ರಜೌರಿ (ಜಮ್ಮು ಮತ್ತು ಕಾಶ್ಮೀರ): ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಪಂಜಾಬ್ನಲ್ಲಿ ಇತ್ತೀಚೆಗೆ ಪಾಕಿಸ್ತಾನದಿಂದ ಮಾದಕ ವಸ್ತುಗಳ ಹೊತ್ತು ತಂದ ಅನೇಕ ಡ್ರೋನ್‌ಗಳು ಪತ್ತೆಯಾಗಿವೆ. ಇದರ ನಡುವೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಬಂದ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದ್ದು, ಅದನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಇದನ್ನೂ ಓದಿ: ಗಡಿಯಾಚೆಗಿನ ಡ್ರಗ್ಸ್ ದಂಧೆಯ ಕಿಂಗ್ ಪಿನ್ಗಳ ಸೆರೆ: 10 ಕೆಜಿ ಹೆರಾಯಿನ್, 20 ಲಕ್ಷದ ಅಮೆರಿಕನ್ ಡ್ರೋನ್ ಜಪ್ತಿ
ಕಳೆದ ರಾತ್ರಿ ಪಾಕಿಸ್ತಾನದಿಂದ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಜಿಲ್ಲೆಯ ಸುಂದರ್ಬನಿ ಸೆಕ್ಟರ್‌ನ ಬೆರಿ ಪಟ್ಟಾನ್ ಪ್ರದೇಶದಲ್ಲಿ ಭಾರತದ ಭೂಪ್ರದೇಶಕ್ಕೆ ಡ್ರೋನ್ ಪ್ರವೇಶಿಸಿತ್ತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಈ ಡ್ರೋನ್‌ಗೆ ಪ್ಯಾಕೆಟ್‌ವೊಂದನ್ನು ಸಹ ಕಟ್ಟಲಾಗಿತ್ತು. ಇದರಲ್ಲಿ ಎಕೆ 47 ರೈಫಲ್‌ನ ಐದು ಮ್ಯಾಗಜೀನ್‌ಗಳು, 131 ರೌಂಡ್ಸ್, 2 ಲಕ್ಷ ರೂಪಾಯಿ ನಗದು ಮತ್ತು ಇತರ ವಸ್ತುಗಳನ್ನು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಅಲ್ಲದೇ, ಇತರ ಕೆಲವು ಡ್ರೋನ್‌ಗಳು ಸಹ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಅಥವಾ ಅಂತಹ ವಸ್ತುಗಳನ್ನು ಬೀಳಿಸಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಅವುಗಳ ಬಗ್ಗೆ ಶೋಧ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
-
On the intervening night of 12-13 April, alert troops of Indian Army in coordination with J&K Police recovered a drone crossing the Line of Control from Pakistan into Indian territory in Beri Pattan area of Sunderbani sector, District Rajouri (J&K). 131 Rounds of AK-47, 5… pic.twitter.com/5wqJMb1kRG
— ANI (@ANI) April 13, 2023 " class="align-text-top noRightClick twitterSection" data="
">On the intervening night of 12-13 April, alert troops of Indian Army in coordination with J&K Police recovered a drone crossing the Line of Control from Pakistan into Indian territory in Beri Pattan area of Sunderbani sector, District Rajouri (J&K). 131 Rounds of AK-47, 5… pic.twitter.com/5wqJMb1kRG
— ANI (@ANI) April 13, 2023On the intervening night of 12-13 April, alert troops of Indian Army in coordination with J&K Police recovered a drone crossing the Line of Control from Pakistan into Indian territory in Beri Pattan area of Sunderbani sector, District Rajouri (J&K). 131 Rounds of AK-47, 5… pic.twitter.com/5wqJMb1kRG
— ANI (@ANI) April 13, 2023
ಎಲ್ಒಸಿಯಿಂದ ಮೂರ್ನಾಲ್ಕು ಕಿಮೀ ಒಳಗಡೆ ಏಪ್ರಿಲ್ 12 ಮತ್ತು 13ರ ಮಧ್ಯರಾತ್ರಿ ಸಿಯೋಟ್ ಪ್ರದೇಶಗಳಲ್ಲಿ ವೈಮಾನಿಕ ವಸ್ತುಗಳ ಅನುಮಾನಾಸ್ಪದ ಚಲನವಲನ ಕಂಡು ಬಂದವು. ಇದರ ತಕ್ಷಣ ಎಚ್ಚೆತ್ತು ಪೊಲೀಸ್ ಸಮನ್ವಯದಲ್ಲಿ ಭಾರತೀಯ ಸೇನೆ ಬೃಹತ್ ಶೋಧ ಕಾರ್ಯಾಚರಣೆ ಶುರು ಮಾಡಿತ್ತು. ಈ ಪ್ರದೇಶದ ಹಲವು ಗ್ರಾಮಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಮೂಲಗಳು ಹೇಳಿವೆ.
ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು, ನಗದು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯು ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ಎರಡೂ ಪ್ರದೇಶಗಳಲ್ಲಿ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಇಂತಹ ವಸ್ತುಗಳನ್ನು ಪದೇ ಪದೆ ಭಾರತದ ಭೂಪ್ರದೇಶದಲ್ಲಿ ಬಿಡುವ ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ಪಂಜಾಬ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಅಕ್ರಮ ಮಾದಕ ವಸ್ತು ಸಾಗಣೆ ಯತ್ನ ಮುಂದುವರೆದಿದೆ. ಈ ಹಿಂದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಹೆರಾಯಿನ್ ಸೇರಿ ಮಾದಕ ವಸ್ತುಗಳನ್ನು ಹೊತ್ತ ಬರುತ್ತಿದ್ದ ಹೈಟೆಕ್ ಡ್ರೋನ್ಗಳನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ ಹಲವು ಪ್ರಕರಣಗಳು ವರದಿಯಾಗಿದೆ.
ಇದನ್ನೂ ಓದಿ: ಇಂಡೋ - ಪಾಕ್ ಗಡಿಯಿಂದ 2 ಕಿಮೀ ದೂರದಲ್ಲಿ ಹೈಟೆಕ್ ಡ್ರೋನ್ ಹೊಡೆದುರುಳಿಸಿದ ಪೊಲೀಸರು: 5 ಕೆಜಿ ಹೆರಾಯಿನ್ ಜಪ್ತಿ