ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇಂದು ಬೆಳಗ್ಗೆ ಅರ್ಧಗಂಟೆ ಅವಧಿಯಲ್ಲಿ ಮೂರು ಬಾರಿ ಭೂಕಂಪನದ ಅನುಭವವಾಗಿದೆ. ನಗರದ ಕೆಲವೆಡೆ ಭಯಭೀತರಾದ ಜನರು ಮನೆಯಿಂದ ಹೊರ ಓಡಿ ಬಂದಿದ್ದರು. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ, ಮುಂಜಾನೆ 4:10ಕ್ಕೆ ಮೊದಲ ಬಾರಿ, 4:23ಕ್ಕೆ ಎರಡನೇ ಬಾರಿ ಮತ್ತು 4:25ಕ್ಕೆ ಮೂರನೇ ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 3.1, 3.4 ಮತ್ತು 4.4 ತೀವ್ರತೆ ದಾಖಲಾಗಿದೆ.
ಕಳೆದ ತಿಂಗಳು ರಾಜಸ್ಥಾನದ ಬಿಕಾನೇರ್‌ನಲ್ಲಿ ರಾತ್ರಿ ಸಮಯ 11:36ಕ್ಕೆ 4.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಯಾವುದೇ ಅನಾಹುತಗಳು ನಡೆದಿಲ್ಲ. ಭೂಮಿ ನಡುಗಿದ ಕಾರಣ ಜನರು ತೀವ್ರ ಆತಂಕಕ್ಕೀಡಾಗಿದ್ದರು. ಬಿಕಾನೇರ್ ಆಗಾಗ್ಗೆ ಕಂಪನಕ್ಕೆ ತುತ್ತಾಗಲೇ ಇರುವ ಪ್ರದೇಶ. ಇದೀಗ ಒಂದು ತಿಂಗಳ ಅಂತರದಲ್ಲೇ ರಾಜಸ್ಥಾನದಲ್ಲಿ ಮೂರು ಬಾರಿ ಘಟನೆ ಜರುಗಿದೆ.
-
Rajasthan | An earthquake of Magnitude 4.4 strikes Jaipur
— ANI (@ANI) July 20, 2023 " class="align-text-top noRightClick twitterSection" data="
(CCTV Visuals)
(Video source - locals) pic.twitter.com/MOudTvT8yF
">Rajasthan | An earthquake of Magnitude 4.4 strikes Jaipur
— ANI (@ANI) July 20, 2023
(CCTV Visuals)
(Video source - locals) pic.twitter.com/MOudTvT8yFRajasthan | An earthquake of Magnitude 4.4 strikes Jaipur
— ANI (@ANI) July 20, 2023
(CCTV Visuals)
(Video source - locals) pic.twitter.com/MOudTvT8yF
ಭೂಕಂಪನದ ವಿಡಿಯೋವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಭೂಮಿ ಕಂಪಿಸಿರುವುದನ್ನು ನೋಡಬಹುದು. ಭೂಕಂಪನದ ಬಗ್ಗೆ ಸ್ಥಳೀಯರೊಬ್ಬರು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ, "ಬೆಳಗ್ಗೆ 4:10ಕ್ಕೆ ಭೂಮಿ ಕಂಪಿಸಲು ಆರಂಭಿಸಿತು. ಮನೆಯಲ್ಲಿ ನಿದ್ರಿಸುತ್ತಿದ್ದ ನಾವು ಕುಟುಂಬಸಮೇತರಾಗಿ ಹೊರಗೆ ಓಡಿ ಬಂದೆವು. ಅಕ್ಕಪಕ್ಕದ ನಿವಾಸಿಗಳೂ ಕೂಡಾ ಗಾಬರಿಯಿಂದ ಹೊರ ಬಂದಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ" ಎಂದು ಹೇಳಿದರು.
-
#WATCH | Jaipur: The tremors were strong, and my whole family woke up...no injuries: Vikas, a local, on the earthquake https://t.co/hCFUQuquwV pic.twitter.com/KLGohUkleI
— ANI (@ANI) July 20, 2023 " class="align-text-top noRightClick twitterSection" data="
">#WATCH | Jaipur: The tremors were strong, and my whole family woke up...no injuries: Vikas, a local, on the earthquake https://t.co/hCFUQuquwV pic.twitter.com/KLGohUkleI
— ANI (@ANI) July 20, 2023#WATCH | Jaipur: The tremors were strong, and my whole family woke up...no injuries: Vikas, a local, on the earthquake https://t.co/hCFUQuquwV pic.twitter.com/KLGohUkleI
— ANI (@ANI) July 20, 2023
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಕೂಡ ಟ್ವೀಟ್ ಮಾಡಿದ್ದು, 'ಜೈಪುರದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಮಣಿಪುರದಲ್ಲೂ ಭೂಕಂಪನ: ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲೂ ಇಂದು ಬೆಳಗ್ಗೆ ಭೂಕಂಪಿಸಿದೆ. ಉಖ್ರುಲ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಮೇ ತಿಂಗಳಲ್ಲೂ ಉಖ್ರುಲ್‌ನಲ್ಲಿ ಭೂಕಂಪನದ ಅನುಭವವಾಗಿತ್ತು.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಇಂದು ಬೆಳಿಗ್ಗೆ 5.15 ಕ್ಕೆ 3.5 ತೀವ್ರತೆಯ ಕಂಪನವಾಗಿದೆ. ಮ್ಯಾನ್ಮಾರ್‌ನೊಂದಿಗೆ ಗಡಿ ಹಂಚಿಕೊಳ್ಳುವ ಉಖ್ರುಲ್ ಜಿಲ್ಲೆ ಗುಡ್ಡಗಾಡು ಪ್ರದೇಶ. ಭೂಮೇಲ್ಮೈಯಿಂದ 20 ಕಿ.ಮೀ ಆಳದಲ್ಲಿ ಘಟನೆ ನಡೆದಿದೆ. ಜನರು ಗಾಬರಿಗೊಂಡು ಮನೆಗಳಿಂದ ಹೊರಬಂದಿದ್ದರು.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ನಡುಗಿದ ಭೂಮಿ: 3.4 ತೀವ್ರತೆಯ ಕಂಪನ ದಾಖಲು