ETV Bharat / bharat

ವಾಮಾಚಾರ ಶಂಕೆ... ಬುಡಕಟ್ಟು ಜನಾಂಗದ ವಯೋವೃದ್ಧ ದಂಪತಿ ಕೊಲೆ - ಪುಣೆಯ ಸಿನ್ಹಗಡ್ ಪೊಲೀಸರು

ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಮಾಚಾರದ ಶಂಕೆಯ ಮೇಲೆ ಬುಡಕಟ್ಟು ಜನಾಂಗದ ವೃದ್ಧ ದಂಪತಿಯನ್ನು ಹೊಡೆದು ಕೊಲೆಗೈಯಲಾಗಿದೆ. ಭಾನುವಾರ ಶವವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿರುವುದನ್ನು ಕಂಡು ಗ್ರಾಮಸ್ಥರು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಬುಡಕಟ್ಟು ಜನಾಂಗದ ವಯೋವೃದ್ಧ ದಂಪತಿ ಕೊಲೆ
ಬುಡಕಟ್ಟು ಜನಾಂಗದ ವಯೋವೃದ್ಧ ದಂಪತಿ ಕೊಲೆ
author img

By

Published : Mar 26, 2023, 9:18 PM IST

ಅಹಮದ್‌ಪುರ (ಪಶ್ಚಿಮ ಬಂಗಾಳ): ವಾಮಾಚಾರದ ಶಂಕೆಯಿಂದ ವಯೋವೃದ್ಧ ಬುಡಕಟ್ಟು ದಂಪತಿಯನ್ನು ಗ್ರಾಮದ ಕೆಲವರು ಹತ್ಯೆಗೈದ ಘಟನೆ ಶುಕ್ರವಾರ ಇಲ್ಲಿನ ಬಿರ್ಭೂಮ್‌ನ ನೋಪಾರಾ ಗ್ರಾಮದಲ್ಲಿ ನಡೆದಿದೆ. ದಂಪತಿಯನ್ನು ಬೋಲ್ಪುರ್ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಪಾಂಡ್ರು ಹೆಂಬ್ರೋಮ್ (62) ಮತ್ತು ಪಾರ್ವತಿ ಹೆಂಬ್ರೋಮ್ (52) ಎಂದು ಗುರುತಿಸಲಾಗಿದೆ ಎಂದು ಸೈಂಥಿಯಾ ಪೊಲೀಸ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ನವಜಾತ ಹೆಣ್ಣು ಮಗು ಕದ್ದೊಯ್ದಿದ್ದ ಮಹಿಳೆಯ ಬಂಧನ

ಟ್ರ್ಯಾಕ್ಟರ್​ನಲ್ಲಿ ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವಾಗ ಘಟನೆ ಬೆಳಕಿಗೆ: ಬೆಣೆದಂಗ ಗ್ರಾಮದ ಸ್ಮಶಾನಕ್ಕೆ ಮೃತರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಶವಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಮುಖ್ಯಸ್ಥ ರುಬಾಯಿ ಬೆಸ್ರಾರ್ ಅವರು ಆಸ್ಪತ್ರೆಯ ಶವಾಗಾರದಿಂದ ಮೃತರ ಶವಗಳನ್ನು ಶವಸಂಸ್ಕಾರಕ್ಕಾಗಿ ತಮ್ಮ ಗ್ರಾಮಕ್ಕೆ ತರಲು ಕೆಲವು ಗ್ರಾಮಸ್ಥರನ್ನು ಕೇಳಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ : ಬೀದಿ ನಾಯಿ ಮೇಲೆ ಅತ್ಯಾಚಾರ: ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು

ಶವ ಸಂಸ್ಕಾರಕ್ಕೆ ಅವಕಾಶ ನೀಡುವಂತೆ ಪೊಲೀಸರಿಂದ ಮನವರಿಕೆ: ಘಟನೆ ಖಂಡಿಸಿ ಕೆಲ ಗ್ರಾಮಸ್ಥರು ಶವಸಂಸ್ಕಾರಕ್ಕೆ ತಡೆ ಒಡ್ಡಿದ್ದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸೈಂಥಿಯಾ ಮತ್ತು ಶಾಂತಿನಿಕೇತನ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪೊಲೀಸರು ಗ್ರಾಮದ ಮುಖಂಡನನ್ನು ಬಂಧಿಸಿ, ದಂಪತಿಯ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರ ಮನವೊಲಿಸಿದ್ದಾರೆ. ನಂತರ ಮೃತರ ಅಂತ್ಯಕ್ರಿಯೆಗೆ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ : ಭೂ ವಿವಾದದಲ್ಲಿ ಎಂಟು ವರ್ಷದ ಬಾಲಕಿಗೆ ಗುಂಡಿಕ್ಕಿ ಕೊಲೆ

ಘಟನೆಯ ಬಗ್ಗೆ ಪ್ರತಿಭಟಿಸುವುದಾಗಿ ಗ್ರಾಮಸ್ಥರ ಪ್ರತಿಕ್ರಿಯೆ: ಬೋಲ್ಪುರ ಮುನ್ಸಿಪಲ್ ಕಮಿಷನರ್ ಅಯನ್ ನಾಥ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಕ್ಕದ ಗ್ರಾಮದ ಗ್ರಾಮಸ್ಥರೊಬ್ಬರು, 'ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ನಾವು ಬಯಸುತ್ತೇವೆ. ಈ ವಯಸ್ಸಿನಲ್ಲಿ ಅವರು ವಾಮಾಚಾರ ಮಾಡಲು ಸಾಧ್ಯವಾಗುವುದಿಲ್ಲ. ಈ ಘಟನೆಯ ವಿರುದ್ಧ ನಾವು ಪ್ರತಿಭಟಿಸುತ್ತೇವೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕೊಚ್ಚಿ ಏರ್​ಪೋರ್ಟ್​ನಲ್ಲಿ​ ಭಾರತೀಯ ಕೋಸ್ಟ್​​ ಗಾರ್ಡ್ ಹೆಲಿಕಾಪ್ಟರ್​ ಪತನ

ಮನುಷ್ಯನ ಚಿತಾಭಸ್ಮ ಸೇವಿಸುವಂತೆ ಒತ್ತಾಯ: ಜನವರಿಯಲ್ಲಿ ಪುಣೆಯ ಸಿನ್ಹಗಡ್ ಪೊಲೀಸರು 28 ವರ್ಷದ ಮಹಿಳೆಯ ಮೇಲೆ ವಾಮಾಚಾರದ ಚಟುವಟಿಕೆಗಳನ್ನು ಪ್ರದರ್ಶಿಸಿದ ಆರೋಪದಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತೆ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿತ್ತು. ಆಕೆಯ ಹೇಳಿಕೆಯ ಪ್ರಕಾರ, ಅವಳು ಗರ್ಭಿಣಿಯಾಗಲು ಮತ್ತು ಕುಟುಂಬಕ್ಕೆ ಸಮೃದ್ಧಿಯನ್ನು ತರಲು ಮನುಷ್ಯನ ಚಿತಾಭಸ್ಮವನ್ನು ಸೇವಿಸುವಂತೆ ಒತ್ತಾಯಿಸಲಾಗಿತ್ತು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ : ಪ್ರಿಯಕರನೊಂದಿಗೆ ಸೇರಿ ಮಕ್ಕಳ ಕೊಲೆಗೈದ ಪಾಪಿ ತಾಯಿ : ನಗರಸಭೆ ಸದಸ್ಯ ಸೇರಿ ಆರು ಜನರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.