ETV Bharat / bharat

ಪಿಎಂ ಮೋದಿಯನ್ನ ಟೀಕಿಸಿದ್ದ ರಾಹುಲ್​ಗೆ ಚುನಾವಣಾ ಆಯೋಗದ ನೋಟಿಸ್: ಕಾಂಗ್ರೆಸ್​ ಹೇಳಿದ್ದೇನು?

EC issues notice to Rahul Gandhi: ಪ್ರಧಾನಿ ಮೋದಿ ವಿರುದ್ಧ ಅಪಶಕುನ ಮತ್ತು ಜೇಬುಗಳ್ಳ ಎಂದು ಟೀಕಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಗುರುವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

Rahul Gandhi
ರಾಹುಲ್ ಗಾಂಧಿ
author img

By ETV Bharat Karnataka Team

Published : Nov 23, 2023, 11:00 PM IST

ನವದೆಹಲಿ: ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಗುರುವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಶನಿವಾರ ಸಂಜೆಯೊಳಗೆ ಪ್ರತಿಕ್ರಿಯೆ ನೀಡುವಂತೆ ರಾಹುಲ್ ಅವರಿಗೆ ಸೂಚನೆ ನೀಡಲಾಗಿದೆ.

ವಿಶ್ವಕಪ್​​ ಫೈನಲ್​ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ 'ಪನೌತಿ' (ಅಪಶಕುನ) ಕಾರಣ ಮತ್ತು 'ಜೇಬ್ಕತ್ರ'​​ (ಜೇಬುಗಳ್ಳರು) ಹಾಗೂ ಸಾಲ ಮನ್ನಾ ಕುರಿತು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ನವೆಂಬರ್ 22ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಇದನ್ನೂ ಓದಿ: 'ಭಾರತ ವಿಶ್ವಕಪ್​ ಗೆಲ್ಲುತ್ತಿತ್ತು, ಅಲ್ಲಿದ್ದ ಕೆಟ್ಟ ಶಕುನದಿಂದ ಸೋತಿತು': ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ ಟೀಕೆ

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಯಾಟು ಎಂಬಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್​ ಗಾಂಧಿ ಕಟು ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ಬಗ್ಗೆ ಅಪಹಾಸ್ಯ ಮತ್ತು ಅಸಹ್ಯಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನೀಡಿದೆ. ಪ್ರಧಾನಿಯನ್ನು 'ಪಿಕ್‌ಪಾಕೆಟರ್'​ಗೆ ಹೋಲಿಸುವುದು ಮತ್ತು 'ಪನೌತಿ' ಪದವನ್ನು ಬಳಸುವುದು ರಾಷ್ಟ್ರೀಯ ರಾಜಕೀಯ ಪಕ್ಷದ ನಾಯಕರೊಬ್ಬರಿಗೆ ತಕ್ಕುದಲ್ಲ ಎಂದು ಬಿಜೆಪಿ ಹೇಳಿದೆ. ಕಳೆದ 9 ವರ್ಷಗಳಲ್ಲಿ 14,00,000 ಕೋಟಿ ರೂ.ಗಳ ಸಾಲ ಮನ್ನಾದ ಆರೋಪವು ಆಧಾರ ರಹಿತವಾಗಿದೆ ಎಂಬುವುದಾಗಿ ಬಿಜೆಪಿ ತಿಳಿಸಿದೆ ಎಂದು ರಾಹುಲ್ ಗಾಂಧಿ ಅವರಿಗೆ ಆಯೋಗ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಇದಲ್ಲದೆ, ರಾಹುಲ್​ ಗಾಂಧಿ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (4), ಐಪಿಸಿಯ ಸೆಕ್ಷನ್ 171ಜಿ, 504, 505 (2), ಮತ್ತು 499 ಮತ್ತು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂಬ ದೂರು ಸ್ವೀಕರಿಸಲಾಗಿದೆ. ಈ ಕುರಿತು ನವೆಂಬರ್ 25ರೊಳಗೆ ವಿವರಣೆ ಸಲ್ಲಿಸಬೇಕು. ಅಷ್ಟರೊಳಗೆ ಯಾವುದೇ ಉತ್ತರವನ್ನು ಸಲ್ಲಿಸದಿದ್ದರೆ ಆಯೋಗವು ಸೂಕ್ತದ ಕ್ರಮ ಕುರಿತು ಪರಿಗಣಿಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 'ಪ್ರಧಾನಿ ಮೋದಿ, ಅದಾನಿ ಜೇಬುಗಳ್ಳರಿದ್ದಂತೆ'; ರಾಹುಲ್​ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯೇ ಕಾರಣ ಎಂಬರ್ಥದಲ್ಲಿ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ನಮ್ಮ ಆಟಗಾರರು ಚೆನ್ನಾಗಿ ಆಡುತ್ತಿದ್ದರು, ಅವರು ವಿಶ್ವಕಪ್ ಗೆಲ್ಲುತ್ತಿದ್ದರು. ಆದರೆ, 'ಪನೌತಿ' (ಅಪಶಕುನ) ನಮ್ಮನ್ನು ಸೋಲುವಂತೆ ಮಾಡಿತು. ಟಿವಿಯವರು ಇದನ್ನು ನಿಮಗೆ (ಜನತೆಗೆ) ಹೇಳುವುದಿಲ್ಲ. ಆದರೆ, ಅದು ಜನರಿಗೆ ಗೊತ್ತಿದೆ ಎಂದಿದ್ದರು.

