ಶ್ರೀನಗರ(ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಿರ್ಹಾಮಾ ಪ್ರದೇಶದಲ್ಲಿ ಮತ್ತು ಕುಲ್ಗಾಂನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್ ಲಷ್ಕರ್ ಎ ತೋಯ್ಬಾ ಉಗ್ರಗಾಮಿ ಸಂಘಟನೆಯ ಕಮಾಂಡರ್ ಹತ್ಯೆಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.
ಅನಂತನಾಗ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಉಗ್ರನನ್ನು ಎಲ್‌ಇಟಿಗೆ ಸೇರಿದ ನಿಸಾರ್ ದಾರ್ ಗುರ್ತಿಸಲಾಗಿದೆ. ಉಗ್ರರ ಉಪಸ್ಥಿತಿಯ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಜಮ್ಮು ಕಾಶ್ಮೀರ್ ಪೊಲೀಸ್, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ಭದ್ರತಾ ಪಡೆಗಳು ಶಂಕಿತರು ಇರುವ ಸ್ಥಳವನ್ನು ಸಮೀಪಿಸಿದ ತಕ್ಷಣ, ಉಗ್ರರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಅನಂತನಾಗ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಉಗ್ರನನ್ನು ಎಲ್‌ಇಟಿಗೆ ಸೇರಿದ ನಿಸಾರ್ ದಾರ್ ಗುರ್ತಿಸಲಾಗಿದೆ.
-
#KulgamEncounterUpdate: 01 local #terrorist of proscribed #terror outfit LeT killed. Search going on. Further details shall follow. @JmuKmrPolice https://t.co/eHh31sdbHn
— Kashmir Zone Police (@KashmirPolice) April 9, 2022 " class="align-text-top noRightClick twitterSection" data="
">#KulgamEncounterUpdate: 01 local #terrorist of proscribed #terror outfit LeT killed. Search going on. Further details shall follow. @JmuKmrPolice https://t.co/eHh31sdbHn
— Kashmir Zone Police (@KashmirPolice) April 9, 2022#KulgamEncounterUpdate: 01 local #terrorist of proscribed #terror outfit LeT killed. Search going on. Further details shall follow. @JmuKmrPolice https://t.co/eHh31sdbHn
— Kashmir Zone Police (@KashmirPolice) April 9, 2022
ಇದಷ್ಟು ಮಾತ್ರವಲ್ಲದೇ ಕುಲ್ಗಾಮ್ ಜಿಲ್ಲೆಯ ಡಿಎಚ್ ಪೋರಾ ಚಾಕೆ ಸಮದ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ವೇಳೆ ಮತ್ತೊಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಹುಡುಕಾಟ ಕಾರ್ಯಾಚರಣೆಗಳು ಎರಡೂ ಸ್ಥಳಗಳಲ್ಲಿ ನಡೆಯುತ್ತಿವೆ ಎಂದು ತಿಳಿದುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅನಂತ್ನಾಗ್ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅಂತರ್ಜಾಲವನ್ನು ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಜಾನ್‌ಗೆ ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಮುಸ್ಲಿಂ ವಕೀಲರಿಂದಲೇ ಎಸ್ಪಿ, ಡಿಸಿಗೆ ದೂರು!