ETV Bharat / bharat

ಮುಂಬೈ ರಿಯಲ್ಟರ್ಸ್ ಗುಂಪಿನ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣ: ಮುಂಬೈ ಮೂಲದ ಉದ್ಯಮಿ ಬಂಧನ - ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮುಂಬೈ ಮೂಲದ ಉದ್ಯಮಿ ಬಂಧನ ಸುದ್ದಿ

ಕೇಂದ್ರ ತನಿಖಾ ಸಂಸ್ಥೆ ಕಳೆದ ತಿಂಗಳು ಓಂಕರ್ ರಿಯಲ್ಟರ್ಸ್ ಮತ್ತು ಡೆವಲಪರ್ಸ್‌ನ ಅಧ್ಯಕ್ಷರಾದ ಕಮಲ್‌ಕಿಶೋರ್ ಗುಪ್ತಾ ಮತ್ತು ಎಂಡಿ ಬಾಬುಲಾಲ್ ವರ್ಮಾ ಅವರನ್ನು ದಾಳಿ ವೇಳೆ ಬಂಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಉದ್ಯಮಿಯೊಬ್ಬರನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ED arrests businessman in PMLA case against Mumbai realty group
ಮುಂಬೈ ಮೂಲದ ಉದ್ಯಮಿ ಬಂಧನ
author img

By

Published : Feb 15, 2021, 11:47 AM IST

ಮುಂಬೈ (ಮಹಾರಾಷ್ಟ್ರ): ನಗರ ಮೂಲದ ರಿಯಾಲಿಟಿ ಗ್ರೂಪ್ ಓಂಕರ್ ರಿಯಲ್ಟರ್ಸ್ ಮತ್ತು ಡೆವಲಪರ್ಸ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಉದ್ಯಮಿಯೊಬ್ಬರನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಸಚಿನ್ ಜೋಶಿ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿ ನಿನ್ನೆ ಬಂಧಿಸಲಾಗಿದೆ.

ಸಚಿನ್ ಜೋಶಿ ಓರ್ವ ನಟ ಮತ್ತು ಜೆಎಂಜೆ ವ್ಯವಹಾರ ಗುಂಪಿನ ಪ್ರವರ್ತಕ ಎಂದು ಹೇಳಲಾಗಿದೆ. ರಿಯಲ್ಟರ್ಸ್ ಗುಂಪಿನೊಂದಿಗಿನ ಅವರ ಪಾತ್ರ ಮತ್ತು ಸಂಪರ್ಕಗಳನ್ನು ಪರಿಶೀಲಿಸಲಾಗುತ್ತಿದೆ.

ಸಚಿನ್ ಜೋಶಿ ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಅಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡಲು ಕೋರ್ಟ್​ಗೆ ಮನವಿ ಸಲ್ಲಿಸಲಿದೆ.

ಇದನ್ನೂ ಓದಿ: ವಿರುಧುನಗರ್ ಪಟಾಕಿ ದುರಂತ: ಸಾವಿನ ಸಂಖ್ಯೆ 20ಕ್ಕೆ ಏರಿಕೆ

ಕೇಂದ್ರ ತನಿಖಾ ಸಂಸ್ಥೆ ಕಳೆದ ತಿಂಗಳು ಓಂಕರ್ ರಿಯಲ್ಟರ್ಸ್ ಮತ್ತು ಡೆವಲಪರ್ಸ್‌ನ ಅಧ್ಯಕ್ಷರಾದ ಕಮಲ್‌ಕಿಶೋರ್ ಗುಪ್ತಾ ಮತ್ತು ಎಂಡಿ ಬಾಬುಲಾಲ್ ವರ್ಮಾ ಅವರನ್ನು ದಾಳಿ ವೇಳೆ ಬಂಧಿಸಿತ್ತು.

ಪಿಎಂಎಲ್‌ಎ ಪ್ರಕರಣವು ಮುಂಬೈನ ವಸತಿ ಸಮಾಜದ ಅಭಿವೃದ್ಧಿಯಲ್ಲಿ ಎಸ್‌ಆರ್‌ಎ (ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ) ಯೋಜನೆಯ ಅನುಷ್ಠಾನದಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದೆ. ಕಂಪನಿ ಮತ್ತು ಇಬ್ಬರು ಅಧಿಕಾರಿಗಳು ಯೆಸ್ ಬ್ಯಾಂಕಿನಿಂದ 400 ಕೋಟಿ ರೂ.ಗಳ ಸಾಲದ ಆರೋಪವನ್ನು ಎದುರಿಸುತ್ತಿದ್ದಾರೆ.

ಔರಂಗಾಬಾದ್ (ಮಹಾರಾಷ್ಟ್ರ) ಜಿಲ್ಲಾ ಪೊಲೀಸರ ಎಫ್‌ಐಆರ್ ಅಧ್ಯಯನ ಮಾಡಿದ ನಂತರ ಇಡಿ ಪ್ರಕರಣ ದಾಖಲಿಸಲಾಗಿದ್ದು, ಐಪಿಸಿಯ ವಿವಿಧ ವಿಭಾಗಗಳ ಅಡಿ ಮೋಸ ಮತ್ತು ಅಪರಾಧ ಉಲ್ಲಂಘನೆ ಮುಂತಾದ ಪ್ರಕರಣಗಳಲ್ಲಿ ದಾಖಲಾಗಿದೆ ಎಂದು ಸಂಸ್ಥೆ ಈ ಹಿಂದೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.