ಗಯಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ನಕ್ಸಲ್ ವಲಯ ಕಮಾಂಡರ್ ಮತ್ತು ಮೂವರು ಉಪ ವಲಯ ಕಮಾಂಡರ್‌ಗಳು ಸೇರಿದಂತೆ ನಾಲ್ವರು ಮಾವೋವಾದಿಗಳು ಸಾವಿಗೀಡಾಗಿದ್ದಾರೆ.
ಸಿಆರ್‌ಪಿಎಫ್ ವಿವಿಧ ಎಡಪಂಥೀಯ ಉಗ್ರಗಾಮಿತ್ವ (ಎಲ್‌ಡಬ್ಲ್ಯುಇ) ಪೀಡಿತ ರಾಜ್ಯಗಳಲ್ಲಿ ನಡೆಸುತ್ತಿರುವ 13 ಕಾರ್ಯಾಚರಣೆಗಳಲ್ಲಿ ಇದು ಕೂಡ ಒಂದು ಎಂದು ಸಿಆರ್‌ಪಿಎಫ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಜೆ 5.14 ರ ಸುಮಾರಿಗೆ ಕಾರ್ಯಾಚರಣೆ ಮುಗಿದ ನಂತರ ನಾಲ್ಕು ಶವಗಳು, ಮೂರು ಎಕೆ -47 ರೈಫಲ್ ಮತ್ತು ಒಂದು ಇನ್ಸಾಸ್ ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಸಿಆರ್‌ಪಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ವಲಯ ಕಮಾಂಡರ್ ಅಮ್ರೆಶ್ ಭಕ್ತ ಮತ್ತು ಮೂವರು ಉಪ ವಲಯ ಕಮಾಂಡರ್ಗಳಾದ ಶುವಪೂಜನ್, ಶ್ರೀಕಾಂತ್ ಭ್ಯುಯಿನ್ ಮತ್ತು ಉದಯ್ ಪಾಸ್ವಾನ್ ಹತರಾಗಿದ್ದಾರೆ.