ETV Bharat / bharat

₹104 ಕೋಟಿ ವಂಚನೆ ಆರೋಪ ಹೊತ್ತ ಕೇರಳದ ಕೋ ಆಪರೇಟಿವ್​ ಬ್ಯಾಂಕ್ ಮೇಲೆ ಇಡಿ ದಾಳಿ - ಕೇರಳದಲ್ಲಿ ಜಾರಿ ನಿರ್ದೇಶನಾಲಯ ದಾಳಿ

ಕರುವನ್ನೂರ್​ ಕೋ ಆಪರೇಟಿವ್​ ಬ್ಯಾಂಕ್​​ನಲ್ಲಿ 104 ಕೋಟಿ ರೂಪಾಯಿಗಳ ವಂಚನೆ ಆರೋಪ ಸಂಬಂಧ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ed-raids-karuvannur-cooperative-bank-in-kerala
104 ಕೋಟಿ ವಂಚನೆ ಆರೋಪ: ಕೇರಳದ ಕೋ ಆಪರೇಟಿವ್​ ಬ್ಯಾಂಕ್ ಮೇಲೆ ಇಡಿ ದಾಳಿ
author img

By

Published : Aug 10, 2022, 7:03 PM IST

ತಿರುವನಂತಪುರಂ (ಕೇರಳ): ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕರುವನ್ನೂರ್​​ ಕೋ ಆಪರೇಟಿವ್​ ಬ್ಯಾಂಕ್​ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ಈ ಬ್ಯಾಂಕ್​ನಲ್ಲಿ 104 ಕೋಟಿ ರೂಪಾಯಿಗಳ ವಂಚನೆ ಆರೋಪ ಕೇಳಿ ಬಂದಿದೆ. ಹೀಗಾಗಿ ಅಧಿಕಾರಿಗಳು ಬ್ಯಾಂಕ್​ ಹಾಗೂ ತ್ರಿಶೂರ್​​ನಲ್ಲಿರುವ ನಾಲ್ವರು ಆರೋಪಿಗಳ ಮನೆಗಳನ್ನು ಶೋಧಿಸಿ ದಾಖಲೆಗಳನ್ನು ಜಾಲಾಡಿದ್ದಾರೆ.

2017ರಲ್ಲಿ ಈ ಬ್ಯಾಂಕ್​ನಲ್ಲಿ ವಂಚನೆ ನಡೆದಿರುವ ಬಗ್ಗೆ ಮೊದಲ ಮಾಹಿತಿ ಹೊರಬಿದ್ದಿತ್ತು. ಆರೋಪಿಗಳು ಬ್ಯಾಂಕ್​ನಿಂದ ಹಣ ಕದ್ದು, ಅದೇ ಹಣವನ್ನು ಬೇನಾಮಿ ಠೇವಣಿ ಇಟ್ಟು ವಂಚಿಸಿದ್ದಾರೆ ಎನ್ನಲಾಗಿದೆ. ಈ ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್​ ಗ್ರಾಹಕರು ತಮ್ಮ ಠೇವಣಿ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೇವರಿಗೆ ಕೈ ಮುಗಿದು 3 ಹಣದ ಹುಂಡಿ, 2 ಘಂಟೆ ಕದ್ದೊಯ್ದ ಕಳ್ಳ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.