ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ಅಸ್ಸೋಂ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಿಯ ದರ್ಶನಕ್ಕೆ ತೆರಳಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಸ್ತಾಂತರವಾದ ಬಳಿಕ ತೆರಳುತ್ತಿರುವ ಮೊದಲ ಪ್ರವಾಸ ಇದಾಗಿದೆ.
ಅಸ್ಸೋಂ ಮುಖ್ಯಮಂತ್ರಿ ಆಹ್ವಾನದಂತೆ ನಾವು ತೆರಳುತ್ತಿದ್ದೇವೆ. ರಾಜ್ಯದ ಜನತೆಯನ್ನು ಸಂತುಷ್ಟರನ್ನಾಗಿಸುವ ಭಾವದಿಂದ ಕಾಮಾಖ್ಯದೇವಿಯ ದರ್ಶನ ಮಾಡಲಿದ್ದೇವೆ. ಅದರ ಹೊರತಾಗಿ ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಏಕನಾಥ್ ಶಿಂಧೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಪ್ರವಾಸಕ್ಕೆ ಕೆಲ ಶಾಸಕರು, ಸಚಿವರು ಗೈರು ಹಾಜರಾಗಿದ್ದಾರೆ.
ಹಿನ್ನೆಲೆ: ಮಹಾರಾಷ್ಟ್ರದ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗುವ ಮುನ್ನ ಒಂದೇ ದಿನ ಎರಡು ಬಾರಿ ಕಾಮಾಖ್ಯ ದೇವಿಯ ಆಶೀರ್ವಾದ ಪಡೆದಿದ್ದರು. ಅಲ್ಲದೇ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಕಾಮಾಖ್ಯ ದೇವಿಯ ದರ್ಶನ ಪಡೆಯುವುದಾಗಿ ಪ್ರತಿಜ್ಞೆ ಮಾಡಿದ್ದರು.
ಇದನ್ನೂ ಓದಿ: ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದ 10 ಲಕ್ಷಕ್ಕೂ ಅಧಿಕ ಭಕ್ತರು.. ಕಾರ್ತಿಕ ಮಾಸದಲ್ಲಿ 30 ಕೋಟಿ ಆದಾಯ