ಕೋಲ್ಕತಾ : ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಹೆಸರನ್ನು ಮರೆಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಅವರ ಧೈರ್ಯ, ದೇಶಭಕ್ತಿ ಮತ್ತು ರಾಷ್ಟ್ರಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಬಂಗಾಳಿ ಕ್ರಾಂತಿಕಾರಿಗಳಿಗೆ ಗೌರವ ಸಲ್ಲಿಸುವ "ಶೌರ್ಯಾಂಜಲಿ ಕಾರ್ಯಕ್ರಮ" ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಮತ್ತು ಹೋರಾಟಗಳಿಂದ ಪ್ರೇರಣೆ ಪಡೆಯುವಂತೆ ಯುವಕರಿಗೆ ಕರೆ ನೀಡಿದರು.
ಓದಿ : ದೆಹಲಿ ಪೊಲೀಸರು ಬಂಧಿಸಲು ಬಂದರೆ ಅವರನ್ನೇ ಬಂಧಿಸಿ: ರೈತ ಮುಖಂಡನ ವಿವಾದಾತ್ಮಕ ಹೇಳಿಕೆ
ಸುಭಾಸ್ ಚಂದ್ರ ಬೋಸ್ ಓರ್ವ ಅದ್ಭುತ ವಿದ್ಯಾರ್ಥಿಯಾಗಿದ್ದರು ಎಂದು ಬಣ್ಣಿಸಿದ ಶಾ, ಅವರು ಐಸಿಎಸ್ ಹುದ್ದೆಯನ್ನು ಹೇಗೆ ಪಡೆದರು ಎಂಬುದನ್ನು ನೆನಪಿಸಿಕೊಂಡರು. ಬೋಸ್ ಅವರು ಬ್ರಿಟಿಷರ ದಾಸ್ಯದಲ್ಲಿ ಆರಾಮದಾಯಕ ಜೀವನಕ್ಕಿಂತ ದೇಶ ಮುಖ್ಯ ಎಂಬ ಸಂದೇಶವನ್ನು ದೇಶಕ್ಕೆ ಸಾರುವ ಸಲುವಾಗಿ ಕೆಲಸ ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು ಎಂದು ಹೇಳಿದರು.