ETV Bharat / bharat

ದೆಹಲಿಗೆ ಹೊರಟ ವಿಮಾನ ಟೇಕ್​ ಆಫ್​ ಆದ ಕೆಲ ಹೊತ್ತಲ್ಲೇ ತುರ್ತು ಭೂಸ್ಪರ್ಶ - ತಾಂತ್ರಿಕ ದೋಷ

187 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ 6E-2074 ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.

emergency landing shortly after take off
ತಾಂತ್ರಿಕ ದೋಷದಿಂದ ದೆಹಲಿಗೆ ಹೊರಟಿದ್ದ ವಿಮಾನ ಟೇಕ್​ ಆಫ್​ ಆದ ಕೆಲವೇ ಹೊತ್ತಲ್ಲಿ ತುರ್ತು ಭೂಸ್ಪರ್ಶ
author img

By ETV Bharat Karnataka Team

Published : Jan 4, 2024, 9:04 AM IST

ಪಾಟ್ನಾ: ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದಾಗಿ ಬುಧವಾರ ಮಧ್ಯಾಹ್ನ ಟೇಕ್​ ಆಫ್​ ಆದ ಕೆಲವೇ ಹೊತ್ತಲ್ಲಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 187 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ 6E-2074 ವಿಮಾನ ಜಯ ಪ್ರಕಾಶ್​ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್​ ಆಗಿದೆ ಎಂದು ಅವರು ತಿಳಿಸಿದ್ದಾರೆ.

"ಪಾಟ್ನಾ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.58 ಗಂಟೆಗೆ ಟೇಕ್​ ಆಫ್​ ಆದ ಸ್ವಲ್ಪ ಹೊತ್ತಲ್ಲೇ, ಕೆಲ ತಾಂತ್ರಿಕ ದೋಷವಿರುವುದರಿಂದ ಪ್ರಯಾಣದ ಮಧ್ಯದಲ್ಲೇ ಹಿಂತಿರುವುಗುವಂತೆ ಏರ್​ ಟ್ರಾಫಿಕ್​ ಕಟ್ರೋಲರ್​ (ATC) ಪೈಲಟ್​ಗೆ ತಿಳಿಸಿದ್ದಾರೆ. ಹಾಗಾಗಿ ವಿಮಾನ ಮತ್ತೆ ಪಾಟ್ನಾ ನಿಲ್ದಾಣಕ್ಕೆ ವಾಪಸ್​ ಆಗಿದೆ. ಬಳಿಕ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ" ಎಂದು ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕ ಅಂಚಲ್​ ಪ್ರಕಾಶ್​ ತಿಳಿಸಿದ್ದಾರೆ.

ಬಳಿಕ ಒಂದು ದಿನದ ಮಟ್ಟಿಗೆ 6E-2074 ವಿಮಾನದ ಪ್ರಯಾಣ ರದ್ದು ಮಾಡಲಾಗಿದೆ. ಪ್ರಯಾಣಿಕರಿಗೆ ಮರುಪಾವತಿ ಹಾಗೂ ಪರ್ಯಾಯ ಪ್ರಯಾಣದ ಆಯ್ಕೆಗಳನ್ನು ನೀಡಲಾಗಿದೆ. ಪ್ರೊಟೋಕಾಲ್​ ಪ್ರಕಾರ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ವಿಮಾನ ರದ್ದತಿ; ಪ್ರಯಾಣಿಕನಿಗೆ 1.17 ಲಕ್ಷ ರೂ. ಪರಿಹಾರ ನೀಡಲು ಯುಪಿ ಕೋರ್ಟ್​ನಿಂದ ಏರ್‌ಲೈನ್‌ಗೆ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.