ETV Bharat / bharat

ಆಪ್​ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ನಿವಾಸದ ಮೇಲೆ ಇಡಿ ದಾಳಿ

author img

By

Published : Jun 6, 2022, 2:04 PM IST

ಸಚಿವ ಜೈನ್ ಷೇರುದಾರರಾಗಿರುವ ನಾಲ್ಕು ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಲು ಅಸಮರ್ಥರಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಈ ಸಂಬಂಧ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಎಎಪಿ ನಾಯಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ..

Delhi Health Minister Satyendra Jain
ಆರೋಗ್ಯ ಮತ್ತು ಗೃಹ ಸಚಿವ ಸತ್ಯೇಂದ್ರ ಜೈನ್

ನವದೆಹಲಿ : ಕೋಲ್ಕತ್ತಾ ಮೂಲದ ಕಂಪನಿಯ ಹವಾಲಾ ವಹಿವಾಟಿನ ಜೊತೆ ಸಂಬಂಧ ಇರುವ ಹಿನ್ನೆಲೆ ದೆಹಲಿಯ ಆರೋಗ್ಯ ಮತ್ತು ಗೃಹ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸದ ಮೇಲೆ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಕೇಂದ್ರ ತನಿಖಾ ಸಂಸ್ಥೆಯು ಮೇ 30ರಂದು ಜೈನ್ ಅವರನ್ನು ಬಂಧಿಸಿದ್ದು, ಜೂನ್ 9ರವರೆಗೆ ಅವರು ಇಡಿ ಕಸ್ಟಡಿಯಲ್ಲಿರಲಿದ್ದಾರೆ.

ಅಕಿಂಚನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್​, ಇಂಡೋ ಮೆಟಲ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಕಂಪನಿಗಳ ಒಡೆತನದ 4.81 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳ, ಅಕ್ರಮ ಆಸ್ತಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರ ಮನಿ ಲಾಂಡ್‌ರಿಂಗ್ ತಡೆ ಕಾಯ್ದೆಯಡಿ ಏಪ್ರಿಲ್​ನಲ್ಲಿ ಜೈನ್, ಅವರ ಪತ್ನಿ ಪೂನಂ ಜೈನ್ ಮತ್ತು ಇತರರ ಮೇಲೆ ಕೇಸು ದಾಖಲಾಗಿತ್ತು.

ಶೆಲ್​​ ಕಂಪನಿಗಳ ಮೂಲಕ ಹಣ ವರ್ಗಾವಣೆ ಆರೋಪ : ಜೈನ್ ಅವರು ಷೇರುದಾರರಾಗಿರುವ ನಾಲ್ಕು ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಲು ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಎಎಪಿ ನಾಯಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ಅದಲ್ಲದೇ ಅವರು ದೆಹಲಿಯಲ್ಲಿ ಹಲವಾರು ಶೆಲ್ ಕಂಪನಿಗಳನ್ನು ಖರೀದಿಸಿದ್ದಾರೆ ಹಾಗೂ ಕೋಲ್ಕತ್ತಾದ ಮೂವರು ಹವಾಲಾ ಆಪರೇಟರ್‌ಗಳ 54 ಶೆಲ್ ಕಂಪನಿಗಳ ಮೂಲಕ 16.39 ಕೋಟಿ ರೂಪಾಯಿ ಮೌಲ್ಯದ ಕಪ್ಪು ಹಣ ಬದಲಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಜೈನ್ ಪ್ರಯಾಸ್, ಇಂಡೋ ಮತ್ತು ಅಕಿಂಚನ್ ಹೆಸರಿನ ಕಂಪನಿಗಳಲ್ಲಿ ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಜೈನ್​ ಹೊಂದಿದ್ದರು. ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾದ ನಂತರ, ಅವರ ಎಲ್ಲ ಷೇರುಗಳನ್ನು 2015ರಲ್ಲಿ ಅವರ ಪತ್ನಿ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕಂಪನಿಗಳು ತಮ್ಮ ಕೋಲ್ಕತ್ತಾ ಕೌಂಟರ್ಪಾರ್ಟ್​ಗೆ ನಗದು ಪಾವತಿಗಳನ್ನು ವರ್ಗಾಯಿಸುತ್ತಿದ್ದವು.

ಮತ್ತು ಕಾನೂನು ವಿಧಾನಗಳ ಮೂಲಕ ಷೇರುಗಳನ್ನು ಖರೀದಿಸುವ ನೆಪದಲ್ಲಿ ಜೈನ್​ ಅವರಿಗೆ ಹಣ ಹಿಂದಿರುಗಿಸುತ್ತಿದ್ದವು. ಕಂಪನಿಗಳು 2010ರಿಂದ 2014ರವರೆಗೆ ಸತ್ಯೇಂದ್ರ ಜೈನ್ ಅವರಿಗೆ 16.39 ಕೋಟಿ ರೂಪಾಯಿಗಳಷ್ಟು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿವೆ ಎಂದು ವರದಿಯಾಗಿದೆ.

ಕಾನೂನು ಕ್ರಮಕ್ಕೆ ಸಿಕ್ಕಿತ್ತು ಅನುಮೋದನೆ : ನವೆಂಬರ್ 2019ರಲ್ಲಿ ಗೃಹ ಸಚಿವಾಲಯವು ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಅಕ್ರಮ ಆಸ್ತಿ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಅನುಮೋದನೆ ನೀಡಿತ್ತು. ಗೃಹ ಮತ್ತು ಆರೋಗ್ಯ ಖಾತೆ ಹೊರತು ಪಡಿಸಿ ಜೈನ್​ ಅವರು AAP ಸರ್ಕಾರದಲ್ಲಿ PWD ಖಾತೆಗಳ ಅಧಿಕಾರವನ್ನು ಹೊಂದಿದ್ದಾರೆ.

ಇಡಿ ವಿಚಾರಣೆ ವೇಳೆ, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ವಕೀಲರನ್ನು ಹೊಂದಲು ಅನುಮತಿ ನೀಡಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಶನಿವಾರ ತಡೆ ನೀಡಿದೆ. ಇದಕ್ಕೂ ಮುನ್ನ, 2017ರ ಆಗಸ್ಟ್ 25ರಂದು ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿತ್ತು.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್ ಗಾಂಧಿ ವಿಚಾರಣೆಗೆ ಹೊಸ ದಿನಾಂಕ ನೀಡಿದ ಇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.