ETV Bharat / bharat

'ಮಟನ್​ ತಿಂದಿದ್ದಕ್ಕೆ ಭಾರತ ವಿಶ್ವಕಪ್​ ಸೋತಿತು': ಮದ್ಯದ ಅಮಲಲ್ಲಿ ರಾಡ್​ನಿಂದ ಹೊಡೆದು ತಮ್ಮನ ಕೊಂದ ಅಣ್ಣ! - elder brother killed younger brother

ಮಟನ್​ ತಿಂದ ಕಾರಣ ಟೀಂ ಇಂಡಿಯಾ ವಿಶ್ವಕಪ್​ ಸೋತಿತು ಎಂದು ಖ್ಯಾತೆ ತೆಗೆದ ಅಣ್ಣ, ತಮ್ಮನನ್ನು ಕಬ್ಬಿಣದ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ರಾಡ್​ನಿಂದ ಹೊಡೆದು ತಮ್ಮನ ಕೊಂದ ಅಣ್ಣ!
ರಾಡ್​ನಿಂದ ಹೊಡೆದು ತಮ್ಮನ ಕೊಂದ ಅಣ್ಣ!
author img

By ETV Bharat Karnataka Team

Published : Nov 21, 2023, 10:56 PM IST

ಅಮರಾವತಿ (ಮಹಾರಾಷ್ಟ್ರ) : ಏಕದಿನ ವಿಶ್ವಕಪ್​ನಲ್ಲಿ ಭಾರತ ಕ್ರಿಕೆಟ್ ತಂಡ ಮತ್ತು ಅಭಿಮಾನಿಗಳಿಗೆ ನವೆಂಬರ್​ 19 ಅತ್ಯಂತ ಕೆಟ್ಟ ದಿನವಾಗಿದೆ. ಟೀಂ ಇಂಡಿಯಾವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್​ ಆಗಿದ್ದು ಅಸಾಧ್ಯ ಬೇಸರ ತಂದಿದೆ. ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದ್ದು, ಕೆಲ ಅನಾಹುತಗಳಿಗೂ ದಾರಿ ಮಾಡಿಕೊಟ್ಟಿದೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಾರತ ಫೈನಲ್​ನಲ್ಲಿ ಸೋತಿದ್ದರಿಂದ ಹಿರಿಯ ಪುತ್ರನೊಬ್ಬ ತನ್ನ ತಂದೆ ಮತ್ತು ಕಿರಿಯ ಸಹೋದರನ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಹೋದರ ಅಂಕಿತ್ ಇಂಗೋಲ್ ಮೃತಪಟ್ಟಿದ್ದು, ತಂದೆಯ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಘಾತಕಾರಿ ಘಟನೆ ಎಲ್ಲೆಡೆ ಸಂಚಲನ ಮೂಡಿಸಿದ್ದು, ಬದನೇರಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ಅಮರಾವತಿ ಸಮೀಪದ ಅಂಜನಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಅಂಕಿತ್ ಇಂಗೋಲ್ ಮತ್ತು ಆರೋಪಿ ಪ್ರವೀಣ್ ಇಂಗೋಲ್, ಈತನ ತಂದೆ ರಮೇಶ ಇಂಗೋಳೆ ಮೂವರೂ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಫೈನಲ್​ ಪಂದ್ಯವನ್ನು ಮನೆಯಲ್ಲಿ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಪಂದ್ಯದ ನೋಡುತ್ತಿದ್ದಾಗಲೇ ಮೂವರು ಮದ್ಯಪಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಭಾರತ ಪಂದ್ಯ ಸೋತಿದ್ದರಿಂದ ರಾತ್ರಿ ಇಬ್ಬರು ಸಹೋದರರ ಮಧ್ಯೆ ಕಿತ್ತಾಟ ನಡೆದಿದೆ. ನೀನು ಮಟನ್​ (ಕುರಿ ಮಾಂಸ) ತಿಂದ ಕಾರಣ ಟೀಂ ಇಂಡಿಯಾ ಸೋಲು ಕಂಡಿತು ಎಂದು ಹಿರಿಯ ಸಹೋದರ ಪ್ರವೀಣ್​​, ತಮ್ಮನೊಂದಿಗೆ ಜಗಳ ಕಾದಿದ್ದಾನೆ. ಇಬ್ಬರ ಜಗಳ ಬಿಡಿಸಲು ತಂದೆ ರಮೇಶ್​ ಮಧ್ಯಪ್ರವೇಶಿಸಿ ಪ್ರವೀಣನ ಮೊಬೈಲ್​ ಕಸಿದುಕೊಂಡಿದ್ದಾನೆ. ಇಷ್ಟಕ್ಕೆ ಕುಪಿತನಾದ ಆರೋಪಿ ಮನೆಯಲ್ಲಿದ್ದ ಕಬ್ಬಿಣದ ರಾಡ್​ನಿಂದ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ.

ತಲೆಗೆ ಗಂಭೀರ ಗಾಯವಾಗಿ ಕಿರಿಯ ಸಹೋದರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಂದೆಗೂ ರಾಡ್​ನಿಂದ ಹೊಡೆದಿದ್ದಾನೆ. ಇದರಿಂದ ಅವರ ತೀವ್ರ ಗಾಯಗೊಂಡಿದ್ದಾರೆ. ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ ದಾಳಿ ಮಾಡಿ ತಮ್ಮನನ್ನು ಬಲಿಪಡೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗನ ಕೊಂದ ತಂದೆ: ಉತ್ತರಪ್ರದೇಶದ ಕಾನ್ಪುರದಲ್ಲಿ ಫೈನಲ್​ ಪಂದ್ಯ ನೋಡುತ್ತಿದ್ದ ವೇಳೆ ಟಿವಿ ಆಫ್​ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡ ತಂದೆ ಪುತ್ರನನ್ನು ವಿದ್ಯುತ್​ ವೈರ್​ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಹಂತಕ ತಂದೆ ಈಗ ಜೈಲು ಸೇರಿದ್ದಾನೆ.

ಆರೋಪಿ ನವೆಂಬರ್​ 19 ರಂದು ರಾತ್ರಿ ವಿಶ್ವಕಪ್​ ಫೈನಲ್​ ಪಂದ್ಯವನ್ನು ಮನೆಯಲ್ಲಿ ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ಈ ವೇಳೆ ಪುತ್ರ ಬಂದು ಟಿವಿ ಸ್ವಿಚ್​ ಆಫ್​ ಮಾಡಿದ್ದಾನೆ. ಕುತೂಹಲದಿಂದ ಪಂದ್ಯ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಮಗನ ನಡೆಯಿಂದ ಕೋಪ ಬಂದಿದ್ದು, ಇಬ್ಬರ ಮಧ್ಯೆ ಜೋರು ಜಗಳವಾಗಿದೆ. ತಂದೆ ವಿದ್ಯುತ್ ತಂತಿಯಿಂದ ಮಗನ ಕತ್ತನ್ನು ಬಲವಾಗಿ ಬಿಗಿದಿದ್ದಾರೆ. ಇದರಿಂದ ಪುತ್ರ ಉಸಿರುಗಟ್ಟಿ ಪ್ರಾಣ ಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವಿಶ್ವಕಪ್​ ಫೈನಲ್​ ನೋಡುತ್ತಿದ್ದಾಗ ಟಿವಿ ಆಫ್​ ಮಾಡಿದ್ದಕ್ಕೆ ಮಗನ ಕತ್ತು ಹಿಸುಕಿ ಕೊಂದ ಅಪ್ಪ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.