ETV Bharat / bharat

ಛತ್ತೀಸ್‌ಗಢ: ರಾಜಕೀಯ ಪಕ್ಷಕ್ಕೆ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ₹3 ಕೋಟಿ ಹಣ ರವಾನೆ; ವಶಕ್ಕೆ ಪಡೆದ ಇಡಿ - ED

ಛತ್ತೀಸ್‌ಗಢದಲ್ಲಿ ಗುರುವಾರ ಮಹದೇವ್ ಆ್ಯಪ್ ಪ್ರಚಾರಕರಿಂದ 3.12 ಕೋಟಿ ರೂಪಾಯಿ ನಗದನ್ನು ಇಡಿ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ED seizes Rs 3 crore cash
ಆನ್‌ಲೈನ್ ಬೆಟ್ಟಿಂಗ್ ಆಪ್ ಪ್ರಕರಣ: ಮಹದೇವ್ ಆ್ಯಪ್ ಪ್ರಚಾರಕರಿಂದ 3.12 ಕೋಟಿ ರೂ. ನಗದು ಇಡಿ ವಶಕ್ಕೆ
author img

By ETV Bharat Karnataka Team

Published : Nov 3, 2023, 8:22 AM IST

ನವದೆಹಲಿ: ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೂ ಮುನ್ನವೇ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವ್ ಆ್ಯಪ್ ಪ್ರಚಾರಕರಿಂದ 3.12 ಕೋಟಿ ರೂಪಾಯಿ ನಗದನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ವಶಕ್ಕೆ ಪಡಿಸಿಕೊಂಡಿದೆ. ಇಡಿ ಮಾಹಿತಿ ಪ್ರಕಾರ, ಬೆಟ್ಟಿಂಗ್ ಆ್ಯಪ್ ಪ್ರಚಾರಕರು ಛತ್ತೀಸ್‌ಗಢದಲ್ಲಿ ಬಾರಿ ಪ್ರಮಾಣದಲ್ಲಿ ಹಣ ಸಾಗಿಸುತ್ತಿದ್ದರು. ರಾಜಕೀಯ ಪಕ್ಷದ ಚುನಾವಣಾ ವೆಚ್ಚಕ್ಕಾಗಿ ಈ ಹಣ ತಲುಪಿಸಲಾಗುತ್ತಿತ್ತು. ಯುಎಇಯಿಂದ ಕಳುಹಿಸಲಾದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಯಲ್ಲಿ ಕೆಲವು ದೊಡ್ಡ ರಾಜಕೀಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಹೆಸರು ಬೆಳಕಿಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಹೊಸ ಬಳಕೆದಾರರನ್ನು ನೋಂದಾಯಿಸಲು, ಅಕ್ರಮ ಆನ್​ಲೈನ್​ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಸಕ್ರಿಯಗೊಳಿಸಲು, ಬಳಕೆದಾರರ ಐಡಿಗಳನ್ನು ರಚಿಸಲು ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಲೇಯರ್ಡ್ ವೆಬ್ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಬೆಟ್ಟಿಂಗ್ ಅಪ್ಲಿಕೇಶನ್ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ, ಭೋಪಾಲ್ ಮತ್ತು ಮುಂಬೈನಲ್ಲಿ ಶೋಧ ನಡೆಸಿ 417 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೆಪ್ಟೆಂಬರ್ 15ರಂದು ಇಡಿ ಮಾಹಿತಿ ನೀಡಿತ್ತು.

ಕೋಲ್ಕತ್ತಾ, ಭೋಪಾಲ್, ಮುಂಬೈ ಇತ್ಯಾದಿ ಪ್ರದೇಶಗಳಲ್ಲಿ ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ ಮೂಲಕ ಮಾಡಿದ ಅಕ್ರಮ ಹಣ ವರ್ಗಾವಣೆ ಜಾಲಗಳ ವಿರುದ್ಧ ಇತ್ತೀಚೆಗೆ ವ್ಯಾಪಕ ಶೋಧಗಳನ್ನು ನಡೆಸಲಾಗಿತ್ತು. ಅಪಾರ ಪ್ರಮಾಣದ ಹಣ, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿತ್ತು.

ಛತ್ತೀಸ್‌ಗಢ ವಿಧಾನಸಭಾ ಚುನಾವಣೆ: ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಿಗದಿಯಾಗಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಿದೆ. ಈವರೆಗೆ 30 ಕೋಟಿ ರೂಪಾಯಗೂ ಹೆಚ್ಚು ನಗದು, ಅಕ್ರಮ ಮದ್ಯ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣೆಗೆ ಮುನ್ನವೇ ಪೊಲೀಸರು ವಾಹನ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದಾರೆ. ರಾಜ್ಯ ತೆರಿಗೆ ಇಲಾಖೆಯು 24 ತಂಡಗಳನ್ನು ಗಡಿ ಪ್ರದೇಶಗಳಲ್ಲಿ ನಿಯೋಜಿಸಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಓಲೈಸಲು ವಿತರಿಸುವ ಸರಕು ಸಾಗಣೆ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 24 ಗಂಟೆಗಳ ಕಾಲ ವಾಹನ ತಪಾಸಣೆಗೆ ಈ ತಂಡಗಳನ್ನು ನೇಮಿಸಲಾಗಿದೆ. ಜುಲೈ 1, 2023ರಿಂದ ಅಕ್ಟೋಬರ್ 31, 2023 ರವರೆಗೆ ಒಟ್ಟು 10.10 ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ರಾಜ್ಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ; ಇಂದು, ನಾಳೆ ಶಾಲೆಗಳಿಗೆ ರಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.