ETV Bharat / bharat

ಅಕ್ರಮ ಹಣ ವರ್ಗಾವಣೆ ಕೇಸ್​​: ಇಡಿ ಚಾರ್ಜ್​ಶೀಟ್​ನಲ್ಲಿ ಪ್ರಿಯಾಂಕಾ ಗಾಂಧಿ ಹೆಸರು

author img

By ETV Bharat Karnataka Team

Published : Dec 28, 2023, 2:26 PM IST

Updated : Dec 28, 2023, 2:37 PM IST

ಹರಿಯಾಣದ ಕೃಷಿ ಭೂಮಿ ಖರೀದಿ- ಮಾರಾಟ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಅವರ ಪಾತ್ರವಿದೆ ಎಂದು ಇಡಿ ತನ್ನ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದೆ.

ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಆರೋಪಪಟ್ಟಿಯಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರನ್ನು ಉಲ್ಲೇಖಿಸಿದೆ. ಹರಿಯಾಣದ ಫರಿದಾಬಾದ್​ನಲ್ಲಿ ಕೃಷಿ ಭೂಮಿ ಖರೀದಿಸುವಲ್ಲಿ ಅವರ ಪಾತ್ರವೂ ಇದೆ ಎಂದು ಆರೋಪಿಸಲಾಗಿದೆ.

ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಅವರಿಗೆ ಶಾಕ್​ ನೀಡಿದ್ದ, ಜಾರಿ ನಿರ್ದೇಶನಾಲಯ (ಇಡಿ) ಭೂಮಿ ಖರೀದಿ -ಮಾರಾಟ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಸಂಕಷ್ಟ ತಂದೊಡ್ಡಿದೆ.

ಪ್ರಕರಣದ ಹಿನ್ನೆಲೆ: ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್‌ಎಲ್‌ ಪಹ್ವಾರಿಂದ ಹರಿಯಾಣದ ಫರಿದಾಬಾದ್‌ನಲ್ಲಿ 2006 ರಲ್ಲಿ ರಾಬರ್ಟ್​ ವಾದ್ರಾ ಅವರು 40 ಎಕರೆಗೂ ಅಧಿಕ ಕೃಷಿ ಭೂಮಿಯನ್ನು ಖರೀದಿಸಿದ್ದರು. ಬಳಿಕ 2010 ರಲ್ಲಿ ಅದನ್ನು ಅದೇ ಏಜೆಂಟ್​ಗೆ ವಾಪಸ್​​ ಮಾರಾಟ ಮಾಡಿದ್ದರು. ಇದರಲ್ಲಿ ಎನ್​ಆರ್​ಐ ಉದ್ಯಮಿ ಸಿಸಿ ಥಂಪಿ ಎಂಬುವರು ಭಾಗಿಯಾಗಿದ್ದಾರೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ದಂಧೆ ನಡೆದಿದೆ ಎಂದು ಇಡಿ ಆರೋಪಿಸಿದೆ.

ಕೃಷಿ ಭೂಮಿ ಮಾರಾಟದಲ್ಲಿ ಪ್ರಿಯಾಂಕಾ ಗಾಂಧಿ ಅವರ ಪಾತ್ರವೂ ಇದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆದರೆ, ಪ್ರಕರಣದಲ್ಲಿ ಪ್ರಿಯಾಂಕಾ ಅವರನ್ನು ನೇರ ಆರೋಪಿಯನ್ನಾಗಿ ಹೆಸರಿಸಲಾಗಿಲ್ಲ. ಪ್ರಕರಣದ ಆರೋಪಿಗಳಾದ ಉದ್ಯಮಿ ಚೆರುವತ್ತೂರು ಚಾಕುಟ್ಟಿ ಥಂಪಿ ಮತ್ತು ಯುಕೆ ಪ್ರಜೆ ಸುಮಿತ್​ ಚಡ್ಡಾ ವಿರುದ್ಧ ಹೊಸ ಚಾರ್ಜ್​ಶಿಟ್​ ಸಲ್ಲಿಸಿರುವುದಾಗಿ ಇಡಿ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಥಂಪಿ ಅವರನ್ನು ಬಂಧಿಸಲಾಗಿತ್ತು. ರಾವರ್ಟ್​ ವಾದ್ರಾಗೆ ಥಂಪಿ ಆಪ್ತ. ಇಬ್ಬರಿಗೂ ಎಚ್ಎಲ್​ ಪಹ್ವಾ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಖರೀದಿಸಲು ಬೇನಾಮಿ ಹಣ ಬಳಸಲಾಗಿದೆ. ಭೂಮಿ ಮಾರಾಟದಲ್ಲಿ ವಾದ್ರಾ ಪೂರ್ಣ ಹಣವನ್ನು ನೀಡಿಲ್ಲ ಎಂದು ಇಡಿ ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಸಿದೆ.

ಬಂಧಿಸಲ್ಪಟ್ಟ ಥಂಪಿ ತನಗೆ 10 ವರ್ಷಗಳಿಂದ ವಾದ್ರಾ ಅವರ ಪರಿಚಯವಿದೆ. ವಾದ್ರಾ ಅವರ ಯುಎಇ ಮತ್ತು ದೆಹಲಿಯ ಭೇಟಿಗಳ ಸಮಯದಲ್ಲಿ ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದಾಗಿ ತಿಳಿಸಿದ್ದಾನೆ ಎಂದು ಇಡಿ ಹೇಳಿದೆ.

ಇದನ್ನೂ ಓದಿ: 752 ಕೋಟಿ ರೂಪಾಯಿ ಮೌಲ್ಯದ ನ್ಯಾಷನಲ್ ಹೆರಾಲ್ಡ್ ಆಸ್ತಿ ಜಪ್ತಿ ಮಾಡಿದ ಇಡಿ

Last Updated : Dec 28, 2023, 2:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.