ETV Bharat / bharat

ಛತ್ತೀಸ್‌ಗಢ ಎನ್‌ಕೌಂಟರ್‌: ನಾಲ್ವರು ಮಹಿಳೆಯರು ಸೇರಿ 6 ಮಾವೋವಾದಿಗಳ ಹತ್ಯೆ

ತೆಲಂಗಾಣ-ಛತ್ತೀಸ್‌ಗಢ ಗಡಿಭಾಗದಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, 6 ಮಂದಿ ಮಾವೋಗಳು ಹತರಾಗಿದ್ದಾರೆ.

ಎನ್‌ಕೌಂಟರ್‌
encounter
author img

By

Published : Dec 27, 2021, 9:42 AM IST

Updated : Dec 27, 2021, 9:59 AM IST

ಹೈದರಾಬಾದ್ (ತೆಲಂಗಾಣ): ತೆಲಂಗಾಣ ಮತ್ತು ಛತ್ತೀಸ್‌ಗಢ ಗಡಿ ಭಾಗದ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ ತೆಲಂಗಾಣ ಗ್ರೇ ಹೂಂಡ್ಸ್‌ ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ. ಈ ವೇಳೆ ಭದ್ರತಾ ಪಡೆಗಳು 6 ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಿವೆ ಎಂದು ತಿಳಿದುಬಂದಿದೆ.

ವಿವರ:

ಈ ಎನ್‌ಕೌಂಟರ್‌ ಉಭಯ ರಾಜ್ಯಗಳ ಗಡಿಭಾಗದ ಜಿಲ್ಲೆಗಳಲ್ಲಿ ನಡೆದಿದೆ. ಛತ್ತೀಸ್‌ಗಢದ ಸುಕ್ಮಾ ಹಾಗು ತೆಲಂಗಾಣದ ಕೊಟ್ಟಗುಡಮ್‌ ತೆಲಂಗಾಣ ಗ್ರೇ ಹೂಂಡ್ಸ್‌ ಹಾಗು ಛತ್ತೀಸ್‌ಗಢ ಪೊಲೀಸರು ಬೆಳಗ್ಗೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಎನ್‌ಕೌಂಟರ್‌ ಚರ್ಲಾ ವಲಯದಿಂದ 25 ಕಿಲೋ ಮೀಟರ್ ದೂರದಲ್ಲಿರುವ ಕುರ್ನವಲ್ಲಿ-ಪೆಸರ್ಲಪಡು ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ತೆಲಂಗಾಣ ಪೊಲೀಸರು 6 ಮಂದಿ ಮಾವೋವಾದಿಗಳು ಹತ್ಯೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಪೈಕಿ ನಾಲ್ವರು ಮಹಿಳೆಯರಿದ್ದು, ಓರ್ವ ನಕ್ಸಲ್ ಕಮಾಂಡರ್‌ ಚರ್ಲಾ ಪ್ರದೇಶದ ಮಧು ಎಂದು ಗುರುತಿಸಲಾಗಿದೆ. ಪೊಲೀಸರು ಆರು ಮಂದಿಯ ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

Last Updated : Dec 27, 2021, 9:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.