ಆನೆಗಳು ಮನುಷ್ಯರ ಜೊತೆ ಪ್ರೀತಿಯಿಂದ ವರ್ತಿಸುವುದನ್ನು ನಾವು ಆಗಾಗ ನೋಡುತ್ತೇವೆ. ಆನೆಗಳು ತಮ್ಮ ಯಜಮಾನನ ಪ್ರಾಣ ಉಳಿಸುವ, ಮನುಷ್ಯರು ಅವುಗಳೊಂದಿಗೆ ಪ್ರೀತಿ, ಸಲುಗೆಯಿಂದ ವರ್ತಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
ಆನೆಯೊಂದು ಬಾಲಕಿಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶನಿವಾರ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಅವರು, "ಯಾರು ಉತ್ತಮವಾಗಿ ನೃತ್ಯ ಮಾಡಿದರು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ "ಇಬ್ಬರ ನೃತ್ಯವೂ ಚೆನ್ನಾಗಿದೆ," ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ಧಾರೆ.
-
Who did better? 😅 pic.twitter.com/ku6XRTTSal
— Dipanshu Kabra (@ipskabra) September 17, 2022 " class="align-text-top noRightClick twitterSection" data="
">Who did better? 😅 pic.twitter.com/ku6XRTTSal
— Dipanshu Kabra (@ipskabra) September 17, 2022Who did better? 😅 pic.twitter.com/ku6XRTTSal
— Dipanshu Kabra (@ipskabra) September 17, 2022
ಈ ವೈರಲ್ ಕ್ಲಿಪ್‌ನಲ್ಲಿ, ಹುಡುಗಿಯೊಬ್ಬಳು ಆನೆಯ ಮುಂದೆ ನಿಂತು ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಅಚ್ಚರಿಯೆಂದರೆ ಆ ಬಾಲಕಿ ಡ್ಯಾನ್ಸ್ ಮಾಡಿದ್ದನ್ನು ಕಂಡು ಆನೆಯೂ ಕೂಡ ಆ ನೃತ್ಯಕ್ಕೆ ತಕ್ಕಂತೆ ತನ್ನ ತಲೆ ಮತ್ತು ಅಗಲವಾದ ಕಿವಿಗಳನ್ನು ಅಲ್ಲಾಡಿಸುತ್ತಾ ಆ ಹುಡುಗಿಯನ್ನು ಅನುಕರಿಸಲು ಪ್ರಾರಂಭಿಸುತ್ತದೆ.
ಈ ಕ್ಷಣವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ತಮಗಾದ ಸಂತೋಷವನ್ನು ಕಾಮೆಂಟ್‌ಗಳ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. "ಇದು ಅದ್ಭುತವಾಗಿದೆ ಮತ್ತು ತುಂಬಾ ಸುಂದರವಾಗಿದೆ. ತುಂಬಾ ಮುದ್ದಾಗಿದೆ. ಮನಸ್ಸಿಗೆ ಮುದ ನೀಡುತ್ತದೆ" ಎಂದು ಬಳಕೆದಾರರು ಹೇಳಿದ್ದಾರೆ.
ಆನೆಗಳು ಅರಣ್ಯಗಳ ಸಿವಿಲ್ ಇಂಜಿನಿಯರ್: ಇತ್ತೀಚೆಗೆ ಭಾರತೀಯ ಅರಣ್ಯ ಅಧಿಕಾರಿ (IFS) ಪರ್ವೀನ್ ಕಸ್ವಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಮಾಡಿ, ಆನೆಗಳನ್ನು 'ಅರಣ್ಯಗಳ ಸಿವಿಲ್ ಇಂಜಿನಿಯರ್'ಗಳು ಎಂದು ಉಲ್ಲೇಖಿಸಿದ್ದರು.
ಅಷ್ಟೇ ಅಲ್ಲ, "ಆನೆಗಳು ಕಾಲ್ನಡಿಗೆಗಳು ಪೊದೆಯಲ್ಲಿ ತಮ್ಮ ಹೆಜ್ಜೆಗಳ ಮೂಲಕ ರಸ್ತೆಗಳನ್ನು ಸೃಷ್ಟಿಸುತ್ತವೆ. ಅವು ಪುನರುತ್ಪಾದನೆಗೆ ಸಹಾಯ ಮಾಡುವ ಮತ್ತು ಮಣ್ಣಿನ ಸವಕಳಿಯನ್ನು ತಡೆಯಲು ನೆರವಾಗುವ ರೈತರು" ಎಂದು ಟ್ವೀಟ್ ಮಾಡಿದ್ದರು.
ದೊಡ್ಡ ಕಲ್ಲುಗಳು ಮತ್ತು ಇತರ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಪ್ರಾಚೀನ ದೇವಾಲಯ ನಿರ್ಮಾಣದಲ್ಲಿ ಆನೆಗಳನ್ನು ಬಳಸಲಾಗುತ್ತಿತ್ತು. ಪ್ರಾಚೀನ ಭಾರತದಲ್ಲಿ ಅವುಗಳು ದೇವಾಲಯಗಳನ್ನು ನಿರ್ಮಿಸುವವರಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಸ್ಪೆಷಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ: ಈ ರೀತಿಯ ಸುರಂಗ ನಿರ್ಮಿಸಲು ಗಡ್ಕರಿಗೆ ಮನವಿ