ನವದೆಹಲಿ: ನಾವು ಭಾರತವನ್ನು ಮಹಾಶಕ್ತಿಯನ್ನಾಗಿ ಮಾಡಲು ಬಯಸುತ್ತೇವೆ ಮತ್ತು ಈ ಪ್ರಯತ್ನದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಪಾತ್ರ ಮುಖ್ಯವಾಗಿರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಡಿಆರ್‌ಡಿಒ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ಟ್ ತೇಜಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳು ಸೇರಿದಂತೆ ಹಲವು ಯಶಸ್ವಿ ರಕ್ಷಣಾ ವ್ಯವಸ್ಥೆಗಳನ್ನು ಡಿಆರ್‌ಡಿಒ ಪರೀಕ್ಷಿಸಿದೆ. ಇದು ದೇಶದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಿದೆ. "ನಾವು ಭಾರತವನ್ನು ಮಹಾಶಕ್ತಿಯನ್ನಾಗಿ ಮಾಡಲು ಬಯಸುತ್ತೇವೆ ಮತ್ತು ನೀವು (ವಿಜ್ಞಾನಿಗಳು) ಇದರಲ್ಲಿ ಪ್ರಮುಖ ಪಾತ್ರವಹಿಸಬೇಕು" ಎಂದರು.
ಓದಿ:ಯುಪಿಯಲ್ಲಿ ಆರು ರೈತ ಮುಖಂಡರಿಗೆ 50 ಲಕ್ಷ ರೂ. ಬಾಂಡ್ ನೀಡುವಂತೆ ನೋಟಿಸ್
ಚೀನಾದೊಂದಿಗಿನ ಭಿನ್ನಾಭಿಪ್ರಾಯದ ಮಧ್ಯೆ, ರಾಜನಾಥ್ ಸಿಂಗ್ "ಈ ಸಮಯದಲ್ಲಿ ನಮ್ಮ (ಉತ್ತರ ಮತ್ತು ಪಶ್ಚಿಮ) ಗಡಿಗಳಲ್ಲಿ ಅನೇಕ ಸವಾಲುಗಳು ಇದ್ದು, ನಮ್ಮ ಸಂಪನ್ಮೂಲಗಳಿಗೆ ಸಹಾ ಸವಾಲನ್ನು ಒಡ್ಡುತ್ತವೆ. ನಮ್ಮ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗಡಿಯಲ್ಲಿ ಸಂಪನ್ಮೂಲಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ" ಎಂದರು.
ಡಿಆರ್‌ಡಿಒ, ಎಲ್ಲ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಮತ್ತು ಸಶಸ್ತ್ರ ಪಡೆಗಳು ಸ್ವಾವಲಂಬಿಗಳಾಗಲು ಸಹಾಯ ಮಾಡಿದೆ. ದೇಶವು ದೇಶೀಯವಾಗಿ ಅಭಿವೃದ್ಧಿ ಹೊಂದಿದ ಶಸ್ತ್ರಾಸ್ತ್ರಗಳೊಂದಿಗೆ ಮುಂದಿನ ಯುದ್ಧವನ್ನು ಗೆಲ್ಲುತ್ತದೆ ಎಂದು ಅವರು ಹೇಳಿದರು.