ತ್ರಿಶೂರ್(ಕೇರಳ): ತ್ರಿಶೂರ್ ಪೂರಂ ಹಬ್ಬಕ್ಕೆಂದು ಕರೆತಂದಿದ್ದ ಆನೆಯೊಂದು ಏಕಾಏಕಿ ಓಡಲು ಪ್ರಾರಂಭಿಸಿದ್ದು, ನೆರೆದಿದ್ದ ಸಾವಿರಾರು ಜನರನ್ನು ಭಯಭೀತರನ್ನಾಗಿಸಿದ ಘಟನೆ ನಡೆದಿದೆ. ಹೆಚ್ಚು ಜನರು ಜಮಾಯಿಸಿದ್ದ ಮುಖ್ಯ ದೇವಾಲಯದ ಆವರಣದ ಹೊರಗೆ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಪೂರಂ ಪ್ರಕ್ರಿಯೆ ಆರಂಭಿಸಲು ಕಣಿಮಂಗಲಂ ಶಾಸ್ತವ್‌ರ ಮೆರವಣಿಗೆಯೊಂದಿಗೆ ತೆರಳಲು ಮಚಟ್ ಧರ್ಮನ್ ಎಂಬ ಆನೆಯನ್ನು ಕರೆತರಲಾಗಿತ್ತು. ಆನೆ ಮಣಿಕಂದನಾಲು ಬಳಿ ತಲುಪುತ್ತಿದ್ದಂತೆ ರೊಚ್ಚಿಗೆದ್ದು ಓಡಲು ಪ್ರಾರಂಭಿಸಿದೆ. ಆದರೆ ಆನೆಯಿಂದ ಯಾವುದೇ ವಸ್ತುಗಳಿಗೆ ಹಾನಿಯಾಗಿಲ್ಲ. ಯಾರ ಮೇಲೂ ಅದು ದಾಳಿ ಮಾಡಿಲ್ಲ ಎಂದು ತಿಳಿದುಬಂದಿದೆ.
ಈ ಜಾಗದಲ್ಲಿ ಜನ ಕಡಿಮೆ ಇದ್ದರು. ತಕ್ಷಣವೇ ಸುರಕ್ಷಿತ ಜಾಗಕ್ಕೆ ತೆರಳಿ ಪಾರಾಗಿದ್ದಾರೆ. ನಂತರ ಆನೆ ದಳ ಸ್ಥಳಕ್ಕೆ ಆಗಮಿಸಿ ಸಲಗವನ್ನು ನಿಯಂತ್ರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಡಿಯೋ ನೋಡಿ: ಪೊಲೀಸ್ ತಂಡದ ಮೇಲೆ ಚಿರತೆ ಅಟ್ಯಾಕ್; ರಕ್ಷಕರ ಧೈರ್ಯ ಮೆಚ್ಚಲೇಬೇಕು!