ETV Bharat / bharat

ಕಾನ್ಪುರದಲ್ಲಿ ಪಾದಚಾರಿಗಳ ಮೇಲೆ ಹರಿದ ಎಲೆಕ್ಟ್ರಿಕ್ ಬಸ್: ಸ್ಥಳದಲ್ಲೇ ಐವರು ಸಾವು! - ಕಾನ್ಪುರದಲ್ಲಿ ಪಾದಚಾರಿಗಳ ಮೇಲೆ ಹರಿದ ಎಲೆಕ್ಟ್ರಿಕ್ ಬಸ್

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾದಚಾರಿಗಳ ಮೇಲೆ ಎಲೆಕ್ಟ್ರಿಕ್ ಬಸ್‌ ಹರಿದ ಪರಿಣಾಮ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Electric bus mows down bystanders in Kanpur
ಕಾನ್ಪುರದಲ್ಲಿ ಪಾದಚಾರಿಗಳ ಮೇಲೆ ಹರಿದ ಎಲೆಕ್ಟ್ರಿಕ್ ಬಸ್
author img

By

Published : Jan 31, 2022, 6:53 AM IST

ಲಖನೌ(ಉತ್ತರ ಪ್ರದೇಶ): ಚಾಲಕನ ನಿಯಂತ್ರಣ ತಪ್ಪಿದ ಎಲೆಕ್ಟ್ರಿಕ್ ಬಸ್‌ ಪಾದಚಾರಿಗಳ ಮೇಲೆ ಹರಿದು ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದ ಟಾಟ್ ಮಿಲ್ ಕ್ರಾಸ್‌ರೋಡ್ ಬಳಿ ಭಾನುವಾರ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • Uttar Pradesh | At least five people killed and several injured in an electric bus accident in Kanpur. The incident took place near Tat Mill cross road: Pramod Kumar, DCP East Kanpur pic.twitter.com/ZzVsKMOYuZ

    — ANI UP/Uttarakhand (@ANINewsUP) January 30, 2022 " class="align-text-top noRightClick twitterSection" data=" ">

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆ ಆರಂಭಿಸಲಾಗಿದೆ ಎಂದು ಪೂರ್ವ ಕಾನ್ಪುರದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಅಪಘಾತದಲ್ಲಿ ಮೂರು ಕಾರುಗಳು ಹಾಗೂ ಹಲವು ಬೈಕ್‌ಗಳು ನುಜ್ಜು ಗುಜ್ಜಾಗಿವೆ. ಬಸ್ ಚಾಲಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  • कानपुर से सड़क हादसे का बहुत ही दुखद समाचार प्राप्त हुआ।

    मृतकों के परिजनों के प्रति मेरी गहरी शोक संवेदनाएं। मैं ईश्वर से प्रार्थना करती हूं कि घायलों को जल्द स्वास्थ्य लाभ मिले।

    — Priyanka Gandhi Vadra (@priyankagandhi) January 30, 2022 " class="align-text-top noRightClick twitterSection" data=" ">

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾನ್ಪುರ ರಸ್ತೆ ಅಪಘಾತ ದುರದೃಷ್ಟಕರ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾರು ಡಿಕ್ಕಿಯಾಗಿ ನಾಲ್ವರು ಸಾವು ಪ್ರಕರಣ​: ಮೂವರು ಅಪ್ರಾಪ್ತರು ಸೇರಿ ಕಾರು ಮಾಲೀಕ ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.