ಡೆಹರಾಡೂನ್( ಉತ್ತರಾಖಂಡ್) : ಉತ್ತರ ಭಾರತದಲ್ಲಿ ಭೂಮಿ ನಡುಗುವುದು ಕಾಮನ್ ಎನ್ನುವಂತಾಗಿದೆ. ಮೊನ್ನೆಯಷ್ಟೇ ಜಮ್ಮು- ಕಾಶ್ಮೀರ, ನೋಯ್ಡಾ ಸೇರಿದಂತೆ ಪಾಕ್ ಹಾಗೂ ಅಫ್ಘಾನಿಸ್ತಾನದಲ್ಲಿ ಭೂಕಂಪನ ಸಂಭವಿಸಿತ್ತು.
ಆದರೆ ಯಾವುದೇ ಪ್ರಾಣಾಪಾಯದ ವರದಿಯಾಗಿರಲಿಲ್ಲ. ಇದೀಗ ತಡರಾತ್ರಿ ಉತ್ತರಾ ಖಂಡದ ಉತ್ತರಕಾಶಿಯಲ್ಲಿ 4.1 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ. ಉತ್ತರಕಾಶಿಯ 39 ಕಿ.ಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಕ್ಷಣಕ್ಕೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಆದರೆ ಭೂಮಿ ನಡುಗಿದ್ದರಿಂದ ಜನ ಭಯಭೀತಗೊಂಡು ಮನೆಯಿಂದ ಹೊರ ಬಂದಿದ್ದರು ಎಂದು ವರದಿಯಾಗಿದೆ.
ಇದನ್ನು ಓದಿ:'ಮುಕ್ತವಾಗಿ ರಾಷ್ಟ್ರಧ್ವಜ ಹಾರಿಸುವ ಅವಕಾಶ ನೀಡಿ': ಲೋಕಸಭೆಯಲ್ಲಿ ಸಂಸದೆ ಸುಮಲತಾ ಕಿಡಿ