ಬರ್ಹಾಂಪುರ(ಒಡಿಶಾ): ಹೊಟ್ಟೆಯೊಳಗಿಳಿದ ಪರಮಾತ್ಮ ಆಡಿಸುವ ಆಟ ಅಂತಿಂಥದ್ದಲ್ಲ. ಕೆಲವೊಂದು ಸಂದರ್ಭಗಳಲ್ಲಿ ಮಾಡುವ ಚೇಷ್ಟೆಗಳು ಕೆಲವರ ಪ್ರಾಣಕ್ಕೆ ಕುತ್ತು ತಂದುಬಿಡುತ್ತವೆ. ಅಂತಹೊಂದು ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಗಂಜಾಂ ಜಿಲ್ಲೆಯ ಬುಗುಡಾ ಬ್ಲಾಕ್ನ ಬಲಿಪದಾರ್ನ 45 ವರ್ಷದ ವ್ಯಕ್ತಿಯೋರ್ವ ಗುಜರಾತ್ನ ಸೂರತ್ನಲ್ಲಿ ಕೆಲಸ ಮಾಡ್ತಿದ್ದನು. ಕಳೆದ 10 ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಸೇರಿ ಕಂಠಪೂರ್ತಿ ಮದ್ಯಪಾನ ಮಾಡಿದ್ದಾನೆ. ಈ ವೇಳೆ ಕುಡಿದ ಅಮಲಿನಲ್ಲಿ ಆತನ ಸ್ನೇಹಿತರೆಲ್ಲರೂ ಸೇರಿ ಆತನ ಗುದದ್ವಾರದೊಳಗೆ ಸ್ಟೀಲ್ ಗ್ಲಾಸ್ ಸೇರಿಸಿದ್ದಾರೆ.
ಮರುದಿನ ಬೆಳಗ್ಗೆ ಆ ವ್ಯಕ್ತಿ ನೋವಿನಿಂದ ವಿಪರೀತ ತೊಂದರೆ ಅನುಭವಿಸಿದ್ದಾನೆ. ಆದ್ರೆ ಇದರ ಬಗ್ಗೆ ಯಾರಿಗೂ ಹೇಳಿಕೊಂಡಿಲ್ಲ. ನೋವು ಹೆಚ್ಚಾಗಿದ್ದರಿಂದ ಸೂರತ್ನಿಂದ ಹಳ್ಳಿಗೆ ವಾಪಸ್ ಆಗಿದ್ದಾನೆ. ಗುದದ್ವಾರ ಸಂಪೂರ್ಣವಾಗಿ ಬಂದ್ ಆಗಿರುವ ಕಾರಣ ಮಲವಿಸರ್ಜನೆ ಮಾಡಲು ಸಹ ಸಾಧ್ಯವಾಗಿಲ್ಲ. ಹೀಗಾಗಿ, ಹೊಟ್ಟೆ ದೊಡ್ಡದಾಗಿ ಊದಿಕೊಂಡಿದೆ. ಎಂಕೆಸಿಜಿ ಆಸ್ಪತ್ರೆಗೆ ತೆರಳಿ, ವೈದ್ಯರನ್ನು ಸಂಪರ್ಕಿಸಿದ್ದಾನೆ. ಈ ವೇಳೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾನೆ.
ಇದನ್ನೂ ಓದಿ: ರೋಗಿಯ ಹೊಟ್ಟೆಯಲ್ಲಿ ಸಿಕ್ತು ಸ್ಟೀಲ್ ಗ್ಲಾಸ್; ವೈದ್ಯರಿಗೆ ಶಾಕ್
ಆತನಿಗೆ ಎಕ್ಸ್-ರೇ ನಡೆಸಲಾಗಿದ್ದು, ಈ ವೇಳೆ ಗುದದ್ವಾರದಲ್ಲಿ ಸ್ಟೀಲ್ ಗ್ಲಾಸ್ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಗುದನಾಳದ ಮೂಲಕವೇ ಅದನ್ನು ಹೊರತೆಗೆಯುವ ಯತ್ನ ನಡೆಸಿರುವ ವೈದ್ಯರು, ಅದರಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ.ಚರಣ್ ಪಾಂಡಾ, ಸಹಾಯಕ ಪ್ರಾಧ್ಯಾಪಕ ಡಾ. ಸಂಜಿತ್ ಕುಮಾರ್ ನಾಯಕ್, ಡಾ.ಸುಬ್ರತ್ ಬರಲ್, ಡಾ.ಸತ್ಯಸ್ವರೂಪ್ ಮತ್ತು ಡಾ.ಪ್ರತಿಭಾ ಅವರನ್ನೊಳಗೊಂಡ ವೈದ್ಯರ ಟೀಂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದೀಗ ಆತ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ.
ಕಳೆದ ಕೆಲ ತಿಂಗಳ ಹಿಂದೆ ಉತ್ತರಪ ಪ್ರದೇಶದ ಜೌನ್ಪುರದಲ್ಲೂ ಇಂತಹದೊಂದು ಘಟನೆ ಬೆಳಕಿಗೆ ಬಂದಿತ್ತು. ವ್ಯಕ್ತಿಯೋರ್ವನ ಗುದದ್ವಾರದ ಮೂಲಕ ಗ್ಲಾಸ್ ಒಳಗೆ ಹೋಗಿತ್ತು. ಈ ವೇಳೆ ಸುಮಾರು ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು.