ETV Bharat / bharat

ಮುಂಬೈ-ಥಾಣೆ ಹೆದ್ದಾರಿಯಲ್ಲಿ ಉರುಳಿಬಿದ್ದ ಟ್ರಕ್: 20 ಟನ್ ಟೊಮ್ಯಾಟೋ ರಸ್ತೆಯಲ್ಲಿ ಚೆಲ್ಲಾಪಿಲ್ಲಿ - ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್‌ವೊಂದು ಉರುಳಿಬಿದ್ದಿದೆ.

Earthmover Clears Tonnes Of Tomatoes Scattered On Mumbai Highway
ರಸ್ತೆಗೆ ಉರುಳಿದ 20 ಟನ್ ಟೊಮ್ಯಾಟೋ: ಥಾಣೆ-ಮುಂಬೈ ಹೈವೇಯಲ್ಲಿ ಸಂಚಾರ ದಟ್ಟಣೆ
author img

By

Published : Jul 16, 2021, 2:51 PM IST

Updated : Jul 16, 2021, 3:42 PM IST

ಮುಂಬೈ(ಮಹಾರಾಷ್ಟ್ರ): ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಉರುಳಿ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಮೂಲಕ ಮುಂಬೈ ಮತ್ತು ಥಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವ್ಯವಸ್ಥೆ ಏರ್ಪಟ್ಟಿದೆ.

ಟ್ರಕ್​ನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 20 ಟನ್​ನಷ್ಟು ಟೊಮ್ಯಾಟೋ ರಸ್ತೆಯಲ್ಲಿ ಬಿದ್ದಿದ್ದು, ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಗುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಜೆಸಿಬಿಗಳಿಂದ ಟೊಮ್ಯಾಟೋ ತೆರವು ಕಾರ್ಯಾಚರಣೆ

ಭಾರಿ ಮಳೆಯ ಕಾರಣದಿಂದ ನಿಯಂತ್ರಣ ತಪ್ಪಿದ ಟ್ರಕ್ ರಸ್ತೆಗೆ ಉರುಳಿ ಅವಘಡ ಸಂಭವಿಸಿದೆ. ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಮಳೆಯ ನಡುವೆಯೇ ಸಿಬ್ಬಂದಿ ಟೊಮ್ಯಾಟೋ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ಕೊಂಕಣ ಮಾರ್ಗ ತಾತ್ಕಾಲಿಕ ಬಂದ್​!

Last Updated : Jul 16, 2021, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.