್ನು ಗಂಭೀರವಾಗಿ ಗಾಯ ಗೊಳಿಸಿದೆ.
ನಾಯಿಗಳನ್ನು ಕೊಲ್ಲಲು ಎಸ್‌ಡಿಎಂಗೆ ಮನವಿ: ಸ್ಥಳೀಯ ಪಂಚಾಯಿತಿ ಪ್ರತಿನಿಧಿಗಳು ಎಸ್‌ಡಿಎಂಗೆ ಟ್ರಾಹಿಮಾಮ್ ಸಂದೇಶ ರವಾನಿಸಿ, ನರಭಕ್ಷಕ ನಾಯಿಗಳನ್ನು ಮುಕ್ತಗೊಳಿಸುವಂತೆ ಮನವಿ ಮಾಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಈ ಒಂದು ನಾಯಿಗಳನ್ನು ಎನ್‌ಕೌಂಟರ್ ಮಾಡುವ ಅಭಿಯಾನದಲ್ಲಿ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು, ಶೂಟರ್ಗಳಿಗೆ ಅಗತ್ಯ ಸಹಾಯವನ್ನು ಮಾಡಿದ್ದಾರೆ. ಈ ಮಾತನಾಡಿದ ಕುರಿತು ರೈತ ರಣಧೀರ್‌ಕುಮಾರ್ ಈಶ್ವರ್, ನರಭಕ್ಷಕ ನಾಯಿಗಳ ಕಾಟದಿಂದ ಈ ಭಾಗದ ಜನರು ಭಯಭೀತರಾಗಿದ್ದರು ಮತ್ತು ಗಾಬರಿಯಿಂದ ರೈತರು ಹೊಲದ ಕಡೆ ಹೋಗುವುದನ್ನೇ ನಿಲ್ಲಿಸಿದ್ದರು. ಇದರಿಂದ ಜಾನುವಾರುಗಳಿಗೆ ಮೇವು ಮತ್ತು ಹೊಲಗಳಲ್ಲಿ ಕೆಲಸ ಮಾಡಲು ಸಾಕಷ್ಟು ಸಮಸ್ಯೆಗಳು ಎದುರಾಗಿವೆ ಎಂದು ಹೇಳಿದರು.
ಅರಣ್ಯ ಇಲಾಖೆ ನೇತೃತ್ವದಲ್ಲಿ ಶೂಟೌಟ್: ತೇಘ್ರ ಎಸ್ಡಿಒ ರಾಕೇಶ್ ಕುಮಾರ್ ಅವರ ಮನವಿ ಮೇರೆಗೆ ಹಾಗೂ ಅರಣ್ಯ ಇಲಾಖೆಯ ಸೂಚನೆ ಮೇರೆಗೆ ಶಕ್ತಿ ಸಿಂಗ್, ರೆಹಾನ್ ಖಾನ್ , ಮತ್ತು ರಾಜಾರಾಂ ರೈ ಎಂಬ ರಾಷ್ಟ್ರೀಯ ಮಟ್ಟದ ಶೂಟರ್‌ಗಳು ನಾಯಿಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಚ್ವಾರಾ ಕದರಾಬಾದ್, ಅರ್ಬಾ, ಭಿಖಮ್‌ಚಕ್ ಮತ್ತು ರಾಣಿ ಪಂಚಾಯತ್‌ನಲ್ಲಿ ಪ್ರದೇಶದಲ್ಲಿ ಶೂಟೌಟ್ ನಡೆಸಲಾಯಿತು. ಈ ಶೂಟ್ಔಟ್ ಪ್ರಕರಣಕ್ಕೂ ಮುನ್ನ, ಇದೇ ಶೂಟರ್‌ಗಳು 12 ಬೀದಿ ನಾಯಿಗಳನ್ನು ಕೊಂದು ಹಾಕಿದ್ದರು.
ಇದನ್ನೂ ಓದಿ: ಮಹಿಳಾ ಕೋಚ್ಗೆ ಲೈಂಗಿಕ ಕಿರುಕುಳ ಆರೋಪ : ಎಸ್‌ಐಟಿಯಿಂದ ಸಚಿವ ಸಂದೀಪ್ ಸಿಂಗ್ ವಿಚಾರಣೆ