ETV Bharat / bharat

ದುರ್ಗದಲ್ಲಿ ರೈಲ್ವೆ ಕೆಳ ಸೇತುವೆ ತೆರೆಯುವಂತೆ ನಿವಾಸಿಗಳ ಪ್ರತಿಭಟನೆ : ಪೊಲೀಸರಿಂದ ಲಾಠಿ ಚಾರ್ಜ್ - ಈಟಿವಿ ಭಾರತ ಕನ್ನಡ

ಛತ್ತೀಸ್‌ಗಢದ ದುರ್ಗನ ರಾಯ್‌ಪುರ ನಾಕಾದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಕೆಳ ಸೇತುವೆ ತೆರೆಯುವಂತೆ ಪ್ರತಿಭಟಿಸಲು ಮುಂದಾಗಿದ್ದ ಇಲ್ಲಿನ ನಿವಾಸಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

durg-police-lathicharged-ward-residents-demands-to-open-underbridge
ದುರ್ಗದಲ್ಲಿ ರೈಲ್ವೆ ಕೆಳ ಸೇತುವೆ ತೆರೆಯುವಂತೆ ನಿವಾಸಿಗಳ ಪ್ರತಿಭಟನೆ : ಪೊಲೀಸರಿಂದ ಲಾಠಿ ಚಾರ್ಜ್
author img

By

Published : Sep 15, 2022, 6:26 PM IST

ದುರ್ಗ(ಛತ್ತೀಸ್​ಗಢ) : ರಾಯ್‌ಪುರ ನಾಕಾದಲ್ಲಿನ ರೈಲ್ವೆ ಕೆಳ ಸೇತುವೆ ಉದ್ಘಾಟನೆ ವಿಳಂಬದ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ನಿರ್ಮಾಣ ಹಂತದಲ್ಲಿರುವ ಕೆಳ ಸೇತುವೆಯನ್ನು ತೆರೆಯುವಂತೆ ಒತ್ತಾಯಿಸಿದ್ದು, ಈ ಸಂದರ್ಭ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ.

ದುರ್ಗದಲ್ಲಿ ರೈಲ್ವೆ ಕೆಳ ಸೇತುವೆ ತೆರೆಯುವಂತೆ ನಿವಾಸಿಗಳ ಪ್ರತಿಭಟನೆ : ಪೊಲೀಸರಿಂದ ಲಾಠಿ ಚಾರ್ಜ್

ಈ ಕೆಳಸೇತುವೆ ಶೀಘ್ರವಾಗಿ ತೆರೆಯುವಂತೆ ದುರ್ಗ ನಗರಸಭೆಯ 21ನೇ ವಾರ್ಡ್ ನ ಕೌನ್ಸಿಲರ್ ಅರುಣ್ ಸಿಂಗ್ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರು. ಈ ಕೆಳಸೇತುವೆಯನ್ನು ಉದ್ಘಾಟನೆ ಮಾಡದಿದ್ದರೆ ಸೆ 15ರಂದು ತಾವೇ ಉದ್ಘಾಟಿಸುವುದಾಗಿ ಅರುಣ್ ಸಿಂಗ್ ಎಚ್ಚರಿಕೆ ನೀಡಿದ್ದರು. ಈ ಮೇರೆಗೆ ಅರುಣ್ ಸಿಂಗ್​ ನೇತೃತ್ವದಲ್ಲಿ ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಈ ಸಂದರ್ಭ ಪೊಲೀಸರು ಮತ್ತು ಪುರಸಭಾ ಸದಸ್ಯರು, ಜನರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ. ಬಳಿಕ ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್​ ಟ್ರಾಲಿಗೆ ಟ್ರಕ್​ ಡಿಕ್ಕಿ.. ನಾಲ್ವರ ಸಾವು, 24 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.