ETV Bharat / bharat

ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಎನ್​​ಕೌಂಟರ್​​ನಲ್ಲಿ ಸಾವು

ಪೊಲೀಸರು ಹಾಗೂ ಸಿಧು ಮೊಸೆವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಇಬ್ಬರು ಗ್ಯಾಂಗ್​ಸ್ಟರ್​ಗಳನ್ನ ಗುಂಡಿಕ್ಕಿ ಹತ್ಯೆಗೈಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Encounter between gangsters and police
Encounter between gangsters and police
author img

By

Published : Jul 20, 2022, 3:27 PM IST

Updated : Jul 20, 2022, 5:12 PM IST

ಅಮೃತಸರ್​(ಪಂಜಾಬ್​): ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಪಂಜಾಬ್​​ನ ಅಮೃತಸರ ಜಿಲ್ಲೆಯ ಚೀಚಾ ಭಕ್ನಾ ಗ್ರಾಮದಲ್ಲಿ ನಡೆದ ಎನ್​​ಕೌಂಟರ್​​ನಲ್ಲಿ ಆರೋಪಿಗಳು ಹತ್ಯೆಗೀಡಾಗಿದ್ದಾರೆಂದು ಪಂಜಾಬ್​​​ ಡಿಜಿಪಿ ಗೌರವ್​ ಯಾದವ್​ ತಿಳಿಸಿದ್ದಾರೆ. ಗುಂಡೇಟಿಗೆ ಬಲಿಯಾದವರನ್ನ ಜಗ್ರೂಪ್​ ಸಿಂಗ್​​ ಹಾಗೂ ಮನ್​​ಪ್ರೀತ್​ ಸಿಂಗ್​ ಎಂದು ಗುರುತಿಸಲಾಗಿದೆ. ಇವರಿಂದ ಎಕೆ 47 ಹಾಗೂ ಕೆಲ ಪಿಸ್ತೂಲ್​​ ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಯಲ್ಲಿ ಮೂವರು ಪೊಲೀಸ್​ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಗ್ಯಾಂಗ್​​​ಸ್ಟರ್​ - ಪೊಲೀಸರ ನಡುವೆ ಗುಂಡಿನ ಕಾಳಗ

ಗಾಯಕ, ರಾಜಕೀಯ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ಮತ್ತು ಪಂಜಾಬ್​​ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಮನೆಯಿಂದ ಜನರು ಹೊರಬಾರದಂತೆ ಪೊಲೀಸರು ಈಗಾಗಲೇ ಆದೇಶ ಹೊರಡಿಸಿದ್ದರು. ಅಮೃತಸರ್​ದ ಚೋಚಾ ಭಕ್ನಾ ಗ್ರಾಮದಲ್ಲಿ ಎನ್​​ಕೌಂಟರ್​ ನಡೆದಿದೆ. ಆರಂಭದಲ್ಲಿ ಓರ್ವ ಆರೋಪಿಯನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದ ಪೊಲೀಸರು ತದನಂತರ ಮತ್ತೋರ್ವನ ಹೆಡಮುರಿ ಕಟ್ಟಿದ್ದಾರೆ. ಇದೇ ವೇಳೆ ಘಟನೆಯಲ್ಲಿ ಒಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೇ. 19ರಂದು ಪಂಜಾಬ್​​ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೊಸೆವಾಲಾ ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಗ್ಯಾಂಗ್​ಸ್ಟರ್​ಗಳಾದ ಜಗರೂಪ್ ಸಿಂಗ್​, ಮನಪ್ರೀತ್​ ಸಿಂಗ್​​ ಸೇರಿದಂತೆ ಕೆಲವರ ಬಂಧನ ಮಾಡಿದ್ದಾರೆ.

ಇದನ್ನೂ ಓದಿರಿ: ಕೈಯಲ್ಲಿ ಪಿಸ್ತೂಲ್ ಹಿಡಿದು ಸಂಭ್ರಮ.. ಸಿಧು ಮೂಸೆವಾಲಾ ಹಂತಕರ ವಿಡಿಯೋ ವೈರಲ್!

ಇದರ ಬೆನ್ನಲ್ಲೇ ಉಳಿದ ಆರೋಪಿಗಳಿಗೋಸ್ಕರ ಪೊಲೀಸರು ಶೋಧಕಾರ್ಯ ನಡೆಸಿದ್ದರು. ಇದೀಗ ಮೂವರು ಆರೋಪಿಗಳು ಚೀಚಾ ಭಕ್ನಾ ಗ್ರಾಮದಲ್ಲಿ ಪತ್ತೆಯಾಗಿದ್ದು, ಅವರ ವಿರುದ್ಧ ಎನ್​ಕೌಂಟರ್ ನಡೆಯುತ್ತಿದೆ ಎಂದು ವರದಿಯಾಗಿದೆ. ಪೊಲೀಸರು ಹಾಗೂ ಗ್ಯಾಂಗಸ್ಟರ್​ಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಎಸ್​ಹೆಚ್​​ಒ ಸುಖ್ಬೀರ್​​ ಸಿಂಗ್ ಮಾತನಾಡಿದ್ದು, ಕಾರ್ಯಾಚರಣೆ ಮುಂದುವರೆದಿದ್ದು, ಅಡಗಿ ಕುಳಿತಿರುವ ವ್ಯಕ್ತಿಗಳು ಉಗ್ರರೋ ಅಥವಾ ಗ್ಯಾಂಗಸ್ಟರ್​​ಗಳು ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಖಚಿತಿ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.

Last Updated : Jul 20, 2022, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.