ETV Bharat / bharat

ಕುಡಿದು ಬಂದು ಕುಟುಂಬಕ್ಕೆ ಬೆಂಕಿ ಹಚ್ಚಿದ ದುರುಳ: ಹೆಂಡತಿ ಸಾವು, ಮಕ್ಕಳು ಗಂಭೀರ - ಹೆಂಡತಿಗೆ ಬೆಂಕಿಹಚ್ಚಿ ಕೊಂದ ಪತಿ

ಆರೋಪಿಯು ಗಾಢ ನಿದ್ದೆಯಲ್ಲಿದ್ದ ಇಬ್ಬರು ಮುಗ್ದ ಮಕ್ಕಳು ಹಾಗೂ ಪತ್ನಿಯ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ.

ಕುಡಿದು ಬಂದು ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ
ಕುಡಿದು ಬಂದು ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ
author img

By

Published : Jun 24, 2022, 7:06 PM IST

ಖುಷಿನಗರ (ಉತ್ತರಪ್ರದೇಶ): ಇಲ್ಲಿನ ಖುಶಿನಗರದಲ್ಲಿ ಕ್ರೌರ್ಯದ ಮಿತಿ ಮೀರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿದ್ರಿಸುತ್ತಿದ್ದ ಪತ್ನಿ, ಇಬ್ಬರು ಮಕ್ಕಳ ಮೈಮೇಲೆ ಕುಡಿದ ಮತ್ತಿನಲ್ಲಿದ್ದ ಪತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪತ್ನಿ ಸಾವನ್ನಪ್ಪಿ, ಇಬ್ಬರು ಮಕ್ಕಳು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಮಕ್ಕಳಿಗೆ ಗೋರಖ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ.

ವಿವರ: ಕಪ್ತಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಫರ್ದ್ ಮುಂಡೇರಾ ಗ್ರಾಮದಲ್ಲಿ ಕಳೆದ ತಡರಾತ್ರಿ ಘಟನೆ ನಡೆದಿದೆ. ಆರೋಪಿ ಪತಿ, ಪತ್ನಿ ಜೊತೆ ಜಗಳ ಮಾಡಿದ್ದಾನೆ. ಈ ಸಂದರ್ಭದಲ್ಲಿ ತಾಯಿ ತನ್ನ ಮಕ್ಕಳನ್ನು ಪಕ್ಕದ ಶಾಲೆಯಲ್ಲಿ ಇರಿಸಿದ್ದಳು. ಪತಿಯ ಕೋಪ ತಣ್ಣಗಾದ ನಂತರ ಮಕ್ಕಳನ್ನು ಕರೆದುಕೊಂಡು ಬಂದರಾಯಿತು ಅನ್ನೋದು ಆಕೆಯ ಯೋಚನೆಯಾಗಿತ್ತು.

ಆದ್ರೆ, ಆತ ಮತ್ತಷ್ಟು ಕುದ್ಧನಾಗಿ ಗಾಢ ನಿದ್ದೆಯಲ್ಲಿದ್ದ ಮಕ್ಕಳು ಹಾಗೂ ಪತ್ನಿಯ ಮೇಲೆ ಪೆಟ್ರೋಲ್ ಎರಚಿ, ಬೆಂಕಿ ಹಚ್ಚಿದ್ದಾನೆ. ಉರಿವ ಬೆೆಂಕಿಯಲ್ಲಿ ಬೇಯುತ್ತಿದ್ದ ಪತ್ನಿ ಹಾಗು ಮಕ್ಕಳ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಿದ್ದಾರೆ. ಅಷ್ಟರಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ನೆರೆಹೊರೆಯವರು ಬೆಂಕಿ ನಂದಿಸಿ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಮಹಿಳೆ ಸಾವಿಗೀಡಾದರು.

ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ತಲೆಮರೆಸಿಕೊಂಡಿರುವ ದುರುಳ ಪತಿಗಾಗಿ ಶೋಧ ಆರಂಭಿಸಿದ್ದಾರೆ.

ಇದನ್ನೂ ಓದಿ: ಚಂಡೀಗಢ: ಶಿವಲಿಂಗಕ್ಕೆ ಸಾರಾಯಿ ಸುರಿದು ಕಿಡಿಗೇಡಿಗಳ ವಿಕೃತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.