ರಾಹುಲ್​ ಹೇಳಿಕೆಗೆ ಕಾಂಗ್ರೆಸ್​ ಸಮರ್ಥನೆ: ಮತ್ತೊಂದೆಡೆ, ಪ್ರಧಾನಿ ಮೋದಿ ಕುರಿತು ಉಲ್ಲೇಖಿಸಿ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೇ. ಚುನಾವಣಾ ಆಯೋಗದ ನೋಟಿಸ್‌ಗೆ ನಾವು ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ ಎಂದು ಪಕ್ಷದ ಮಾಧ್ಯಮ ಮುಖ್ಯಸ್ಥ ಪವನ್ ಖೇರಾ 'ಈಟಿವಿ ಭಾರತ್‌'ಗೆ ತಿಳಿಸಿದ್ದಾರೆ.

'ಪನೌತಿ', 'ಜೆಬ್ಕತ್ರ'​​ ಎಂದು ರಾಹುಲ್ ಗಾಂಧಿ ಬಳಸಿರುವುದರಲ್ಲಿ ತಪ್ಪೇನೂ ಇಲ್ಲ. 'ಪನೌತಿ' ಎಂಬ ಪದವು ಜನ ಬಾಯಿಯಿಂದಲೇ ಕೇಳಿಬಂದಿದೆ. ಅದನ್ನೇ ರಾಹುಲ್​ ಗಾಂಧಿ ಯಾರನ್ನೂ ಹೆಸರಿಸದೆ ಪುನರಾವರ್ತಿಸಿದ್ದಾರೆ ಎಂದು ಖೇರಾ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ, ಈ ಹಿಂದೆ ನಮ್ಮ ನಾಯಕರನ್ನು ನಿಂದಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ರಾಹು ಕಾಲ', ಮೋದಿ ಮೋದಿ ಅವರು 'ಮೂರ್ಖೋನ್ ಕಾ ಸರ್ದಾರ್' (ಮೂರ್ಖರ ಸರದಾರ) ಎಂದು ಕೆಟ್ಟ ಪದಗಳನ್ನು ಬಳಸಿದ್ದಾರೆ ಎಂದರು.

ಇದನ್ನೂ ಓದಿ: 'ಪಾಪಿ'ಗಳಿಂದಾಗಿ ಭಾರತ ತಂಡಕ್ಕೆ ವಿಶ್ವಕಪ್​ ಸೋಲಾಗಿದೆ: ಮೋದಿ ಟೀಕಿಸಿದ ಸಿಎಂ ಮಮತಾ ಬ್ಯಾನರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.