ETV Bharat / bharat

ದೆಹಲಿಯಲ್ಲಿ ಮನುಷ್ಯರಿಗೆ ಮಾತ್ರವಲ್ಲ, ಮರಗಳಿಗೂ ಉಚಿತ ಆ್ಯಂಬುಲೆನ್ಸ್​ ಸೇವೆ!

ಥರ್ಮಾಕೋಲ್ ತುಂಬಿದ ನಂತರ ಬಿಳಿ ಸಿಮೆಂಟ್ ಹಾಕಲಾಗುತ್ತದೆ. ಈ ವಿಧಾನ ಅನುಸರಿಸಿದ ನಂತರ ಒಳಗೆ ಮರದ ಕೋಶಗಳು ಉತ್ಪತ್ತಿಯಾಗಿ ಮರದ ಕಾಂಡ ಮತ್ತೆ ಬೆಳೆಯುತ್ತದೆ ಎಂದು ಪಾಲಿಕೆಯ ತೋಟಗಾರಿಕೆ ಇಲಾಖೆಯ ನಿರ್ದೇಶಕ ರಾಘವೇಂದ್ರ ಸಿಂಗ್ ಹೇಳುತ್ತಾರೆ..

ambulance service
ಆಂಬ್ಯುಲೆನ್ಸ್​ ಸೇವೆ
author img

By

Published : Mar 28, 2022, 11:47 AM IST

Updated : Mar 28, 2022, 1:25 PM IST

ನವದೆಹಲಿ : ಮನುಷ್ಯನಿಗೆ ಅನಾರೋಗ್ಯ ಉಂಟಾದಾಗ ತುರ್ತು ಚಿಕಿತ್ಸೆಗಾಗಿ ಸರ್ಕಾರಗಳು ಆ್ಯಂಬುಲೆನ್ಸ್​ ಸೇವೆ ಆರಂಭಿಸಿವೆ. ದೆಹಲಿ ಪೂರ್ವ ಮಹಾನಗರ ಪಾಲಿಕೆ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮರಗಳಿಗೂ ಚಿಕಿತ್ಸೆ ನೀಡಲು ಉಚಿತ ಆ್ಯಂಬುಲೆನ್ಸ್​ ಸೇವೆಯನ್ನು ಆರಂಭಿಸಿದೆ. ಆಶ್ವರ್ಯವಾದರೂ ನಿಜ. ಪೂರ್ವ ದೆಹಲಿ ಮಹಾನಗರ ಪಾಲಿಕೆ ಒಣಗುತ್ತಿರುವ ಮರಗಳಿಗೆ ಚಿಕಿತ್ಸೆ ನೀಡುವ ಹೊಸ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಉಚಿತ ಆ್ಯಂಬುಲೆನ್ಸ್ ಕಾರ್ಯಕ್ರಮ ಜಾರಿ ಮಾಡಿದೆ.

ದೆಹಲಿಯಲ್ಲಿ ಮನುಷ್ಯರಿಗೆ ಮಾತ್ರವಲ್ಲ, ಮರಗಳಿಗೂ ಉಚಿತ ಆ್ಯಂಬುಲೆನ್ಸ್​ ಸೇವೆ!

ದೆಹಲಿಯಲ್ಲಿ ಶುದ್ಧ ಗಾಳಿಯ ಕೊರತೆ ವಿಪರೀತವಾದ ಕಾರಣ ಹೈಕೋರ್ಟ್​ನ ನಿರ್ದೇಶನದ ಮೇರೆಗೆ ಈ ಯೋಜನೆ ರೂಪಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಎಲ್ಲೆಲ್ಲಿ ಮರಗಳು ಒಣಗಿವೆ ಎಂಬುದನ್ನು ಗುರುತಿಸಿ, ಆ ಸ್ಥಳಕ್ಕೆ ತೆರಳಿ ಮರಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಪಾಲಿಕೆಯ ತೋಟಗಾರಿಕಾ ಇಲಾಖೆ ನೌಕರರಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ.

ಚಿಕಿತ್ಸೆಯನ್ನು ಒದಗಿಸುವಾಗ ಮರದ ಟೊಳ್ಳಾದ ಭಾಗವನ್ನು ಮೊದಲು ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ. ಜೀವಕೋಶಗಳ ಸಾವಿನಿಂದ ಒಣಗಿದ ಸಿಪ್ಪೆಯನ್ನು ತೆಗೆಯಲಾಗುತ್ತದೆ. ಬಳಿಕ ಕೀಟನಾಶಕ ಔಷಧವನ್ನು ಸಿಂಪಡಿಸಲಾಗುತ್ತದೆ. ಟೊಳ್ಳಾದ ಅಥವಾ ಹಾನಿಗೊಳಗಾದ ಭಾಗದಲ್ಲಿ ಕಾಕ್ ಮೆಶ್ ಅನ್ನು ಇರಿಸಲಾಗುತ್ತದೆ. ಥರ್ಮಾಕೋಲ್ ಅನ್ನು ತುಂಬಿ ಭರ್ತಿ ಮಾಡಲಾಗುತ್ತಿದೆ.

ಥರ್ಮಾಕೋಲ್ ತುಂಬಿದ ನಂತರ ಬಿಳಿ ಸಿಮೆಂಟ್ ಹಾಕಲಾಗುತ್ತದೆ. ಈ ವಿಧಾನ ಅನುಸರಿಸಿದ ನಂತರ ಒಳಗೆ ಮರದ ಕೋಶಗಳು ಉತ್ಪತ್ತಿಯಾಗಿ ಮರದ ಕಾಂಡ ಮತ್ತೆ ಬೆಳೆಯುತ್ತದೆ ಎಂದು ಪಾಲಿಕೆಯ ತೋಟಗಾರಿಕೆ ಇಲಾಖೆಯ ನಿರ್ದೇಶಕ ರಾಘವೇಂದ್ರ ಸಿಂಗ್ ಹೇಳುತ್ತಾರೆ.

ಓದಿ; ಧಾರ್ಮಿಕ, ಭಾಷಾ ಅಲ್ಪಸಂಖ್ಯಾತರನ್ನು ರಾಜ್ಯಗಳೇ ನಿರ್ಧರಿಸಬಹುದು: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

Last Updated : Mar 28, 2022, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.