ETV Bharat / bharat

ಟಾಲಿವುಡ್​ ಡ್ರಗ್ಸ್​​ ಕೇಸ್​​​: ರಾಣಾ ದಗ್ಗುಬಾಟಿ, ರಾಕುಲ್‌ ಪ್ರೀತ್‌ ಸಿಂಗ್‌ ಸೇರಿ 12 ಸೆಲಿಬ್ರಿಟಿಗಳಿಗೆ ಸಮನ್ಸ್​ - ನಿರ್ದೇಶಕ ಪುರಿ ಜಗನ್ನಾಥ್

ಡ್ರಗ್ಸ್​​ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಟಾಲಿವುಡ್​ನ ಸ್ಟಾರ್​ ನಟ - ನಟಿಯರಿಗೆ ಇದೀಗ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಯಾಗಿದೆ.

ED summons Tollywood celebrities
ED summons Tollywood celebrities
author img

By

Published : Aug 25, 2021, 10:15 PM IST

Updated : Aug 25, 2021, 10:29 PM IST

ಹೈದರಾಬಾದ್​: ಟಾಲಿವುಡ್​ ಸಿನಿಮಾ ಚಿತ್ರರಂಗದ ಟಾಪ್​ ನಟಿ ರಾಕುಲ್​ ಪ್ರೀತ್ ಸಿಂಗ್​,ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ರವಿ ತೇಜ್​​ ಸೇರಿದಂತೆ ಟಾಲಿವುಡ್​ನ 12 ಸ್ಟಾರ್​ ಸೆಲಿಬ್ರಿಟಿ​​​ಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್​ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ತೆಲಂಗಾಣ ಅಬಕಾರಿ ಮತ್ತು ಮಾದಕವಸ್ತುಗಳ ತಡೆ ಇಲಾಖೆಯಿಂದ ದಾಖಲಾಗಿರುವ ಕಳೆದ ನಾಲ್ಕು ವರ್ಷಗಳ ಹಿಂದೆ ಡ್ರಗ್ಸ್​ಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಅದರ ವಿಚಾರಣೆ ನಡೆಸುವ ಉದ್ದೇಶದಿಂದ ಈ ಸಮನ್ಸ್ ಜಾರಿಯಾಗಿದೆ. ಡ್ರಗ್ಸ್​ ಕಳ್ಳಸಾಗಣೆ ಮತ್ತು ಅದರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 12 ಟಾಲಿವುಡ್​ ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿಗೊಳಿಸಿದೆ.

ಇದನ್ನೂ ಓದಿರಿ: ಈ ರೀತಿಯ ಫೋಟೋ ಹರಿಬಿಟ್ಟು, ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ!

ಯಾರಿಗೆಲ್ಲ ಸಮನ್ಸ್ ಜಾರಿ?

  • ಟಾಪ್​ ಡೈರೆಕ್ಟರ್ ಪುರಿ ಜಗನ್ನಾಥ್​( ಆಗಸ್ಟ್​ 31)
  • ಚಾರ್ಮಿ ಕೌರ್​ (ಸೆಪ್ಟೆಂಬರ್​ 2)
  • ರಾಕುಲ್​ ಪ್ರೀತ್​ ಸಿಂಗ್​( ಸೆಪ್ಟೆಂಬ್​​ 6)
  • ರಾಣಾ ದಗ್ಗುಬಾಟಿ( ಸೆಪ್ಟೆಂಬರ್​​ 8)
  • ರವಿ ತೇಜ್​( ಸೆಪ್ಟೆಂಬರ್​​ 9)
  • ಶ್ರೀನಿವಾಸ್​(ಸೆಪ್ಟೆಂಬರ್​ 9)
  • ನವದೀಪ್​(ಸೆಪ್ಟೆಂಬರ್​​​ 13)
  • F ಕ್ಲಬ್​ ಜನರಲ್​ ಮ್ಯಾನೇಜರ್​​​(ಸೆಪ್ಟೆಂಬರ್​​​​ 13)
  • ಮುಮಿತ್​ ಖಾನ್​​(ಸೆಪ್ಟೆಂಬರ್​​ 15)
  • ತಾನಿಷ್​(ಸೆಪ್ಟೆಂಬರ್​​ 17)
  • ನಂದು(ಸೆಪ್ಟೆಂಬರ್​​ 20)
  • ತರುಣ್​​(ಸೆಪ್ಟೆಂಬರ್​ 22)

ವಿಚಾರಣೆ ನಡೆಸುವ ಉದ್ದೇಶದಿಂದ ಸಮನ್ಸ್ ಜಾರಿ ಮಾಡಲಾಗಿದ್ದು, ನಟಿ ರಾಕುಲ್​ ಪ್ರೀತ್​ ಸಿಂಗ್​​ ಸೆಪ್ಟೆಂಬರ್​ 6ರಂದು, ರಾಣಾ ದಗ್ಗುಬಾಟಿ ಸೆಪ್ಟೆಂಬರ್​​ 8 ಹಾಗೂ ರವಿತೇಜ್​ ಸೆಪ್ಟೆಂಬರ್ 9ರಂದು ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಟಾಲಿವುಡ್​​ನ ಟಾಪ್​ ಡೈರೆಕ್ಟರ್​ ಪುರಿ ಜಗನ್ನಾಥ್​ಗೆ ಆಗಸ್ಟ್​ 31ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ 2017ರಲ್ಲಿ 62 ಸಂಶಯಾಸ್ಪದ ವ್ಯಕ್ತಿಗಳ ಕೂದಲು ಮಾದರಿ ಸಹ ಸಂಗ್ರಹ ಮಾಡಿತ್ತು.

Last Updated : Aug 25, 2021, 10:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.